Nursing Exam: ವಿದ್ಯಾರ್ಥಿಗಳಿಂದ ಪರೀಕ್ಷೆಯಲ್ಲಿ ಸಾಮೂಹಿಕ ನಕಲು; ಕಾಲೇಜು ಸಿಬ್ಬಂದಿಯೇ ಸಾಥ್!
ಪ್ರತಿಯೊಬ್ಬ ವಿದ್ಯಾರ್ಥಿಯಿಂದ 10, ಸಾವಿರ ಹಣ ಪಡೆದು ನಕಲು ಮಾಡಲು ಅವಕಾಶ ನೀಡಿರುವ ವಿಷಯವೂ ಹೊರಬಿದ್ದಿದೆ. ದುಡ್ಡಿನ ಆಸೆಗಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಪಾಲಕರು ಹಾಗೂ ಶಿಕ್ಷಕರು ಹಾಳು ಮಾಡುತ್ತಿದ್ದಾರೆ.
ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸ್ ಆಗಬೇಕು ಎನ್ನುವ ಮನೋಭಾವನೆ ಮಕ್ಕಳಿಗಿಲ್ಲ. ಕಾವಲಿಗೆ ನಿಂತ ಶಿಕ್ಷಕರಿಗಾದ್ರು ಇದರ ಬಗ್ಗೆ ಗಮನ ಬೇಡ್ವ? ದಾವಣಗೆರೆಯಲ್ಲಿ ನರ್ಸಿಂಗ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡಿದ್ದಾರೆ.
2/ 8
ವಿದ್ಯಾರ್ಥಿಗಳಿಗೆ ನರ್ಸಿಂಗ್ ಪರೀಕ್ಷೆಯಲ್ಲಿ ನಕಲು ಮಾಡಲು ಕಾಲೇಜು ಸಿಬ್ಬಂದಿ ಸಾಥ್ ನೀಡಿರುವ ವಿಷಯ ತಿಳಿದುಬಂದಿದೆ. ದಾವಣಗೆರೆ ಆಂಜನೇಯ ಬಡಾವಣೆಯಲ್ಲಿರುವ ಸಂಜೀವಿನಿ ನರ್ಸಿಂಗ್ ಕಾಲೇಜ್ ನಲ್ಲಿ ಈ ಘಟನೆ ನಡೆದಿದೆ.
3/ 8
ನರ್ಸಿಂಗ್ ಕಾಲೇಜ್ನ ಮೊದಲ 'ಅನಟಾಮಿಕ್' ವಿಷಯ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ನಕಲು ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಕಾವಲು ಇರುವವರೇ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಾಯ ಮಾಡಿದ್ದಾರೆ.
4/ 8
ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ಹಿಡಿದುಕೊಂಡು ಉತ್ತರವನ್ನು ತಾವೇ ಮೊಬೈಲ್ ಹಿಡಿದು ಕಾಲೇಜ್ ಸಿಬ್ಬಂದಿಗಳೆ ಉತ್ತರವನ್ನು ಹೇಳಿ ಪರೀಕ್ಷೆ ಬರೆಸುತ್ತಿರುವುದು ತಿಳಿದುಬಂದಿದೆ.
5/ 8
ಪ್ರತಿಯೊಬ್ಬ ವಿದ್ಯಾರ್ಥಿಯಿಂದ 10, ಸಾವಿರ ಹಣ ಪಡೆದು ನಕಲು ಮಾಡಲು ಅವಕಾಶ ನೀಡಿರುವ ವಿಷಯವೂ ಹೊರಬಿದ್ದಿದೆ. ದುಡ್ಡಿನ ಆಸೆಗಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಪಾಲಕರು ಹಾಗೂ ಶಿಕ್ಷಕರು ಹಾಳು ಮಾಡುತ್ತಿದ್ದಾರೆ.
6/ 8
ಹಣ ನೀಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಲಾಗಿದ್ದು ಅವರಿಗಷ್ಟೇ ನಕಲು ಮಾಡಲು ಅವಕಾಶ ಮಾಡಿಕೊಡಲಾಗಿದೆ.
7/ 8
ದುಡ್ಡು ನೀಡಿದವರಿಗೆ ಮಾತ್ರ ಉತ್ತರ ಹೇಳಿಕೊಡುತ್ತಿರುವ ಸಿಬ್ಬಂದಿ ಇನ್ನಿತರ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಪರೀಕ್ಷೆ ಮಾಡುತ್ತಿದ್ದಾರೆ. ಹೀಗಾದರೆ ಉಳಿದ ವಿದ್ಯಾರ್ಥಿಗಳ ಗತಿ ಏನಾಗಬಹುದು?
8/ 8
ಕಾಲೇಜು ಸಿಬ್ಬಂದಿಗೆ ನಕಲು ಮಾಡಲು ಅವಕಾಶ ನೀಡಿದ್ರೆ ಸಾಮಾನ್ಯ ವಿದ್ಯಾರ್ಥಿಗಳ ಗತಿ ಏನು? ಎಂಬ ಪ್ರಶ್ನೆ ಬರುತ್ತದೆ. ಇತ್ತೀಚಿಗಷ್ಟೇ ಪರೀಕ್ಷೇ ಬರೆಯದೇ ಇದ್ದರೂ ಅಂಕಪಟ್ಟಿ ಸಿದ್ಧಪಡಿಸಿಕೊಡುವ ಗುಂಪನ್ನು ಹಿಡಿಯಲಾಗಿತ್ತು. ಒಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಹಣದ ಮೇಲೆ ನಿಂತಂತಾಗಿದೆ.