Science Formula: ಸೈನ್ಸ್ ಫಾರ್ಮುಲಾ ನೆನಪಿನಲ್ಲಿಡಲು ಒದ್ದಾಡುತ್ತಿದ್ದೀರಾ? ಹಾಗಾದರೆ ಇದನ್ನು ಫಾಲೋ ಮಾಡಿ
ಪರೀಕ್ಷಾ ದಿನಗಳು ಹತ್ತಿರಬರುತ್ತಿದ್ದಂತೆ ಹಲವಾರು ವಿದ್ಯಾರ್ಥಿಗಳು ಭಯಕ್ಕೊಳಪಡುತ್ತಾರೆ. ಯಾಕೆಂದರೆ ಅವರಿಗೆ ಓದಿದ ವಿಷಯಗಳು ನೆನಪಿನಲ್ಲಿರುವುದಿಲ್ಲ ಎಂದೆನಿಸುತ್ತದೆ. ಅಂತವರು ಈ ಟಿಪ್ಸ್ ಫಾಲೋ ಮಾಡಿ.
ನೀವು ಸೂತ್ರಗಳನ್ನು ನೆನಪಿನಲ್ಲಿಡಲು ಕಷ್ಟಪಡುತ್ತಿದ್ದರೆ ಇಲ್ಲಿ ನೀಡಿರುವ ಕೆಲವು ಟಿಪ್ಸ್ಗಳನ್ನು ಫಾಲೋ ಮಾಡಿ. ಆಗ ನಿಮ್ಮ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ನೀವು ಆದಷ್ಟು ಸೂತ್ರಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
2/ 8
ಪ್ರಮುಖ ಸೂತ್ರಗಳ ಪಟ್ಟಿ ಮಾಡಿ ಅದನ್ನು ಗೋಡೆಗೆ ಅಂಟಿಸಿಕೊಳ್ಳಿ. ಆಗಾಗ ಅದನ್ನು ಗಮನಿಸುತ್ತಾ ಇರುವುದರಿಂದ ನೀವು ಸೂತ್ರವನ್ನು ಬಹಳ ಬೇಗ ನೆನಪಿನಲ್ಲಿಡಬಹುದು. ಸೂತ್ರಗಳನ್ನು ಅನ್ವಯಿಸುತ್ತಾ ಹೋಗಿ.
3/ 8
ಪದೇ ಪದೇ ಸೂತ್ರಗಳನ್ನು ಹಾಳೆಯ ಮೇಲೆ ಬರೆದು ಅದನ್ನು ಓದಿ ಮತ್ತು ಓದುತ್ತಾ ಮತ್ತೆ ಮತ್ತೆ ಬರೆಯಿರಿ ಹೀಗೆ ಮಾಡುವುದರಿಂದ ನಿಮ್ಮ ನೆನಪಿನಲ್ಲಿ ಸೂತ್ರಗಳು ಉಳಿಯುತ್ತವೆ. ಯಾವಾಗಲೂ ಓದುವುದಕ್ಕಿಂತ ಹೆಚ್ಚಿನದಾಗಿ ಬರೆಯುವುದರಿಂದ ನೀವು ನೆನಪಿನಲ್ಲಿಡಬಹುದು.
4/ 8
ಕೆಲವೊಮ್ಮೆ ಕಂಠಪಾಠ ಮಾಡುವುದೂ ಸಹ ಪ್ರಮುಖವಾಗಿರುತ್ತದೆ. ಪ್ರಾಯೋಗಿಕ ಪ್ರಯೋಯ ಮಾಡುತ್ತಾ ಸೂತ್ರದ ಹಿಂದಿನ ಗುಟ್ಟನ್ನು ಅರ್ಥ ಮಾಡಿಕೊಳ್ಳಿ.
5/ 8
ನೀವು ನಿದ್ರೆ ಮಾಡುವುದಕ್ಕಿಂತ ಮುಂಚಿತವಾಗಿ ಒಮ್ಮೆ ಓದಿಕೊಳ್ಳಿ. ಆಗ ನೆನಪಿನಲ್ಲಿರುವ ಸಾಧ್ಯತೆ ಹೆಚ್ಚಿರುತ್ತದೆ. ಮತ್ತು ಆಗಾಗ ಒಂದು ಚಿಕ್ಕ ಚೀಟಿಯಲ್ಲಿ ಬರೆದಿಟ್ಟುಕೊಂಡ ಸೂತ್ರಗಳನ್ನು ಗಮನಿಸುತ್ತಿರಬೇಕು.
6/ 8
ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಚಿಂತೆ ಮಾಡುತ್ತಾ ಕೂರಬೇಡಿ. ನಿಮಗೆ ಕಷ್ಟ ಎನಿಸುವ ವಿಷಯವನ್ನು ಪ್ರೀತಿಸಲು ಆರಂಭಿಸಿ ಏಕೆಂದರೆ ನಿಮಗೆ ಯಾವ ವಿಷಯದ ಮೇಲೆ ಪ್ರೀತಿ ಮತ್ತು ಆಸಕ್ತಿ ಇರುತ್ತದೆಯೋ ಅದನ್ನು ನೀವು ಬೇಗ ಕಲಿಯುತ್ತೀರಿ.
7/ 8
ಗಣಿತದ ಸೂತ್ರಕ್ಕಿಂತ ವಿಜ್ಷಾನದ ಸೂತ್ರಗಳು ತುಂಬಾ ಭಿನ್ನವಾಗಿರುತ್ತದೆ. ಆದ್ದರಿಂದ ನೀವು ಇದನ್ನು ಚಿತ್ರ ಬಿಡಿಸುವುದರ ಮೂಲಕವೂ ಸಹ ಕಲಿಯಬಹುದು. ಚಿತ್ರ ಬಿಡಿಸುತ್ತಾ ಕಲಿತರೆ ಆ ವಿಷಯ ಬಹು ಬೇಗ ನೆನಪಿನಲ್ಲಿರುತ್ತದೆ.
8/ 8
ಈ ಮೇಲಿನ ಎಲ್ಲಾ ಟಿಪ್ಸ್ ಫಾಲೋ ಮಾಡಿದರೆ ನೀವು ಖಂಡಿತವಾಗಿ ಮತ್ತು ಸುಲಭವಾಗಿ ಸೂತ್ರಗಳನ್ನು ನೆನಪಿನಲ್ಲಿಡಲು ಸಾಧ್ಯವಾಗುತ್ತದೆ. ಪರೀಕ್ಷೆ ಹತ್ತಿರಬರುತ್ತಿದ್ದಂತೆ ಈ ಕ್ರಮವನ್ನು ಅನುಸರಿಸಿ.