Basavaraj Bommai: ವಿಜ್ಞಾನ ಮೇಳದಲ್ಲೇ ಅಧಿಕಾರಿಗಳ ವಿರುದ್ಧ ಗರಂ ಆದ ಸಿಎಂ ಬೊಮ್ಮಾಯಿ
ಮಕ್ಕಳ ತಂದೆ ತಾಯಂದಿರು ನಮ್ಮ ಮೇಲೆ ಜವಬ್ದಾರಿ ಇಟ್ಟು ಇಲ್ಲಿಗೆ ಕಳುಹಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನಾವು ಕೊಡಬೇಕು. ಯಾವ ಯಾವ ಶಾಲೆಯಲ್ಲಿ ಏನೇನು ಕೊರತೆ ಇದೆ ಎಂದು ಲಿಸ್ಟ್ ಮಾಡಿ ಕೊಡಿ ಅಭಿವೃದ್ಧಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ. ಇನ್ನೂ ಏನು ಅಗೇಬೇಕು ಎಂದು ಪಟ್ಟಿ ಕೊಡಿ ಎಂದು ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ವಿಜ್ಞಾನ ಮೇಳ ಹಿನ್ನೆಲೆ ವಿಜ್ಞಾನ ಮೇಳ ಉದ್ಘಾಟನೆ ಮಾಡಬೇಕಿದ್ದ ಸಿಎಂ ಮೈಸೂರು ಪ್ರವಾಸಕ್ಕೆ ತೆರಳಲು ತಡವಾಗುತ್ತದೆ ಎಂದು ಕಾರ್ಯಕ್ರಮಕ್ಕೆ ಆಗಮಿಸದೇ ಮೈಸೂರಿಗೆ ಹೊರಡುವ ನಿರ್ಧಾರ ಮಾಡಿದ್ದರು ಆದರೆ ಇದು ವಿದ್ಯಾರ್ಥಿಗಳ ಕಾರ್ಯಕ್ರಮ ಎಂದು ತಿಳಿದು ಮರಳಿ ಬಂದಿದ್ದಾರೆ.
2/ 8
ಎಸ್ ಎಂಕೆ ಮನೆಯಿಂದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಸಿಎಂ. ಕೊನೆಗೆ ವಿಜ್ಞಾನ ಮೇಳ ಮಕ್ಕಳ ಕಾರ್ಯಕ್ರಮ ಎಂದು ತಿಳಿದು ಮರಳಿ ಬಂದಿದ್ದಾರೆ. ವಿಜ್ಞಾನ ಮೇಳಕ್ಕೆ ಬರ್ತಿದ್ದಂತೆ ಮಕ್ಕಳ ಬಳಿ ಹೋಗಿ ಸಿಎಂ ಮಾತನಾಡಿಸಿದ್ದಾರೆ. ವಿದ್ಯಾರ್ಥಿಗಳೆಲ್ಲರಿಗೂ ಇದು ಸಂತೋಷ ತಂದಿದೆ.
3/ 8
ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಈ ಮೇಳ ನಡೆಯುತ್ತಿದೆ. ನಾಳೆಯೂ ಇದು ಮುಂದುವರೆಯಲಿದೆ. ಕಾರ್ಯಕ್ರ ಮ ಉದ್ಘಾಟಿಸಿದ ನಂತರ ವಿಜ್ಞಾನ ಮೇಳದಲ್ಲೇ ಅಧಿಕಾರಿ ಗಳಿಗೆ ಸಿಎಂ ಬೊಮ್ಮಾಯಿ ಚಾಟಿ ಬೀಸಿದ್ದಾರೆ. ಶಾಲೆಗಳ ಅಭಿವೃದ್ಧಿ ಆಗದೆ ಇರುವ ವಿಚಾರವಾಗಿ ಅವರು ಮಾತನಾಡಿದ್ದಾರೆ.
4/ 8
ಶಾಲೆಗಳಿಗೆ ಕೊಡುವ ಅನುದಾನ ಜಾಸ್ತಿ ಯಾಗ್ತಿದೆ ಆದರೆ ಶಾಲೆಗಳ ಅಭಿವೃದ್ಧಿ ಮಾತ್ರ ಸರಿಯಾಗಿ ಆಗ್ತಿಲ್ಲ ಎಂದು ಹೇಳಿದ್ದಾರೆ. ಮಕ್ಕಳಿಗೆ ಬೇಕಾಗುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಕೊಡಬೇಕು. ಮೊದಲು ಮಕ್ಕಳ ಭವಿಷ್ಯ, ಆ ನಂತರ ಕಾಂಟ್ಯಾಕ್ಟ್ರರ್ ಕಾಮಗಾರಿ ಎಂದು ಹೇಳಿದ್ದಾರೆ.
5/ 8
ಮಕ್ಕಳ ತಂದೆ ತಾಯಂದಿರು ನಮ್ಮ ಮೇಲೆ ಜವಬ್ದಾರಿ ಇಟ್ಟು ಇಲ್ಲಿಗೆ ಕಳುಹಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನಾವು ಕೊಡಬೇಕು. ಯಾವ ಯಾವ ಶಾಲೆಯಲ್ಲಿ ಏನೇನು ಕೊರತೆ ಇದೆ ಎಂದು ಲಿಸ್ಟ್ ಮಾಡಿ ಕೊಡಿ ಅಭಿವೃದ್ಧಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ. ಇನ್ನೂ ಏನು ಅಗೇಬೇಕು ಎಂದು ಪಟ್ಟಿ ಕೊಡಿ ಎಂದು ಹೇಳಿದ್ದಾರೆ.
6/ 8
ಶಾಲೆಗಳ ಸಮಗ್ರ ಅಭಿವೃದ್ಧಿಗೆ ನಾನು ಅನುದಾನ ಕೊಡ್ತೀನಿ. ಬೆಂಗಳೂರಲ್ಲಿ ಕೂತು ಆಡಳಿತ ಮಾಡೋದಲ್ಲ. ಎಲ್ಲಾ ಅಧಿಕಾರಿಗಳು ಶಾಲೆಗೆ ತೆರಳಿ ನೋಡಿ ಎಂದು ಹೇಳಿದ್ದಾರೆ.
7/ 8
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಈ ಮಕ್ಕಳು ಪಡಿತಾ ಇದ್ದಾರೆ. ಇನ್ನಷ್ಟು ಗುಣಮಟ್ಟದ ಶಿಕ್ಷಣ ಈ ಶಾಲೆಯಲ್ಲಿ ನೀಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸ್ತಾ ಇದ್ದೇವೆ. ಒಂದು ಶಾಲೆ ಕಟ್ಟಲು ೩೦ ಕೋಟಿ ವೆಚ್ಚ ತಗುಲಿದೆ ಎಂದು ಹೇಳಿದ್ದಾರೆ.
8/ 8
ಮಕ್ಕಳಿಗೆ ಬೇಕಾದ ಮೂಲಭೂತ ಸಮಸ್ಯೆ ಬಗೆ ಹರಸಿ ಎಂದು ಒತ್ತಿ ಹೇಳಿದ್ದಾರೆ. ಮಕ್ಕಳ ಈ ಮೇಳ ನೋಡಿ ಬಸವರಾಜ ಬೊಮ್ಮಾಯಿ ಖುಷಿ ಪಟ್ಟಿದ್ದಾರೆ.