School Uniform: ಶಾಲಾ ವಿದ್ಯಾರ್ಥಿಗಳು ಈ ರೀತಿ ಬಟ್ಟೆ ಧರಿಸಬೇಕು
ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ನೀಡಿದ್ದರೂ ಸಹ ಕೆಲವು ವಿದ್ಯಾರ್ಥಿಗಳು ಅದನ್ನು ಪಾಲಿಸುವುದಿಲ್ಲ. ಕೆಲವೊಂದು ಉಡುಪುಗಳನ್ನು ಶಾಲೆಯಲ್ಲಿ ನಿಷೇಧಿಸಲಾಗುತ್ತದೆ. ಇನ್ನು ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಬ್ಬರಿಗೂ ಸಹ ಒಂದೇ ರೀತಿ ಡ್ರೆಸ್ ಕೋಡ್ ಇಡಲಾಗುತ್ತದೆ.
ಶಾಲಾ ಜಿಲ್ಲೆಗಳು ಸಾಮಾನ್ಯವಾಗಿ ಲಿಂಗ ಆಧಾರಿತ ಡ್ರೆಸ್ ಕೋಡ್ಗಳನ್ನು ಹೊಂದಿರುತ್ತದೆ. ವಿದ್ಯಾರ್ಥಿನಿಯರಿಗೆ ನಿರ್ದಿಷ್ಟವಾಗಿ ಸ್ಕರ್ಟ್ ಅಳತೆಯನ್ನು ನಿಗದಿಪಡಿಸಬೇಕು. ಪುರುಷ ವಿದ್ಯಾರ್ಥಿಗಳು ಟಿ ಶರ್ಟ್ ಹಾಕಿಕೊಳ್ಳುವ ಹಾಗಿಲ್ಲ.
2/ 7
ಶಾಲಾ ಉಡುಗೆ ಯಾವಾಗಲೂ ಶಿಸ್ತಿನಿಂದ ಕೂಡಿರಬೇಕು. ಅಸಹ್ಯ ಹಾಗೂ ಅಸಭ್ಯ ಉಡುಗೆ ತೊಡುವಂತಿಲ್ಲ. ಶಾಲಾ ಉಡುಗೆಗೆ ಡ್ರೆಸ್ಸಿಂಗ್ ಕೋಡ್ ನಿಗದಿ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಒಂದೇ ರೀತಿ ಉಡುಪು ಧರಿಸಲು ಸೂಚಿಸುವುದು ಸೂಕ್ತ.
3/ 7
ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ನೀಡಿದ್ದರೂ ಸಹ ಕೆಲವು ವಿದ್ಯಾರ್ಥಿಗಳು ಅದನ್ನು ಪಾಲಿಸುವುದಿಲ್ಲ. ಕೆಲವೊಂದು ಉಡುಪುಗಳನ್ನು ಶಾಲೆಯಲ್ಲಿ ನಿಷೇಧಿಸಲಾಗುತ್ತದೆ. ಇನ್ನು ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಬ್ಬರಿಗೂ ಸಹ ಒಂದೇ ರೀತಿ ಡ್ರೆಸ್ ಕೋಡ್ ಇಡಲಾಗುತ್ತದೆ.
4/ 7
ಪ್ರಾಥಮಿಕ ಹಂತದಲ್ಲಿ ಒಂದು ರೀತಿ ಡ್ರೆಸ್ಸಿಂಗ್ ಕೋಡ್ ಇದ್ದರೆ, ಹೈಸ್ಕೂಲ್ ಲೆವೆಲ್ ಅಲ್ಲಿ ಇನ್ನೊಂದು ರೀತಿ ಚೂಡಿದಾರ್ ಇರುತ್ತದೆ. ಅದಕ್ಕೂ ನಂತರದ ಹಂತದಲ್ಲಿ ಪ್ಯಾಂಟ್ ಶರ್ಟ್ ಇರುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಪಾಲಿಸುವುದು ಮುಖ್ಯ.
5/ 7
ಪ್ರತಿಯೊಂದು ಸರ್ಕಾರಿ ಶಾಲೆಗಳಿಗೂ ಸಹ ಒಂದೇ ರೀತಿಯ ಹಾಗೂ ಒಂದೆ ಬಣ್ಣದ ಉಡುಪನ್ನು ಕರ್ನಾಟಕದ ಎಲ್ಲಾ ಶಾಲೆಗಳಿಗೆ ನೀಡಲಾಗಿದೆ ಇದು ಕೂಡಾ ಒಂದು ಒಳ್ಳೆ ವಿಚಾರ, ಯಾರಲ್ಲಿಯೂ ಅಸಮಾನತೆ ಉಂಟಾಗುವುದಿಲ್ಲ.
6/ 7
ಶಾಲೆಗಳಿಗೆ ಬಣ್ಣ ಬಣ್ಣದ ಬಟ್ಟೆ ಧರಿಸುವುದಕ್ಕಿಂತ ಎಲ್ಲರೂ ಒಂದೇ ರೀತಿಯ ಬಣ್ಣದ ಅಂಗಿ ತೊಡುವುದರಿಂದ ಮನಸು ಆ ವಿಚಾರಕ್ಕೆ ವಿಚಲಿತಗೊಳ್ಳುವುದಿಲ್ಲ. ನಾವೆಲ್ಲಾ ಸಮಾನರು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಬರುವಂತಿರಬೇಕು.
7/ 7
ಶ್ರೀಮಂತ ವಿದ್ಯಾರ್ಥಿಗಳು ಸಾಮಾನ್ಯವಾಗಿ ಹೆಚ್ಚಿನ ಮೌಲ್ಯದ ಫ್ಯಾಷನ್ ಉಡುಪುಗಳನ್ನು ಧರಿಸುತ್ತಾರೆ. ಕಡಿಮೆ ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳು ದಿನವೂ ದುಬಾರಿ ಬೆಲೆಯ ಫ್ಯಾಷನಬಲ್ ಡ್ರೆಸ್ಗಳನ್ನು ಧರಿಸಿದ ವಿದ್ಯಾರ್ಥಿಗಳನ್ನು ಕಂಡಾಗ ಸಾಮಾನ್ಯವಾಗಿ ವಿಚಲಿತರಾಗುತ್ತಾರೆ. ಇದರಿಂದ ಏಕಾಗ್ರತೆಗೆ ಭಂಗ ಬರುತ್ತದೆ. ಆ ಕಾರಣದಿಂದ ಹೀಗಾಗಬಾರದು.