PUC Exam: ದ್ವಿತೀಯ ಪಿಯುಸಿ ಪರೀಕ್ಷೆಗೆ ಇವತ್ತಿನಿಂದಲೇ ತಯಾರಿ ನಡೆಸಿ
ನಿಮ್ಮ ಮೇಲೆ ನಿಮಗೆ ಜಾಸ್ತಿ ನಂಬಿಕೆ ಇರಲಿ. ನಿಮ್ಮಿಂದ ಸಾಧ್ಯ ಎಂದು ಆಗಾಗ ಹೇಳಿಕೊಳ್ಳಿ. ಚೆನ್ನಾಗಿ ತಯಾರಿ ನಡೆಸಿ. . ಪರೀಕ್ಷೆಗಳಿಗೆ ಎಂದಿಗೂ ಭಯಪಡಬೇಡಿ ಮತ್ತು ಮುಖ್ಯವಾಗಿ, ನಿಮ್ಮ ಫಲಿತಾಂಶಗಳ ಬಗ್ಗೆ ಚಿಂತಿಸಬೇಡಿ.
ಈ ವರ್ಷದ ದ್ವಿತೀಯ ಪಿಯುಸಿ ವೇಳಾಪಟ್ಟಿ ಬಿಡುಗಡೆಯಾಗಿದೆ. ವಿದ್ಯಾರ್ಥಿಗಳೆಲ್ಲ ಪರೀಕ್ಷಾ ತಯಾರಿ ನಡೆಸಲು ಪ್ರಾರಂಭಿಸುತ್ತಿದ್ದಾರೆ. ಆದರೆ ಓದಲು ನೀವು ಸರಿಯಾದ ಪ್ಲಾನ್ ಮಾಡಿಕೊಳ್ಳಬೇಕು. ಆ ಕುರಿತು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ. ಇದನ್ನು ಫಾಲೋ ಮಾಡಿ ಇಂದಿನಿಂದಲೇ ಓದಲು ಆರಂಭಿಸಿ.
2/ 9
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೂ ಒಂದು ಯೋಜನೆಯನ್ನು ರೂಪಿಸಿಕೊಂಡು ಸಮಯವನ್ನು ಹಂಚಿಕೆ ಮಾಡಿಕೊಳ್ಳಬೇಕು. ಅಧ್ಯಯನ ಮಾಡಲು ನಿಯಮಿತ ವೇಳಾಪಟ್ಟಿಯನ್ನು ಮಾಡಿ, ಸ್ವಲ್ಪ ಸಮಯದವರೆಗೆ ಅಧ್ಯಯನ ಮಾಡಬೇಡಿ ವಿರಾಮ ಕೊಟ್ಟು ಯೋಚಿಸಿ ನಂತರ ಓದಲು ಆರಂಭಿಸಿ.
3/ 9
ನಿಮಗೆ ಯಾವ ಅವಧಿ ಸೂಕ್ತವೆನಿಸುತ್ತದೆಯೋ ಅದೇ ಅವಧಿಯಲ್ಲಿ ನೀವು ಅಭ್ಯಾಸ ಮಾಡಿ. ಕೆಲವರಿಗೆ ಬೆಳಿಗ್ಗೆ ಅಭ್ಯಾಸ ಮಾಡಬೇಕು ಎಂದೆನಿಸಬಹುದು, ಇನ್ನು ಕೆಲವರಿಗೆ ರಾತ್ರಿ ಅಭ್ಯಾಸವೇ ಸೂಕ್ತವೆನಿಸಬಹುದು.
4/ 9
ಆಗಾಗ ಓದಿನ ಮಧ್ಯೆ ಕೆಲವು ನಿಮಿಷಗಳ ವಿರಾಮವನ್ನು ತೆಗೆದುಕೊಳ್ಳಿ. ಹಿಂದಿನ ವರ್ಷದ ಪ್ರಶ್ನೆಗಳು ಮತ್ತು ಪತ್ರಿಕೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳನ್ನು ಪ್ರಯತ್ನಿಸಿ. ಅಭ್ಯಾಸ ಮಾಡುವಾಗ ಸಂದರ್ಭಗಳಲ್ಲಿ ಸಮಯ ನಿರ್ವಹಣೆ ಬಹಳ ಮುಖ್ಯ.
5/ 9
ಏಕಾಗ್ರತೆಯನ್ನು ಸುಧಾರಿಸಲು ಯೋಗ, ಆಳವಾದ ಉಸಿರಾಟ ಅಥವಾ ಯಾವುದೇ ಇತರ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿ ಒತ್ತಡವನ್ನು ನಿವಾರಿಸಿ. ಕಣ್ಣು ಮುಚ್ಚಿ ದೀರ್ಘ ಪ್ರಾಣಾಯಾಮ ಮಾಡಿ.
6/ 9
ಸಾಧ್ಯವಾದಷ್ಟು ಮಲಗುವ ಮತ್ತು ತಿನ್ನುವ ಸಾಮಾನ್ಯ ದಿನಚರಿಯನ್ನು ಮುಂದುವರಿಸಿ. ಕಾಲಕಾಲಕ್ಕೆ ಶಿಕ್ಷಕರು ಮತ್ತು ಪೋಷಕರ ಸಹಾಯವನ್ನು ತೆಗೆದುಕೊಳ್ಳಿ.
7/ 9
ಸಾಧ್ಯವಾದಷ್ಟು ಮಲಗುವ ಮತ್ತು ತಿನ್ನುವ ಸಾಮಾನ್ಯ ದಿನಚರಿಯನ್ನು ಮುಂದುವರಿಸಿ. ಕಾಲಕಾಲಕ್ಕೆ ಶಿಕ್ಷಕರು ಮತ್ತು ಪೋಷಕರ ಸಹಾಯವನ್ನು ತೆಗೆದುಕೊಳ್ಳಿ.
8/ 9
ನಿಮ್ಮ ಮೇಲೆ ನಿಮಗೆ ಜಾಸ್ತಿ ನಂಬಿಕೆ ಇರಲಿ. ನಿಮ್ಮಿಂದ ಸಾಧ್ಯ ಎಂದು ಆಗಾಗ ಹೇಳಿಕೊಳ್ಳಿ. ಚೆನ್ನಾಗಿ ತಯಾರಿ ನಡೆಸಿ. . ಪರೀಕ್ಷೆಗಳಿಗೆ ಎಂದಿಗೂ ಭಯಪಡಬೇಡಿ ಮತ್ತು ಮುಖ್ಯವಾಗಿ, ನಿಮ್ಮ ಫಲಿತಾಂಶಗಳ ಬಗ್ಗೆ ಚಿಂತಿಸಬೇಡಿ.
9/ 9
ಬರುವ ಅಂಕವೊಂದೇ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಅದನ್ನು ನೆನಪಿನಲ್ಲಿಡಿ. ಹಾಗಂತ ಓದದೇ ಕೂರಬೇಡಿ.