West Bengal: ತರಗತಿಗೆ ನುಗ್ಗಿದ ಗನ್ ಮ್ಯಾನ್! ಕಂಗಾಲಾದ ವಿದ್ಯಾರ್ಥಿಗಳು
ಮಾಲ್ಡಾದ ಶಾಲೆಯಲ್ಲಿ ವಿದ್ಯಾರ್ಥಿಗಳು ಕಂಗಾಲಾಗುವ ಒಂದು ಘಟನೆ ಜರುಗಿದೆ. ತರಗತಿಗೆ ಬಂದೂಕು ಹಿಡಿದ ಒಬ್ಬ ಯುವಕ ನುಗ್ಗಿದ ಘಟನೆಯಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
1/ 7
ತರಗತಿಯಲ್ಲಿ ವಿದ್ಯಾರ್ಥಿಗಳು ಕುಳಿತು ಪಾಠ ಕೇಳುತ್ತಿದ್ದಂತೆ ವಿದ್ಯಾರ್ಥಿಗಳು ಗಾಬರಿಗೊಳಗಾಗ ಬೇಕಾದ ಪರಿಸ್ಥಿತಿ ಎದುರಾಗಿದ್ದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
2/ 7
ಯುವಕನೊಬ್ಬ ಕೈಯಲ್ಲಿ ಬಂದೂಕು ಹಿಡಿದು ತರಗತಿಗೆ ಪ್ರವೇಶಿಸಿದ್ದಾನೆ. ಇದನ್ನು ನೋಡಿ ತರಗತಿಯಲ್ಲಿರುವ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
3/ 7
ತರಗತಿಯಲ್ಲಿ ವಿದ್ಯಾರ್ಥಿಗಳು ಕುಳಿತಿರುವ ಸಂದರ್ಭದಲ್ಲಿ ಬಂದೂಕು ಹಿಡಿದ ಅನಾಮಿಕ ವ್ಯಕ್ತಿ ಒಳಗೆ ಬಂದಿದ್ದಾನೆ. ಜನನಿಬಿಡ ತರಗತಿಯಲ್ಲಿ ಬುಧವಾರ ಬಂದೂಕುಧಾರಿ ಅಟ್ಟಹಾಸ ಮೆರೆದಿದ್ದಾನೆ.
4/ 7
ತರಗತಿಯ ಮೇಜಿನ ಮೇಲೆ ಪೆಟ್ರೋಲ್ ಬಾಂಬ್ ಇಡಲಾಗಿತ್ತು ಎಂದು ವರದಿಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
5/ 7
ಮಾಲ್ಡಾದ ಶಾಲೆಯಲ್ಲಿ ಇನ್ನೂ ಪೊಲೀಸರನ್ನು ನಿಯೋಜಿಸಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಎಚ್ಚರಿಕೆಯಿಂದ ಓಡಾಟ ಮಾಡುವಂತೆ ಸೂಚನೆ ನೀಡಿದ್ದಾರೆ.
6/ 7
ಯಾವ ಕಾರಣಕ್ಕಾಗಿ ಆತ ಶಾಲೆಯ ತರಗತಿಯೊಳಗೆ ನುಗ್ಗಿದ್ದ ಎಂದು ತಿಳಿಯದ ಕಾರಣ ಇನ್ನು ಆ ಶಾಲೆಯ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ.
7/ 7
ಕೊನೆಗೆ ಪೊಲೀಸರು ಹಾರಿ ಬಂದೂಕುಧಾರಿಯನ್ನು ಬಂಧಿಸಿದ್ದಾರೆ. ಯಾವಾಗ ಈ ಘಟನೆ ಜರುಗಿದೆಯೋ ಆಗಿನಿಂದ ಅಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ.
First published: