ನೀವು ಹೊಸ ಕಾಲೇಜಿಗೆ ಸೇರಲು ಸಜ್ಜಾಗಿದ್ದೀರಾ? ಇದಕ್ಕಾಗಿ ಯಾವ ಕಾಲೇಜಿಗೆ ಸೇರಲಿ ಅಂತ ಯೋಚಿಸ್ತಾ ಇದ್ದೀರಾ? ಹಾಗಾದ್ರೆ ಇಲ್ಲಿ ಕೊಡಲಾದ ಒಂದಷ್ಟು ಟಿಪ್ಸ್ಗಳನ್ನು ಅನುಸರಿಸಿ.
2/ 8
ಹೌದು. ಹೊಸ ಕಾಲೇಜು ಅಂದ ಕೂಡಲೇ ಸಾವಿರ ಯೋಚನೆಗಳು, ಗೊಂದಲಗಳು ಮನಸ್ಸಿನಲ್ಲಿ ಮೂಡುತ್ತದೆ. ಆದರೆ, ನಾವು ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಗಡಿಬಿಡಿ ಆಗದೇ ನಿಧಾನಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
3/ 8
ಮೊದಲಿಗೆ ಕಾಲೇಜುಗಳ ಪಟ್ಟಿಗಳನ್ನು ತಯಾರಿಸಿಕೊಳ್ಳಿ: ಯಾವ ಕಾಲೇಜು ನಿಮಗೆ ಹತ್ತಿರ ಇದೆ, ಅಲ್ಲಿ ಇರುವ ಬೆಸ್ಟ್ ಕೋರ್ಸ್ಗಳು, ಫೀಸು, ಅಲ್ಲಿ ನಡೆಯುವ ಕಾರ್ಯಕ್ರಮ ಮತ್ತು ಕ್ಯಾಂಪಸ್ ಸೆಲೆಕ್ಷನ್ಗಳು ಬರುವ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಗಳನ್ನು ಪಟ್ಟಿ ಮಾಡಿ.
4/ 8
ನಿಮ್ಮ ಬಜೆಟ್ಗೆ ತಕ್ಕಂತೆ ನಿರ್ದಿಷ್ಟ ಕಾಲೇಜಿನ ಸಾಧಕ ಮತ್ತು ಬಾಧಕಗಳನ್ನು ನೋಡಬೇಕು. ನೀವು ಇನ್ನು ಎಷ್ಟು ವರ್ಷಗಳ ಕಾಲ ಆ ಕಾಲೇಜು ಮತ್ತು ಅದೇ ಪರಿಸರದಲ್ಲಿ ಇರುತ್ತೀರ ಅಂತ ಕನ್ಫರ್ಮ್ ಮಾಡಿಕೊಳ್ಳಬೇಕು.
5/ 8
ಯಾವ ಕಾಲೇಜಿಗೆ ಸೇರಬೇಕು ಎಂದು ಅಂದುಕೊಳ್ಳುತ್ತೀರೋ ಆ ಕಾಲೇಜಿಗೆ ಭೇಟಿ ನೀಡಿ ಮತ್ತು ಅಲ್ಲಿ ಇರುವ ಪ್ರಾಂಶುಪಾಲರನ್ನು ಮಾತನಾಡಿಸಿ. ಏನೇ ಗೊಂದಲಗಳು ಇದ್ರೂ ನೀವು ಅವರೊಂದಿಗೆ ಮುಜುಗರ ಮಾಡಿಕೊಳ್ಳದೇ ಬಗೆ ಹರಿಸಿಕೊಳ್ಳಿ. ಯಾಕೆಂದರೆ ಇದು ನಿಮ್ಮ ಭವಿಷ್ಯದ ಪ್ರಶ್ನೆಯಾಗಿದೆ, ಹಾಗಾಗಿ.
6/ 8
ಆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಇರುವ ಫೆಸಿಲಿಟಿ, ಸ್ಕಾಲರ್ಶಿಪ್ಗಳನ್ನು ನೋಡಿ. ಬೋಧನೆಯ ಶೈಲಿ, ಅಲ್ಲಿಯ ವಸತಿ ಮತ್ತು ಊಟಗಳೆಲ್ಲವನ್ನೂ ಮೀರಿ ಫೀಸ್ಗಳನ್ನು ಪಡೆದುಕೊಳ್ಳುತ್ತಾರಾ ಅಂತ ಪರಿಶೀಲಿಸಿ. ನಿಮಗೆ ಓಕೆ ಅಂತ ಅನಿಸಿದ್ರೆ ಅಪ್ಲೈ ಮಾಡಬಹುದು.
7/ 8
ಮುಖ್ಯವಾಗಿ ಅಲ್ಲಿ ಇರುವ ವಿದ್ಯಾರ್ಥಿಗಳ ಬಳಿ ಮಾತನಾಡಿಸಿ ಮತ್ತು ಅವರಿಂದ ಅಭಿಪ್ರಾಯಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಹಾಗೆಯೇ ಕಾಲೇಜಿನ ಅಧಿಕೃತ ವೆಬ್ಸೈಟ್ಗಳನ್ನು ಭೇಟಿ ಮಾಡಿ ಅಲ್ಲಿ ಬಂದಿರುವ ವಿಮರ್ಶೆಗಳನ್ನು ನೋಡಬೇಕು. ನಿಮಗೆ ಬೇಕಾದ ಸೌಲಭ್ಯ ಮತ್ತು ಶಿಕ್ಷಣ ಸಿ ಗ್ತಾ ಇದ್ಯಾ ಅಂತ ಸಂಪೂರ್ಣ ಚೆಕ್ ಮಾಡೋದ್ರಲ್ಲಿ ತಪ್ಪೇನಿಲ್ಲ ಬಿಡಿ.
8/ 8
ಉದ್ಯೋಗದ ಸಂಪರ್ಕ ಹೇಗಿದೆ ಎಂಬುದು ಮುಖ್ಯವಾಗಿ ನೀವು ನೋಡಲೇಬೇಕು. ಯಾಕೆಂದರೆ ಉತ್ತಮ ಉದ್ಯೋಗಕ್ಕಾಗಿ ಕ್ಯಾಂಪಸ್ ಸೆಲೆಕ್ಷನ್ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಕಾಲೇಜಿನ ಸಂಸ್ಥೆ ಮತ್ತು ಅಲ್ಲಿನ ವಾತಾವರಣದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ವಿಷಯಗಳನ್ನು ತಿಳಿದುಕೊಳ್ಳಲೇ ಬೇಕು.