ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಪೋಷಣೆ ಯೋಜನೆಯಡಿ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ವಿತರಣೆಯನ್ನು ವಿಸ್ತರಿಸಲು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರದೊಂದಿಗೆ ವಿಷಯ ಪ್ರಸ್ತಾಪಿಸಿದೆ.
2/ 8
ಇಲಾಖೆಯ ಮೂಲಗಳ ಪ್ರಕಾರ, ವಿಶೇಷ ಪೌಷ್ಠಿಕ ಆಹಾರ (ಎಸ್ಎನ್ಎಫ್) 6-14 ವಯಸ್ಸಿನ ವಿದ್ಯಾರ್ಥಿಗಳು ಅಥವಾ 1-8 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದೆ. ಆ ಕಾರಂದಿಂದ ಇದನ್ನು ವಿಸ್ತರಿಸಲು ಕೋರಲಾಗಿದೆ.
3/ 8
ಇದಲ್ಲದೆ, ಅಪೌಷ್ಟಿಕತೆಯ ಸಮಸ್ಯೆಯು ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಒಂದು ದೊಡ್ಡ ಆತಂಕವಾಗಿದೆ ಎಂದು ತಿಳಿದುಬಂದಿದೆ. ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆ ವಿದ್ಯಾರ್ಥಿಗಳಲ್ಲಿನ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸಲು ಎಸ್ಎನ್ಎಫ್ ಅನ್ನು ವಿಸ್ತರಿಸಬೇಕು ಎಂದು ಕೋರಲಾಗಿದೆ.
4/ 8
ರಾಜ್ಯ ಸರ್ಕಾರದೊಡನೆ ಈ ವಿಷಯದ ಕುರಿತು ಪ್ರಸ್ತಾವನೆಯನ್ನುನೀಡಿದ್ದಾರೆ. ಪ್ರಸ್ತಾವನೆ ಪರಿಶೀಲನೆಯಲ್ಲಿದ್ದು, ವಿಧಾನಮಂಡಲದ ಬಜೆಟ್ ಪೂರ್ವ ಅಧಿವೇಶನದಲ್ಲಿ ಈ ವಿಷಯವನ್ನು ಮಂಡಿಸುವ ಸಾಧ್ಯತೆ ಇದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
5/ 8
ಅಧಿಕಾರಿಗಳ ಪ್ರಕಾರ, ಎಸ್ಎನ್ಎಫ್ ಅನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಸ್ತರಿಸುವುದರಿಂದ ಸುಮಾರು 9-12 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ನಿರೀಕ್ಷೆಯಿದೆ ಮತ್ತು ವಾರ್ಷಿಕವಾಗಿ ಸುಮಾರು 32 ಕೋಟಿ ರೂ. ವೆಚ್ಚ ಇದಕ್ಕೆ ತಗುಲಲಿದೆ.
6/ 8
ಅಪೌಷ್ಟಿಕತೆಯಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರವು ಮಧ್ಯಾಹ್ನದ ಊಟದ ಯೋಜನೆಯ ಭಾಗವಾಗಿ ಮೊಟ್ಟೆಗಳನ್ನು ವಿತರಿಸುತ್ತಿದೆ. ಆದರೂ ಜುಲೈನಲ್ಲಿ ಎಲ್ಲಾ ಜಿಲ್ಲೆಗಳಿಗೆ ಮೊಟ್ಟೆ / ಬಾಳೆಹಣ್ಣು / ಚಿಕ್ಕಿಗಳ ವಿತರಣೆಯನ್ನು ವಿಸ್ತರಿಸುವ ಯೋಜನೆಯನ್ನು ರಾಜ್ಯ ಸರ್ಕಾರವು ಔಪಚಾರಿಕವಾಗಿ ಅನಾವರಣಗೊಳಿಸಿದೆ.
7/ 8
ಆದರೆ ಬೆಂಗಳೂರು, ಮೈಸೂರು, ಕಲಬುರ್ಗಿ ಮತ್ತು ಬೆಳಗಾವಿ ಈ ಎಲ್ಲಾ ವಿಭಾಗಗಳಲ್ಲಿ ಯೋಜನೆಗಳನ್ನು ಅಕ್ಟೋಬರ್ನಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ನಂತರ ಇದರ ಪ್ರಯೋಜನ ಲಭಿಸಿಲ್ಲ.
8/ 8
ಎಸ್ಎನ್ಎಫ್ ವಿತರಣೆಯು ಶಾಲೆಗಳಲ್ಲಿ ಹಾಜರಾತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಕುರಿತು ಇಲಾಖೆಯು ಇನ್ನೂ ಪೂರ್ಣ ಮೌಲ್ಯಮಾಪನವನ್ನು ನಡೆಸಬೇಕಾಗಿದೆ. ಹೀಗೆ ಮಾಡುವುದರಿಂದ ಉತ್ತಮ ಹಾಜರಾತಿ ಉಂಟಾಗುತ್ತದೆ ಎಂದು ಹೇಳಿದ್ದಾರೆ.