Smart Study: ನಿಮ್ಮ ಮಕ್ಕಳಿಗೆ ಈ ರೀತಿ ಅಭ್ಯಾಸ ಮಾಡಿಸಿ, ಖಂಡಿತ ಒಳ್ಳೆ ರಿಸಲ್ಟ್ ಬರುತ್ತೆ
ಬೆಳಿಗ್ಗೆ ಬೇಗ ಎದ್ದು ಓದಬೇಕು ಎಂದು ಎಷ್ಟೊ ಜನರು ಹೇಳುತ್ತಾರೆ. ಬೆಳಿಗ್ಗೆ ಎದ್ದು ಓದಬೇಕು ಸರಿ. ಆದರೆ ನಿಮಗೆ ನಿದ್ರೆ ಬರುತ್ತಿದ್ದರೂ ಸಹ ತೂಕಡಿಸುತ್ತಾ ಓದುವುದು ತಪ್ಪು ನಿಮಗೆ ಯಾವ ಸಮಯ ಅನುಕೂಲವೋ ಆ ಸಮಯದಲ್ಲೇ ಓದಿ
ಅತ್ಯುತ್ತಮ ಅಂಕ ಗಳಿಸುವ ಏಕೈಕ ಮಾರ್ಗವೆಂದರೆ ಕಷ್ಟಪಟ್ಟು ಅಧ್ಯಯನ ಮಾಡುವುದು ಎಂದು ಅನೇಕ ವಿದ್ಯಾರ್ಥಿಗಳು ಭಾವಿಸುತ್ತಾರೆ. ಅವರು ದಿನವಿಡೀ ಪುಸ್ತಕ ಓದುತ್ತಿರುತ್ತಾರೆ. ಆದರೆ ಆ ರೀತಿ ಮಾಡುವುದರ ಬದಲು ಇಲ್ಲಿ ನೀಡಿರುವ ಟಿಪ್ಸ್ ಪಾಲಿಸಿ.
2/ 7
ಬೆಳಿಗ್ಗೆ ಬೇಗ ಎದ್ದು ಓದಬೇಕು ಎಂದು ಎಷ್ಟೊ ಜನರು ಹೇಳುತ್ತಾರೆ. ಬೆಳಿಗ್ಗೆ ಎದ್ದು ಓದಬೇಕು ಸರಿ. ಆದರೆ ನಿಮಗೆ ನಿದ್ರೆ ಬರುತ್ತಿದ್ದರೂ ಸಹ ತೂಕಡಿಸುತ್ತಾ ಓದುವುದು ತಪ್ಪು ನಿಮಗೆ ಯಾವ ಸಮಯ ಅನುಕೂಲವೋ ಆ ಸಮಯದಲ್ಲೇ ಓದಿ.
3/ 7
ಸ್ಮಾರ್ಟ್ ಸ್ಟಡಿ ಮಾಡುವುದು ಯಾವಾಗಲೂ ಮುಖ್ಯವಾಗುತ್ತದೆ. ಎಲ್ಲವನ್ನೂ ಓದಿ ಮುಗಿಸಬೇಕು ಎಂಬ ದಾವಂತದಲ್ಲಿ ನೀವು ಓದಬೇಡಿ. ಅದರ ಬದಲಾಗಿ ಯಾವುದನ್ನು ಓದಿದರೆ ಅಂಕ ಬರುತ್ತದೆ ಎಂಬುದನ್ನು ಆಯ್ಕೆ ಮಾಡಿ ಓದಿ.
4/ 7
ಓದಿನ ಮಧ್ಯ ಆಗಾಗಾ ವಿರಾಮ ಪಡೆಯುತ್ತಿರಿ. ಹಾಗಾದಾಗ ನಿಮಗೆ ಹಲವು ರೀತಿಯಲ್ಲಿ ಅನುಕೂಲವಾಗುತ್ತದೆ. ವೇಳಾಪಟ್ಟಿ ಸಿದ್ಧಪಡಿಸುವುದು. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವುದು ಇದೂ ಸಹ ಮುಖ್ಯವಾಗುತ್ತದೆ.
5/ 7
ನೀವು ಹತ್ತು ಪುಸ್ತಕಗಳನ್ನು ಓದುವುದಕ್ಕಿಂತ ಮೊದಲು ಒಂದೇ ಪುಸ್ತಕವನ್ನು ಹತ್ತು ಬಾರಿ ಓದುವುದು ಮುಖ್ಯ. ಯಾವ ಪ್ರಶ್ನೆ ಪರೀಕ್ಷೆಯಲ್ಲಿ ಬರಬಹುದು ಎಂಬುದನ್ನು ಮೊದಲು ಗುರುತಿಸಿ ಆಮೇಲೆ ನೀವು ಅಭ್ಯಾಸ ಮಾಡಿದರೆ ಒಳ್ಳೆ ಅಂಕ ದೊರೆಯುತ್ತದೆ.
6/ 7
ನೀವು ಯಾವುದಾದರೂ ಒಂದು ನಿರ್ಧಿಷ್ಟ ಗುರಿ ಹೊಂದಿ ಅಭ್ಯಾಸ ಮಾಡಬೇಕಾಗುತ್ತದೆ. ಯಾರ ಬಳಿಯಾದರೂ ಅಭ್ಯಾಸ ಹೇಗೆ ಮಾಡಬೇಕು ಎಂದು ಮೊದಲು ತಿಳಿಯಿರಿ ಅಥವಾ ನಿಮ್ಮ ಅಕ್ಕ ಅಥವಾ ಅಣ್ಣಂದಿರಿದ್ದರೆ ಅವರ ಸಲಹೆ ಶಿಕ್ಷಕರ ಸಲಹೆಗಿಂತ ಉತ್ತಮವಾಗಿರುತ್ತದೆ.
7/ 7
ನೀವು ಹಾಡನ್ನು ಆಲಿಸುತ್ತಾ ಅಭ್ಯಾಸ ಮಾಡಿ ನೋಡಿ. ಕೆಲವರಿಗೆ ಇದು ಸಹಾಯವಾಗುತ್ತದೆ. ಹಲವಾರು ಜನ ಈ ರೀತಿ ಪ್ರಯೋಗ ಮಾಡುತ್ತಾರೆ. ಸರಿಯಾಗಿ ಒಂದು ರೀತಿಯ ಪರಿಸರ ಸಿದ್ಧಮಾಡಿಕೊಳ್ಳಿ ನಂತರ ಅಭ್ಯಾಸ ಆರಂಭಿಸಿ.