ಮೆಟ್ರೋ ನಗರಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿ ಅವಘಡಗಳು ಅನೇಕ ಜೀವಗಳನ್ನು ಅಪಾಯಕ್ಕೆ ತಳ್ಳುತ್ತವೆ. ಕೆಲವೊಮ್ಮೆ ಇಂತಹ ಅವಘಡಗಳಲ್ಲಿ ಎಷ್ಟೋ ಜೀವಗಳು ಬಲಿಯಾಗುತ್ತವೆ. ಗುಜರಾತಿನ ವಲ್ಸಾದ್‌ನ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರು ಅಭಿವೃದ್ಧಿಪಡಿಸಿದ ವಿಶಿಷ್ಟ ಜೀವರಕ್ಷಕ ಕಿಟಕಿ ವ್ಯವಸ್ಥೆಯು ಅಗ್ನಿ ಅವಘಡಗಳಲ್ಲಿ ಜೀವಹಾನಿಯನ್ನು ತಡೆಯಲು ಉಪಯುಕ್ತವಾಗಿದೆ.
ವಲ್ಸಾದ್ ಜಿಲ್ಲೆ ಪಾರ್ಡಿ ತಾಲೂಕು ಚಿಕ್ಕ ಖೇರ್ಲಾವ್ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಇದೆ. ಇದರಲ್ಲಿ ಓದುತ್ತಿರುವ ವಿದ್ಯಾರ್ಥಿ ಜಯನ್ಸ್ ಮನೀಶ್ ಭಾಯ್ ಪಟೇಲ್ ಮತ್ತು ಶಾಲೆಯ ಗಣಿತ ಶಿಕ್ಷಕ ಚೇತನ್ ಪಟೇಲ್ ಅಭೂತಪೂರ್ವ ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ. ರಾಜ್ಯದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಗಣಿತ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಈ ಕೃತಿಯನ್ನು ಪ್ರಸ್ತುತಪಡಿಸಲಾಗಿದೆ. ಈ ಕಾರ್ಯವು ಜಿಲ್ಲಾ ಮಟ್ಟದಿಂದ ರಾಜ್ಯ ಮತ್ತು ಈಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.