Education Inflation: ಮಕ್ಕಳ ಕಲಿಕೆಗೆ ತೊಂದರೆ ಮಾಡುತ್ತಿದೆ ಶೈಕ್ಷಣಿಕ ಹಣದುಬ್ಬರ
ಶಾಲಾ ಶುಲ್ಕವೂ ಭಾರೀ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. ಅದಕ್ಕೆ ಹೋಲಿಸಿದರೆ ಸರಕಾರ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿವಿಧ ವಿದ್ಯಾರ್ಥಿ ವೇತನಗಳು ತೀರಾ ಅಲ್ಪ ಎನ್ನಬಹುದು.
ಶಿಕ್ಷಣ ದಿನೆ ದಿನೇ ಕಬ್ಬಿಣದ ಕಡಲೆಯಾಗಿ ಬದಲಾಗುತ್ತಿದೆ. ಯಾಕೆಂದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಆರ್ಥಿಕವಾಗಿ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಶೈಕ್ಷಣಿಕ ಹಣದುಬ್ಬರದಿಂದಾಗಿ ಕಲಿಕೆಗೆ ಅಡ್ಡಿಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗುತ್ತಿದ್ದಾರೆ.
2/ 8
ಏರುತ್ತಿರುವ ಹಣದುಬ್ಬರ ಶಿಕ್ಷಣ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತಿದೆ. ಈ ವರ್ಷ ಅಗತ್ಯ ವಸ್ತುಗಳ ಜೊತೆಗೆ ಶೈಕ್ಷಣಿಕ ವಸ್ತುಗಳ ಮೇಲೂ ಜಿಎಸ್ಟಿ ಜಾರಿಗೆ ಬಂದಿದೆ. ಇದರಿಂದ ಕಚೇರಿಗಳಲ್ಲೂ ಹೊರೆಯಾಗುತ್ತಿದೆ.
3/ 8
ಶಾಲಾ ಶುಲ್ಕವೂ ಭಾರೀ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. ಅದಕ್ಕೆ ಹೋಲಿಸಿದರೆ ಸರಕಾರ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿವಿಧ ವಿದ್ಯಾರ್ಥಿ ವೇತನಗಳು ತೀರಾ ಅಲ್ಪ ಎನ್ನಬಹುದು.
4/ 8
ವಿದ್ಯಾರ್ಥಿವೇತನ ಫಲಾನುಭವಿಗಳು ಪ್ರತಿ ವರ್ಷ ಈ ಮೊತ್ತವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ. ಇಂದಿನ ಮಕ್ಕಳು ನಾಳಿನ ಭವಿಷ್ಯದ ಪ್ರಜೆಗಳು.ದೇಶದ ಭವಿಷ್ಯ ಅವರ ಮೇಲೆ ಅವಲಂಬಿತವಾಗಿದೆ. ಅವರಿಗೆ ಉತ್ತಮ ಶಿಕ್ಷಣ ನೀಡಿದರೆ ಅವರು ಭವಿಷ್ಯದಲ್ಲಿ ಬೆಳೆಯುತ್ತಾರೆ.
5/ 8
ಕೇವಲ ಹಣಕಾಸಿನ ಕಾರಣಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಬಾರದು. ಇದಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ 14 ಬಗೆಯ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮತ್ತು ಇತರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
6/ 8
ಕಳೆದ ಎರಡು ವರ್ಷಗಳಲ್ಲಿ ಹಣದುಬ್ಬರದ ಗ್ರಾಫ್ ಏರಲು ಪ್ರಾರಂಭಿಸಿದೆ. ಅಲ್ಲದೆ, ಈ ವರ್ಷದಿಂದ ಅಗತ್ಯ ವಸ್ತುಗಳು ಶೈಕ್ಷಣಿಕ ಸಾಮಗ್ರಿಗಳ ಮೇಲೆ ಶೇ.18ಜಿಎಸ್ಟಿ ಹೇರುವುದು ಆದ್ದರಿಂದ ಶಿಕ್ಷಣ ದುಬಾರಿಯಾಗಿ ಪರಿಣಮಿಸಿದೆ
7/ 8
1 ರಿಂದ 6ನೇತ ರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ಸಹ ಕಡಿತ ಮಾಡಲಾಗಿದೆ. ಈ ಎಲ್ಲಾ ಸಂಗತಿಗಳೂ ಸಹ ತುಂಬಾ ಕಠಿಣ ಪರಿಸ್ಥಿತಿಯನ್ನು ವಿದ್ಯಾರ್ಥಿಗಳಿಗೆ ತೆರೆದಿಡಲಿದೆ. ಸ್ಕಾಲರ್ ಶಿಪ್ ಮೊತ್ತದ ಬಗ್ಗೆ ದೂರುಗಳ ಮಹಾಪೂರವೇ ಹರಿದು ಬರುತ್ತಿದೆ.
8/ 8
ನೀಡಿದ ಸ್ಕಾಲರ್ ಶಿಪ್ ಕೂಡ ಸಕಾಲಕ್ಕೆ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರೊಟ್ಟಿಗೆ ಶಾಲಾ ಶುಲ್ಕವನ್ನು ಹೆಚ್ಚಿಸುತ್ತಿದ್ದಾರೆ.