Homework: ಹೋಮ್ ವರ್ಕ್ ಮಾಡೋಕೆ ಮನಸೇ ಬರ್ತಿಲ್ವಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
Homework: ಹೋಮ್ ವರ್ಕ್ ಮಾಡಲು ಕಷ್ಟಪಡ್ತಿದಿರಾ? ಹಾಗಾದರೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ ಇದನ್ನು ಗಮನವಿಟ್ಟು ಓದಿ. ನಿಮ್ಮ ಮನಸ್ಸನ್ನು ಆದಷ್ಟು ಸಮಾಧಾನವಾಗಿಡಲು ಪ್ರತ್ನಿಸಿ ಆಗ ನಿಮ್ಮ ಕೆಲಸ ಬೇಗ ಬೇಗ ಆಗುತ್ತದೆ.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯವೂ ಸಹ ಹೋಮ್ ವರ್ಕ್ ನೀಡುತ್ತಾರೆ. ದಿನಚರಿ, ಮಗ್ಗಿ, ಜೋಡುಗೆರೆ, ಗಣಿತದ ಲೆಕ್ಕ, ಪಾಠದ ಪ್ರಶ್ನೋತ್ತರ ದಿನಕ್ಕೆ ಇವಿಷ್ಟನ್ನು ನಿಮ್ಮ ಮಗು ಮಾಡಲೇ ಬೇಕಾಗುತ್ತದೆ. ಇದನ್ನು ಬೇಗ ಪೂರ್ಣಗೊಳಿಸಲು ಇಲ್ಲಿ ಕೆಲವು ಸಲಹೆ ನೀಡಲಾಗಿದೆ.
2/ 7
ಮೊದಲು ನಿಮಗೆ ಬೇಕಾದ ಎಲ್ಲಾ ವಸ್ತುಗಳನ್ನು ಹೊಂದಿಸಿಕೊಳ್ಳಿ. ಅಂದರೆ ಪಟ್ಟಿ, ಪುಸ್ತಕ, ಪೆನ್ನ್, ಪೆನ್ಸಿಲ್, ಸರಿಯಾದ ಟೇಬಲ್ ಹೀಗೆ ಎಲ್ಲಾ ವಸ್ತುವನ್ನು ಬರೆಯಲು ಆರಂಭಿಸುವ ಮೊದಲೇ ವ್ಯವಸ್ಥಿತವಾಗಿ ಇಟ್ಟುಕೊಳ್ಳಿ.
3/ 7
ಸಾಧ್ಯವಾದಷ್ಟು ಗೊಂದಲಗಳನ್ನು ನಿವಾರಿಸಿ. ನಿಮ್ಮ ಫೋನ್ ಅನ್ನು ದೂರವಿಡಿ, ನಿಮ್ಮ ಕಂಪ್ಯೂಟರ್ನಿಂದ ದೂರವಿರಿ ಮತ್ತು ನಿಮ್ಮ ಪರಿಸರವನ್ನು ಸಾಧ್ಯವಾದಷ್ಟು ಶಾಂತಗೊಳಿಸಿ. ಹೀಗಿದ್ದಾಗ ಬೇಗ ಓದಿ ಬರೆಯಬಹುದು.
4/ 7
ಹೋಮ್ವರ್ಕ್ ಮಾಡಲು ಪ್ರಯತ್ನಿಸುವಾಗ ವಿದ್ಯಾರ್ಥಿಗಳು ಮಲ್ಟಿ ಟಾಸ್ಕ್ ಮಾಡಲು ಪ್ರಯತ್ನಿಸುವುದು, ಟಿವಿ ನೋಡುವುದು ಅಥವಾ ರೇಡಿಯೋ ಕೇಳುವುದು ಅಥವಾ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ನಲ್ಲಿ ಚಾಟ್ ಮಾಡುವುದನ್ನು ಇಷ್ಟ ಪಡುತ್ತಾರೆ. ಆದರೆ ಹಾಗೆ ಮಾಡಂತೆ ನೋಡಿಕೊಳ್ಳಿ.
5/ 7
ಪ್ರತಿ ಗಂಟೆಗೊಮ್ಮೆ ವಿರಾಮ ತೆಗೆದುಕೊಳ್ಳಿ ನಿರಂತರವಾಗಿ ಯಾವ ಕೆಲವನ್ನು ಮಾಡಿದರೂ ಸಹ ಸುಸ್ತಾಗುತ್ತದೆ. ನಿಮ್ಮ ಮನಸ್ಸನ್ನು ಆದಷ್ಟು ಸಮಾಧಾನವಾಗಿಡಲು ಪ್ರತ್ನಿಸಿ ಆಗ ನಿಮ್ಮ ಕೆಲಸ ಬೇಗ ಬೇಗ ಆಗುತ್ತದೆ. ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡದಿದ್ದರೆ ನೀವು ಮಾಡುತ್ತಿರುವ ಕೆಲಸದ ಗುಣಮಟ್ಟ ಕಡಿಮೆಯಾಗುತ್ತದೆ.
6/ 7
ವಿರಾಮದ ನಂತರ ಹಿಂದಿರುಗಿ ಬಂದು ಮಾಡುವ ಮೊದಲ ಹದಿನೈದು ನಿಮಿಷಗಳ ಕೆಲಸ ಅತ್ಯಂತ ಪರಿಣಾಮಕಾರಿ ಕೆಲಸವಾಗುತ್ತದೆ. ಏಕೆಂದರೆ ನಿಮ್ಮ ಮನಸ್ಸು ಆಗ ಶುದ್ಧವಾಗುತ್ತದೆ. ಆ ಸಮಯದಲ್ಲೇ ಎಷ್ಟಾಗುತ್ತದೋ ಅಷ್ಟು ಕೆಲಸ ಮಾಡಿ.
7/ 7
ನಿಮ್ಮ ಹೋಮ್ವರ್ಕ್ನ ಕೊನೆಯಲ್ಲಿ ತಿಂಡಿ ಇಡಿ. ನಿಮ್ಮ ನೆಚ್ಚಿನ ಕಾರ್ಯಕ್ರಮದ ಹೊಸ ಸಂಚಿಕೆ ಅಥವಾ ವೀಡಿಯೊ ಗೇಮ್ ನೋಡುವ ಗುರಿ ಇಟ್ಟುಕೊಳ್ಳಿ ಆಗ ನೀವು ಮಾಡುತ್ತಿರುವ ಕೆಲಸ ಬೇಗ ಮುಗಿಯುತ್ತದೆ.