Education Loan: ನಿಮ್ಮ ಮಕ್ಕಳ ಭವಿಷ್ಯಕ್ಕೆ ಈ ರೀತಿ ಹಣಕಾಸಿನ ಯೋಜನೆ ರೂಪಿಸಿ
ನೀವು ಸರಿಯಾದ ನಿರ್ಧಾರ ಕೈಗೊಂಡಿದ್ದೀರಾ? ಇಲ್ಲವಾ? ಎಂದು ಖಚಿತಪಡಿಸಿಕೊಳ್ಳಲು ಪ್ರತಿ ವರ್ಷಕ್ಕೊಮ್ಮೆಯಾದರೂ ನಿಮ್ಮ ಮಕ್ಕಳ ಶಿಕ್ಷಣದ ಗುರಿಗಳನ್ನು ಮತ್ತು ಹಣಕಾಸಿನ ಯೋಜನೆಯನ್ನು ಮರುಮೌಲ್ಯಮಾಪನ ಮಾಡಿ.
ಕೊರೊನಾದಿಂದ ಅತಿ ಹೆಚ್ಚು ಸಮಸ್ಯೆಯ ಸುಳಿಗೆ ಸಿಲುಕಿದ್ದು ಶಿಕ್ಷಣ ಕ್ಷೇತ್ರ. ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವೇ ಕಮರಿ ಹೋಗುವ ಅಪಾಯ ಕೋವಿಡ್-19ರಿಂದ ಎದುರಾಗಿತ್ತು. ಆದರೆ ಆನ್ಲೈನ್ ಶಿಕ್ಷಣದಿಂದ ನಿಧಾನವಾಗಿ ಶಿಕ್ಷಣ ಹೊಸ ಮಗ್ಗುಲಿಗೆ ತಿರುಗಿತು.
2/ 8
ಕೋವಿಡ್ ಮರೆಯಾಗಿ ಶಿಕ್ಷಣ ಕ್ಷೇತ್ರ ಚಿಗುರುವಾಗಲೇ ಮತ್ತೆ ಆರ್ಥಿಕ ಹಿಂಜರಿತದ ಭೂತ ಎದುರುಗೊಂಡಿದೆ. ಹೀಗಾಗಿ ನಿಮ್ಮ ಮಗುವಿನ ಭವಿಷ್ಯದ ಶಿಕ್ಷಣದ ಯೋಜನೆ ರೂಪಿಸುವಾಗಿ ಎಚ್ಚರ ವಹಿಸಬೇಕಿದೆ.
3/ 8
ನಿಮ್ಮ ಮಗುವಿನ ಶಿಕ್ಷಣದ ಕುರಿತು ಹೂಡಿಕೆ ಮಾಡುವಾಗ ಆ ಹಣಕ್ಕೆ ತಕ್ಕ ಶಿಕ್ಷಣ ದೊರೆಯುತ್ತದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ.
4/ 8
ನಿಮ್ಮ ಮಕಳು ಏನನ್ನು ಕಲಿಯಬೇಕು? ಆ ಕೋರ್ಸ್ಗೆ ಭವಿಷ್ಯದಲ್ಲಿ ಬೇಡಿಕೆ ಹೇಗಿರಲಿದೆ? ಇಂತಹ ಹಲವು ವಿಷಯಗಳನ್ನು ಆಗಾಗ ಮತ್ತೆ ಮತ್ತೆ ಪರಿಶೀಲಿಸಿಕೊಳ್ಳಿ.
5/ 8
ನೀವು ಸರಿಯಾದ ನಿರ್ಧಾರ ಕೈಗೊಂಡಿದ್ದೀರಾ? ಇಲ್ಲವಾ? ಎಂದು ಖಚಿತಪಡಿಸಿಕೊಳ್ಳಲು ಪ್ರತಿ ವರ್ಷಕ್ಕೊಮ್ಮೆಯಾದರೂ ನಿಮ್ಮ ಮಕ್ಕಳ ಶಿಕ್ಷಣದ ಗುರಿಗಳನ್ನು ಮತ್ತು ಹಣಕಾಸಿನ ಯೋಜನೆಯನ್ನು ಮರುಮೌಲ್ಯಮಾಪನ ಮಾಡಿ.
6/ 8
ಆಗಾಗ ಶಿಕ್ಷಣ ಕ್ಷೇತ್ರದ ಪರಿಣಿತರ ಜೊತೆ ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಗಮನಿಸಿ. ದೊಡ್ಡ ದೊಡ್ಡ ಕಾಲೇಜುಗಳಲ್ಲಿ ಆರಂಭವಾಗುವ ಕೋರ್ಸ್ಗಳನ್ನು ಪರಿಶೀಲಿಸಿ.
7/ 8
ನಿಮ್ಮ ಮಗುವಿಗೆ ದುಬಾರಿ ಶಿಕ್ಷಣ ಕೊಡುವುದಕ್ಕಿಂತ ಉತ್ತಮ ಮತ್ತು ಭವಿಷ್ಯದಲ್ಲಿ ಲಾಭ ಆಗಬಲ್ಲ ಶಿಕ್ಷಣ ಕೊಡಿಸುವದರತ್ತ ಗಮನಹರಿಸಿ.
8/ 8
ಅಲ್ಲದೇ ಭವಿಷ್ಯದಲ್ಲಿ ಇನ್ನಷ್ಟು ವಿಸ್ತರಿಸಬಹುದಾದ ಕ್ಷೇತ್ರಗಳನ್ನು ಪರಿಗಣಿಸಿ, ಜೊತೆಗೆ ನಿಮ್ಮ ಮಗುವಿನ ಆಸಕ್ತಿ ಯಾವ ವಿಷಯದಲ್ಲಿದೆ ಎಂಬುದನ್ನು ಗಮನಿಸಿಯೇ ಕೋರ್ಸ್ಗಳನ್ನು ಆಯ್ಕೆ ಮಾಡಿ. ಕೆಲವು ಕೋರ್ಸ್ಗಳು ಕಡಿಮೆ ಹಣದಲ್ಲಿ ಅತ್ಯುತ್ತಮ ಭವಿಷ್ಯ ರೂಪಿಸಬಲ್ಲವು ಎಂಬುದನ್ನೂ ನೆನಪಿಡಿ!