ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಗೆ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣದಿಂದ ಶೇ.50 ಭಾಗವನ್ನು ಮತ್ತು ಪದವಿ ಪೂರ್ವ ಕಾಲೇಜು(ಪಿಯುಸಿ), ಪ್ರಥಮ ದರ್ಜೆ ಹಾಗೂ ಇನ್ನಿತರೆ ಕಾಲೇಜುಗಳಿಂದ ಸಂಗ್ರಹಿಸಿದ ಹಣದ ಶೇ.60 ಭಾಗವನ್ನು ಆಯಾ ಶಾಲಾ ಕಾಲೇಜುಗಳಲ್ಲಿ ಉಳಿಸಿಕೊಂಡು ವಿದ್ಯಾರ್ಥಿಗಳ ವಿದ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಉಪಯೋಗಿಸಿಕೊಳ್ಳಲು ಆಯಾ ಶಾಲೆಗಲಿಗೆ ಅನುಮತಿ ನೀಡಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗುವ ಶಾಲಾ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಮೂರು ಪ್ರಶಸ್ತಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ. 3,000/-, ರೂ. 2,500/- ಹಾಗೂ ರೂ.2,000/- ಗಳನ್ನು ವೈಯಕ್ತಿಕ ಬಹುಮಾನವಾಗಿ ಹಾಗೂ ಪ್ರಥಮ ಮೂರು ಪ್ರಶಸ್ತಿಗಳನ್ನು ಗೆದ್ದ ತಂಡಗಳಿಗೆ ಕ್ರಮವಾಗಿ ರೂ.2,000/-, ರೂ.1,500/- ಹಾಗೂ ರೂ.1,000/- ಗಳನ್ನು ನೀಡಿ ಗೌರವಿಸಲಾಗುತ್ತದೆ.