Winter Holiday: ಜನವರಿ 23 ರವರೆಗೆ ಚಳಿಗಾಲದ ರಜೆ ಮುಂದೂಡಿದ ಸರ್ಕಾರ!
ಶೀತ ವಾತಾವರಣದ ಕಾರಣ ಜನವರಿ 23ರ ವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಬೇಕಾದ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಮುಂದುವರಿಸಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಹಲವಾರು ರಾಜ್ಯಗಳಲ್ಲಿ ಚಳಿಗಾಲಕ್ಕೆಂದೇ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಆ ಕಾರಣದಿಂದ ಈಗಲೂ ಸಹ ಎಷ್ಟೋ ಶಾಲೆಗಳಿಗೆ ಬೀಗ ಬಿದ್ದಿದೆ. ಹರಿಯಾಣದಲ್ಲಿ ಶೀತ ಇನ್ನೂ ಮುಂದುವರೆದಿದೆ ಅದಕ್ಕಾಗಿ ಶಾಲಾ ಮಕ್ಕಳ ರಜೆ ಮುಂದೂಡಲಾಗಿದೆ.
2/ 7
ಶೀತ ಹವಾಮಾನದ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರವು ಶುಕ್ರವಾರ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಚಳಿಗಾಲದ ರಜೆಯನ್ನು ಜನವರಿ 23 ರವರೆಗೆ ವಿಸ್ತರಿಸಿದೆ.
3/ 7
ಹರಿಯಾಣದ ಶಾಲಾ ಶಿಕ್ಷಣ ನಿರ್ದೇಶನಾಲಯ ಹೊರಡಿಸಿದ ಸೂಚನೆಯ ಪ್ರಕಾರ, ಚಳಿಗಾಲದ ರಜೆಯನ್ನು ವಿಸ್ತರಿಸಿರುವುದರಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಜನವರಿ 23 ರವರೆಗೆ ಮುಚ್ಚಲ್ಪಡುತ್ತವೆ.
4/ 7
ಈ ಹಿಂದೆ ಜನವರಿ 16 ರಂದು ಪುನರಾರಂಭವಾಗಬೇಕಿದ್ದ ಶಾಲೆಗಳು ಈಗ ಜನವರಿ 23 ರಂದು ಪುನರಾರಂಭಗೊಳ್ಳಲಿವೆ. ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯಿಂದ ಈ ರೀತಿ ನಿರ್ಧಾರ ಕೈಗೊಳ್ಳಲಾಗಿದೆ.
5/ 7
ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಬೇಕಾದ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಮುಂದುವರಿಸಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
6/ 7
ಹರಿಯಾಣ ಸೇರಿದಂತೆ ಉತ್ತರ ಭಾರತದಾದ್ಯಂತ ಹೆಚ್ಚಾಗಿರುವ ಚಳಿಗೆ ಮಕ್ಕಳು ಮನೆಯಲ್ಲೇ ಇರುವುದು ಉತ್ತಮ ಎಂಬ ನಿರ್ಧಾರಕ್ಕೆ ಅಲ್ಲಿನ ಸರ್ಕಾರ ಬಂದಿದೆ.
7/ 7
ಮುಂದಿನ ದಿನದಲ್ಲಿ ರವಿವಾರವೂ ಸಹ ಶಾಲಾ ತರಗತಿ ನಡೆಸಿ ಈಗಿನ ರಜಾ ದಿನಗಳನ್ನು ಸರಿದೂಗಿಸುವ ಲಕ್ಷಣ ಕಂಡುಬರುತ್ತಿದೆ. ಅಧಿಕೃತ ಪ್ರಕಟಣೆಯಲ್ಲಿ ಈ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.