Competitive Exams: ಮನೆಯಲ್ಲೇ ಕೂತು ಈ ರೀತಿಯಾಗಿ ಪರೀಕ್ಷಾ ಸಿದ್ಧತೆ ನಡೆಸಿ, ಹೆಚ್ಚಿನ ಅಂಕ ಗಳಿಸಿ
ದಿನ ಪತ್ರಿಕೆ ಓದಿ. ರಾಷ್ಟ್ರೀಯ ಮಟ್ಟದ ಪರೀಕ್ಷೆಗೆ ತಯಾರಿ ಮಾಡುವುದಾದರೆ, ರಾಷ್ಟ್ರ ಮಟ್ಟದ ದಿನ ಪತ್ರಿಕೆ ಓದಿ. ಸಾಮಾನ್ಯ ಜ್ಞಾನದೊಂದಿಗೆ ಇಂಗ್ಲೀಷ್ ಭಾಷಾ ಪ್ರವೀಣತೆಯೂ ಬರುತ್ತದೆ. ಹಾಗಾದಾಗ ನಿಮಗೆ ಈ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗುತ್ತದೆ.
ಎಷ್ಟೋಜನರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಬೇಕು ಉತ್ತಮ ಅಂಕ ಗಳಿಸಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ಇತತರು ಮಾಡುತ್ತಿದ್ದಾರೆ ಎಂದು ತಾವೂ ಸಹ ಬರೆಯಲು ಯೋಚಿಸುತ್ತಿರುತ್ತಾರೆ. ಅಂತವರಿಗೆ ಇಲ್ಲಿದೆ ಟಿಪ್ಸ್.
2/ 8
ನಿಮ್ಮ ಗುರಿ ಸ್ಪಷ್ಟ ಇರಲಿ. ಬ್ಯಾಂಕಿಂಗ್, ಪಿ ಎಸ್ ಸಿ , ಎಸ್ ಎಸ್ ಸಿ , ಯುಪಿ ಎಸ್ಸಿ ಹೀಗೆ ಹಲವು ಪರೀಕ್ಷೆಗಳಿವೆ . ಬ್ಯಾಂಕಿಂಗ್ ಪರೀಕ್ಷೆಗೆ ಗಣಿತ, ಇಂಗ್ಲೀಷಿಗೆ ಆದ್ಯತೆ. SSC ಯಲ್ಲಿ ಸಾಮಾನ್ಯ ಜ್ಞಾನಕ್ಕೆ ಹೆಚ್ಚಿನ ಮಹತ್ವ.ಎಲ್ಲಾ ಪರೀಕ್ಷೆಗಳಿಗೆ ಅದರದ್ದೇ ಆದ ಸಿಲೆಬಸ್ ಇರುತ್ತದೆ.
3/ 8
ಸರಿಯಾಗಿ ಅಭ್ಯಾಸ ಮಾಡಿದರಷ್ಟೇ ನಿಮ್ಮ ಸಿಲೆಕ್ಷನ್ ಸಾಧ್ಯ. ಹಾಗಾಗಿ ಪರೀಕ್ಷೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ .ಲೆಕ್ಕ ಕಷ್ಟವಾಗುವವರಿಗೆ ಬ್ಯಾಂಕ್ ಪರೀಕ್ಷೆ ಕಷ್ಟ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪರೀಕ್ಷೆ ಆಯ್ಕೆ ಮಾಡಿ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಬಿಡಿಸಿ.
4/ 8
ಯಾರೋ ಹೇಳುತ್ತಾರೆಂದು ಪರೀಕ್ಷೆ ಬರೆಯಬೇಡಿ. ನಿಮಗೆ ಆಸಕ್ತಿ ಇದ್ದರೆ ಮಾತ್ರ ಬರೆಯಿರಿ. ಸ್ವರ್ಧಾತ್ಮಕ ಪರೀಕ್ಷೆ ತುಂಬಾ ಸಮಯ ತೆಗೆದು ಕೊಳ್ಳುತ್ತದೆ. ಒಂದೇ ಪರೀಕ್ಷೆಗೆ ಹಲವು ವರ್ಷಗಳನ್ನು ವ್ಯರ್ಥ ಮಾಡಬೇಡಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಫೇಲ್ ಆದರೂ ಹಲವು ಮಾರ್ಗಗಳಿವೆ.
5/ 8
ಸಿಲೆಬಸ್ ಅರಿವಿರಲಿ. ಸಮುದ್ರದಷ್ಟು ಮೆಟೀರಿಯಲ್ ಲಭ್ಯ ಇರುವ ಈ ಕಾಲದಲ್ಲಿ ಎಲ್ಲವನ್ನು ಓದಿ ಸಮಯ ಹಾಳು ಮಾಡಬೇಡಿ. ನೆನಪಿಡಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಪುಸ್ತಕಗಳಿಂದ ಏನೂ ಪ್ರಯೋಜನವಿಲ್ಲ. ಬೇಸಿಕ್ಸ್ ಸರಿ ಇರಲಿ. ಹತ್ತು ಪುಸ್ತಕ ಓದುದಕ್ಕಿಂತ ಒಂದೇ ಪುಸ್ತಕ ಹತ್ತು ಬಾರಿ ಓದಿ.
6/ 8
ಮನೆಯಲ್ಲಿದ್ದು ಕಲಿಯಲು ಕಷ್ಟವಾದರೆ ಸಮೀಪದ ಗ್ರಂಥಾಲಯ ಅಥವಾ ಶಾಂತ ವಾತಾವರಣ ಇರುವ ಸ್ಥಳವನ್ನು ಆಯ್ದುಕೊಳ್ಳಿ. ನಿಮ್ಮ ಮನೆಯಲ್ಲಿ ನಿಮ್ಮನ್ನು ಯಾರಾದರು ಬೇರೆ ಕೆಲಸಕ್ಕೆ ಕರೆಯಬಹುದು.
7/ 8
ದಿನ ಪತ್ರಿಕೆ ಓದಿ. ರಾಷ್ಟ್ರೀಯ ಮಟ್ಟದ ಪರೀಕ್ಷೆಗೆ ತಯಾರಿ ಮಾಡುವುದಾದರೆ, ರಾಷ್ಟ್ರ ಮಟ್ಟದ ದಿನ ಪತ್ರಿಕೆ ಓದಿ. ಸಾಮಾನ್ಯ ಜ್ಞಾನದೊಂದಿಗೆ ಇಂಗ್ಲೀಷ್ ಭಾಷಾ ಪ್ರವೀಣತೆಯೂ ಬರುತ್ತದೆ. ಹಾಗಾದಾಗ ನಿಮಗೆ ಈ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗುತ್ತದೆ.
8/ 8
ಮನೆಯಲ್ಲಿ ಸಮಯ ಹಾಳು ಮಾಡಲು ತುಂಬಾ ಅವಕಾಶಗಳಿವೆ. ಈಗ ಸ್ವರ್ಥೆ ತುಂಬಾ ಹೆಚ್ಚಿದೆ. ನೀವು ಸಮಯ ಹಾಳು ಮಾಡುವಾಗ ಯಾವುದೋ ವಿದ್ಯಾರ್ಥಿ ನೀವು ಮಾಡಬೇಕು ಎಂದ ಕೆಲಸವನ್ನು ಈಗಾಗಲೇ ಮಾಡಿ ಮುಗಿಸಿರುತ್ತಾನೆ.