Fire And Safety Course: ಹೀಗೂ ಒಂದು ಕೋರ್ಸ್ ಇದೆ ಗೊತ್ತಾ? ಇಲ್ಲಿ ಏನೆಲ್ಲಾ ಕಲಿಬಹುದು ನೋಡಿ
ಫೈರ್ ಆ್ಯಂಡ್ ಸೇಫ್ಟಿ ಕೋರ್ಸ್ ಇದನ್ನು ನೀವು ಒಂದು ವರ್ಷದ ಡಿಪ್ಲೋಮಾ ಕೋರ್ಸ್ ಮೂಲಕ ಕಲಿಯಬಹುದು. ಎರಡು ವರ್ಷದ ಕೋರ್ಸ್ ಕೂಡಾ ಇದೆ. ಈ ಕೋರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಎಷ್ಟೊಂದು ಹೊಸಾ ರೀತಿಯ ಕೋರ್ಸ್ಗಳು ಆರಂಭವಾಗಿವೆ ಅಂದರೆ ಕೆಲವೊಂದು ಕೋರ್ಸ್ಗಳ ಬಗ್ಗೆ ನೀವು ಕೇಳಿಯೂ ಇರೋದಿಲ್ಲ. ಇಲ್ಲಿ ಒಂದು ಕೋರ್ಸ್ ಇದೆ ಇದರ ಹೆಸರು ಫೈರ್ ಆ್ಯಂಡ್ ಸೇಫ್ಟಿ ಕೋರ್ಸ್ ಅಂತ ಈ ಕೋರ್ಸ್ ಕುರಿತು ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.
2/ 7
ಈ ವಿಷಯಕ್ಕೆ ಸಂಬಂಧಿಸಿದ ಕೋರ್ಸ್ ನೀವೂ ಮಾಡ್ಬಹುದು. ಕಾಲೇಜ್ ಎಲ್ಲಿದೆ ಅಂತ ಅನುಮಾನ ಇದ್ದರೆ ಅದರ ಮಾಹಿತಿಯನ್ನೂ ಇಲ್ಲಿ ನೀಡಲಾಗಿದೆ. ಬೆಂಗಳೂರಿನಲ್ಲಿ ಈ ಕೋರ್ಸ್ಗೆ ಸಂಬಂಧಿಸಿದ ಕಾಲೇಜ್ ಇದೆ.
3/ 7
ಒಂದು ವರ್ಷದ ಡಿಪ್ಲೋಮಾ ಕೋರ್ಸ್ ಅನ್ನು ನೀವು ಮಾಡಬಹುದು. ಎರಡು ವರ್ಷದ ಕೋರ್ಸ್ ಕೂಡಾ ಇದೆ. ನೀವು ಈ ಕೋರ್ಸ್ ಸೇರಿಕೊಳ್ಳಲು ಬಯಸಿದರೆ ಕನಿಷ್ಠ ಹತ್ತನೇ ತರಗತಿ ಪಾಸ್ ಆಗಿರಬೇಕು. ಕೋರ್ಸ್ ಶುಲ್ಕ ಕೇವಲ 10 ಸಾವಿರದಿಂದ 15 ಸಾವಿರ ಇದೆ.
4/ 7
ಈ ಕೋರ್ಸ್ ಮಾಡಿದರೆ ಭರ್ಜರಿ ಉದ್ಯೋಗಾವಕಾಶವಿದೆ. ಸುರಕ್ಷತಾ ಮೇಲ್ವಿಚಾರಕ, ಬೋಧಕ, ತರಬೇತುದಾರ, ಸುರಕ್ಷತಾ ಅಧಿಕಾರಿ, ಸುರಕ್ಷತಾ ಸಲಹೆಗಾರ, ಅಗ್ನಿಶಾಮಕ ಸಿಬ್ಬಂದಿ, ಹೀಗೆ ಹಲವಾರು ಉದ್ಯೋಗ ಇಲ್ಲಿ ಲಭ್ಯವಿರುತ್ತದೆ.
5/ 7
ಬೆಂಗಳೂರಿನ ಅಗ್ನಿಶಾಮಕ ಮತ್ತು ಸುರಕ್ಷತೆ ಕೋರ್ಸ್ ಮಾಡುವವರಿಗೆ ಬೆಂಕಿಯ ಅಪಾಯಗಳು, ತಡೆಗಟ್ಟುವ ಕ್ರಮಗಳು, ಅಪಾಯಗಳನ್ನು ಗುರುತಿಸುವ ಕಾರ್ಯವಿಧಾನಗಳು, ಸುರಕ್ಷಿತ ಅಭ್ಯಾಸ, ನಿಯಮಗಳು ಮತ್ತು ಸ್ಥಳಾಂತರಿಸುವ ವ್ಯವಸ್ಥೆ ಬಗ್ಗೆ ಕಲಿಸಲಾಗುತ್ತದೆ.
6/ 7
ಎಲ್ಲಾ ರೀತಿಯ ಕೈಗಾರಿಕೆಗಳಿಗೆ ಅಗ್ನಿಶಾಮಕ ಮತ್ತು ಸುರಕ್ಷತೆ ತರಬೇತಿ ಮುಖ್ಯವಾಗಿರುತ್ತದೆ. ಬೆಂಗಳೂರಿನಲ್ಲಿ ಅಗ್ನಿಶಾಮಕ ಮತ್ತು ಸುರಕ್ಷತಾ ಕೋರ್ಸ್ ಮಾಡಿದವರಿಗೆ ಉದ್ಯೋಗವು ಸುಲಭವಾಗಿ ದೊರೆಯುತ್ತದೆ.
7/ 7
ದೊಡ್ಡ ಕಟ್ಟಡಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳುವ ಮತ್ತು ಪರಿಶೀಲಿಸುವ ಹುದ್ದೆ ಇವರಿಗಿರುತ್ತದೆ. ನೀವೂ ಆಸಕ್ತಿ ಇದ್ದರೆ ಈ ಕೋರ್ಸ್ ಮಾಡಿ.