Hygiene education: ಶಿಕ್ಷಕರಿಗೆ ನೈರ್ಮಲ್ಯ ಶಿಕ್ಷಣ ತರಬೇತಿ ನೀಡಲು ಕೇಂದ್ರ ಸರ್ಕಾರ ಸೂಚನೆ
ಪ್ರತಿ ಶಾಲೆಯಲ್ಲಿ ಸಾಬೂನಿನಿಂದ ಕೈ ತೊಳೆಯಲು ಸಾಕಷ್ಟು ಸೌಲಭ್ಯಗಳನ್ನು ಒದಗಿಸುವುದು ಮತ್ತು ನೈರ್ಮಲ್ಯ ಶಿಕ್ಷಣವನ್ನು ನೀಡುವುದು ಸಹ ಮುಖ್ಯವಾಗಿದೆ. ಈ ಕಾರಣದಿಂದ ಶಿಕ್ಷರಿಗೆ ಸ್ವಚ್ಛತೆ ಕುರಿತು ತರಬೇತಿ ನೀಡಬೇಕು.
ಮಕ್ಕಳಿಗೆ ನೈರ್ಮಲ್ಯದ ಮಹತ್ವವನ್ನು ವಿವರಿಸಲು ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ.
2/ 8
ಈ ಕಾರ್ಯಕ್ರಮದ ಭಾಗವಾಗಿ, ಕೈ ನೈರ್ಮಲ್ಯ ಮತ್ತು ಜೈವಿಕ ವಿಘಟನೀಯ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆ ಮಾಡಲು ಕೇಂದ್ರವು ಸೂಚಿಸಿದೆ. ಶಾಲೆಯಲ್ಲಿ ಪ್ರತ್ಯೇಕ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದೆ.
3/ 8
ಎಲ್ಲಾ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಉತ್ತಮ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದು, ವಿದ್ಯಾರ್ಥಿಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು ಮತ್ತು ಎಲ್ಲಾ ಸರ್ಕಾರಿ ಶಾಲೆಗಳನ್ನು ಸ್ವಚ್ಛವಾಗಿಡುವುದು ಶಿಕ್ಷಕರ ಜವಾಬ್ಧಾರಿಯಾಗಬೇಕು ಎಂದು ಹೇಳಿದ್ದಾರೆ.
4/ 8
ಶಿಕ್ಷಣ ಸಚಿವಾಲಯ, ಜಲ ಶಕ್ತಿ ಮಂಡಲ್, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು NITI ಆಯೋಗ್ ಜಂಟಿಯಾಗಿ ಈ ಗುರಿಗಳನ್ನು ನಿಗದಿಪಡಿಸಿದೆ. ಜನರ ಜೀವನಶೈಲಿಯನ್ನು ಸುಧಾರಿಸಲು ಗ್ರಾಮೀಣ ಸ್ವಚ್ಛ ಭಾರತ್ ಮಿಷನ್ ಮತ್ತು ಜಲಜೀವನ್ ಮಿಷನ್ನಂತಹ ಯೋಜನೆಗಳನ್ನು ಅನುಸರಿಸುವುದು ಮುಖ್ಯವಾಗಿದೆ.
5/ 8
ಗ್ರಾಮೀಣ ಸ್ವಚ್ಛ ಭಾರತ್ ಮಿಷನ್ ಹಂತ-II ಭಾಗವಾಗಿ, ಇದು ಬಯಲು ಶೌಚ ನಿರ್ಮೂಲನೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಕಾರ್ಯಕ್ರಮಗಳ ಮೇಲೆ ಕೇಂದ್ರೀಕರಿಸಿದೆ. ಪ್ರತಿಯೊಬ್ಬರೂ ಈ ನೀತಿಯನ್ನು ಅನುಸರಿಸಬೇಕು ಮತ್ತು ದೇಶಾದ್ಯಂತ ಎಲ್ಲಾ ಶಾಲೆಗಳು ಇದನ್ನು ಪಾಲಿಸಬೇಕು.
6/ 8
ಶಾಲೆಗಳಲ್ಲಿ ಕೊಳೆಯುವ ತ್ಯಾಜ್ಯ ನಿರ್ವಹಣೆ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಈ ಅಭಿಯಾನದ ಅಂಗವಾಗಿ, ಶಾಲೆಯಲ್ಲಿ ಶೌಚಾಲಯಗಳು ಸಮರ್ಪಕವಾಗಿರಬೇಕು ಎಂದು ತಿಳಿಸಲಾಗಿದೆ.
7/ 8
ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆಶಿಕ್ಷಣ (2021-2022) ವರದಿಯ ಪ್ರಕಾರ, ಕೆಲವು ಶಾಲೆಗಳಲ್ಲಿ ಸಾಕಷ್ಟು ಶೌಚಾಲಯಗಳು ಮತ್ತು ಕೈ ತೊಳೆಯುವ ಸೌಲಭ್ಯಗಳ ಕೊರತೆ ಕಂಡುಬಂದಿದೆ. ಪ್ರತಿ ಶಾಲೆಯಲ್ಲಿ ಸಾಬೂನಿನಿಂದ ಕೈ ತೊಳೆಯಲು ಸಾಕಷ್ಟು ಸೌಲಭ್ಯಗಳನ್ನು ಒದಗಿಸುವುದು ಮತ್ತು ನೈರ್ಮಲ್ಯದ ಎಲ್ಲಾ ಅಂಶಗಳೊಂದಿಗೆ ನೈರ್ಮಲ್ಯ ಶಿಕ್ಷಣವನ್ನು ನೀಡುವುದು ಸಹ ಮುಖ್ಯವಾಗಿದೆ.
8/ 8
ಪ್ರತಿ ಶಾಲೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕರಿಗೆ ನೈರ್ಮಲ್ಯ ಶಿಕ್ಷಣದ ಬಗ್ಗೆ ತರಬೇತಿ ನೀಡಬೇಕು ಮತ್ತು ಈ ಮೂಲಕ ವಿದ್ಯಾರ್ಥಿಗಳಿಗೆ ನೈರ್ಮಲ್ಯದ ಮಹತ್ವದ ಕುರಿತು ಆಸಕ್ತಿದಾಯಕ ಚಟುವಟಿಕೆ ಮಾಡಿಸಬೇಕು ಎಂದು ಸೂಚಿಸಲಾಗಿದೆ.