SSLC Time Table: ನಿಮ್ಮ ವೇಳಾಪಟ್ಟಿಯನ್ನು ಹೀಗೆ ನೀವೇ ಸಿದ್ಧಪಡಿಸಿಕೊಳ್ಳಿ
ಅನೇಕ ಪ್ರಶ್ನೆಗಳು ಪುನರಾವರ್ತಿತವಾಗಿರುವುದರಿಂದ ಗಣಿತ ವಿಜ್ಞಾನದಂತಹ ವಿಷಯಗಳ ಹಿಂದಿನ ವರ್ಷದ ಪ್ರಶ್ನೆಗಳನ್ನು ಡಿಸೆಂಬರ್ನಿಂದಲೇ ಓದಿಕೊಳ್ಳಿ ಇದಕ್ಕೆ ಒಂದು ವಾರದ ವೇಳಾಪಟ್ಟಿ ಮಾಡಿ ಒಂದೊಂದು ವಿಷಯಕ್ಕೆ ಒಂದೊಂದು ದಿನ ಮೀಸಲಿಡಿ.
ಈಗ ಡಿಸೆಂಬರ್ ತಿಂಗಳು ಆರಂಭವಾಗಿದೆ ಪರೀಕ್ಷೆಗೆ ಇನ್ನು ನಾಲ್ಕು ತಿಂಗಳು ಬಾಕಿ ಇದೆ. ಇಂದಿನಿಂದ ನೀವು ಸರಿಯಾದ ರೀತಿಯಲ್ಲಿ ವೇಳಾಪಟ್ಟಿಯನ್ನು ತಯಾರಿಸಲು ಆರಂಭಿಸಬೇಕು.
2/ 8
ವೇಳಾಪಟ್ಟಿ ತಯಾರಿಸುವುದು ಮಾತ್ರವಲ್ಲ ಅದರ ಪ್ರಕಾರ ಓದಬೇಕು. ನಿಮ್ಮ ವೇಳಾಪಟ್ಟಿಯಲ್ಲಿ ನಿಗದಿಪಡಿಸಿದ್ದಂಕ್ಕಿಂತ ಹೆಚ್ಚು ಸಮಯ ಓದಿದರೆ ತೊಂದರೆಯಿಲ್ಲ ಆದರೆ ಅದಕ್ಕಿಂತ ಕಡಿಮೆ ಸಮಯದಲ್ಲಿ ಓದು ನಿಲ್ಲಿಸಬಾರದು.
3/ 8
ನಿಮ್ಮ ಪಠ್ಯಕ್ರಮವನ್ನು ಪೂರ್ಣಗೊಳಿಸುವಲ್ಲಿ ನೀವು ಹಿಂದುಳಿದಿದ್ದರೆ ನಿಮ್ಮ ಶಿಕ್ಷರ ಬಳಿ ಸಲಹೆ ಕೇಳಿ ಅವರ ಬಳಿ ನಿಮಗಂತಲೇ ಒಂದು ಬೇರೆ ವೇಳಾಪಟ್ಟಿ ಮಾಡಿಸಿಕೊಂಡು ತನ್ನಿ. ಇಲ್ಲವಾದರೆ ನಿಮ್ಮ ಶಾಲೆಯಲ್ಲಿ ನೀಡುವ ವೇಳಾಪಟ್ಟಿ ಪ್ರಕಾರ ಓದಬೇಕು.
4/ 8
ಮುಖ್ಯವಾಗಿ ಯಾವ ಪ್ರಶ್ನೆ ಪರೀಕ್ಷೆಯಲ್ಲಿ ಬರುತ್ತದೆ ಎಂದು ತಿಳಿದುಕೊಳ್ಳಿ ಆ ಪ್ರಶ್ನೆಗಳನ್ನು ಓದಿ ಪೂರ್ತಿಗೊಳಿಸಲೆಂದೇ ಬೇರೆ ವೇಳಾಪಟ್ಟಿ ನಿರ್ಮಿಸಿ. ಎಲ್ಲಾ ವಿಷಯದ ಮುಖ್ಯ ಪ್ರಶ್ನೆಗಳಿಗೆ ಮೊದಲು ವೇಳಾಪಟ್ಟಿ ಮಾಡಿ. ಆ ಪ್ರಶ್ನೆಗಳು ಮುಗಿದ ನಂತರ ಇನ್ನಿತರ ವಿಷಯ ಓದಿ.
5/ 8
ಅರ್ಧ ವಾರ್ಷಿಕ ವಿಷಯಗಳನ್ನು ನೀವು ಈಗಾಗಲೇ ಒಂದು ಬಾರಿ ಓದಿರುತ್ತೀರಿ ಹಾಗಾಗಿ ಮುಂದಿನ ಉಳಿದ ಅರ್ಧ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ವೇಳಾಪಟ್ಟಿ ರಚಿಸಿ. ಇದು ಸಹಾಯವಾಗುತ್ತದೆ.
6/ 8
ಒಂದು ದಿನದಲ್ಲಿ ಕನಿಷ್ಠ 3 ಗಂಟೆಗಳ ಕಾಲ ನೀವೀಗ ಓದಲೇ ಬೇಕು ಅದೂ ಸಹ ಶಾಲೆಯ ಅವಧಿಯನ್ನು ಬಿಟ್ಟು. ಜೈವಿಕ, ರಸಾಯನಶಾಸ್ತ್ರದಂತಹ ಸಿದ್ಧಾಂತ ವಿಷಯಗಳಿಗೆ ಹೆಚ್ಚಿನ ಸಮಯ ಮೀಸಲಿಡಿ. ನಂತರ ಗಣಿತ, ಭೌತಶಾಸ್ತ್ರ ಅಥವಾ ಇಂಗ್ಲಿಷ್ನಂತಹ ವಿಷಯಗಳಿಗೆ ಸಮಯ ನೀಡಿ.
7/ 8
ಅನೇಕ ಪ್ರಶ್ನೆಗಳು ಪುನರಾವರ್ತಿತವಾಗಿರುವುದರಿಂದ ಗಣಿತ ವಿಜ್ಞಾನದಂತಹ ವಿಷಯಗಳ ಹಿಂದಿನ ವರ್ಷದ ಪ್ರಶ್ನೆಗಳನ್ನು ಡಿಸೆಂಬರ್ನಿಂದಲೇ ಓದಿಕೊಳ್ಳಿ ಇದಕ್ಕೆ ಒಂದು ವಾರದ ವೇಳಾಪಟ್ಟಿ ಮಾಡಿ ಒಂದೊಂದು ವಿಷಯಕ್ಕೆ ಒಂದೊಂದು ದಿನ ಮೀಸಲಿಡಿ.
8/ 8
ಪ್ರಿಪರೇಟರಿ ಪರೀಕ್ಷೆ ನಡೆಯುತ್ತದೆ. ಅದರಲ್ಲಿ ನಿಮ್ಮ ವೇಳಾಪಟ್ಟಿ ನಿಮಗೆ ಒಳ್ಳೆಯ ಫಲಿತಾಂಶ ನೀಡಿದೆಯೋ ಇಲ್ಲವೋ ಎಂಬುದು ತಿಳಿದುಬರುತ್ತದೆ.