CBSE Board Exams 2023: ಹತ್ತು ಹಾಗೂ ಹನ್ನೆರಡನೇ ತರಗತಿ ವೇಳಾಪಟ್ಟಿ ಬಿಡುಗಡೆ, ಇಲ್ಲಿ ಪರಿಶೀಲಿಸಿ
10, 12 ನೇ ತರಗತಿಯ ಪರೀಕ್ಷೆ ಬೆಳಗ್ಗೆ 10.30ಕ್ಕೆ ಆರಂಭವಾಗಿ ಮಧ್ಯಾಹ್ನ 1.30ಕ್ಕೆ ಮುಕ್ತಾಯವಾಗಲಿದೆ. ಅಧಿಕೃತ ಸೂಚನೆಯ ಪ್ರಕಾರ, ಮಂಡಳಿಯು ಜೆಇಇ ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ಪರಿಗಣಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಈ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
CBSE ಬೋರ್ಡ್ ಪರೀಕ್ಷೆ 2023ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. CBSE ಯ ಅಧಿಕೃತ ವೆಬ್ಸೈಟ್ ನಲ್ಲಿ 10, 12 ನೇ ತರಗತಿಯ ದಿನಾಂಕದ ಪಟ್ಟಿಯನ್ನು ಪರಿಶೀಲಿಸಬಹುದು. ಅಧಿಕೃತ ಜಾಲತಾಣದ ಮಾಹಿತಿ ಇಲ್ಲಿ ನೀಡಲಾಗಿದೆ.
2/ 8
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ CBSE ಬೋರ್ಡ್ ಎಕ್ಸಾಮ್ಸ್ 2023 ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮೊದಲೇ ಪರೀಕ್ಷಾ ಆರಂಭ ದಿನಾಂಕ ಸೂಚಿಸಲಾಗಿತ್ತು ಆ ದಿನಾಂಕದ ಪ್ರಕಾರವೇ ಈಗ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
3/ 8
10, 12ನೇ ತರಗತಿಯ ವೇಳಾಪಟ್ಟಿ ಅನ್ನು ಮಂಡಳಿ ಒಂದೇ ನೋಟೀಸ್ನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ನಲ್ಲಿ CBSE ಯ ಅಧಿಕೃತ ಸೈಟ್ನಲ್ಲಿ 10, 12 ನೇ ತರಗತಿಯ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.
4/ 8
10 ನೇ ತರಗತಿ ಅಥವಾ ಮಾಧ್ಯಮಿಕ ಪರೀಕ್ಷೆಯು ಫೆಬ್ರವರಿ 15 ರಂದು ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 21, 2023 ರಂದು ಕೊನೆಗೊಳ್ಳುತ್ತದೆ. 12 ನೇ ತರಗತಿ ಅಥವಾ ಹಿರಿಯ ಮಾಧ್ಯಮಿಕ ಪರೀಕ್ಷೆಯು ಫೆಬ್ರವರಿ 15 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 5, 2023 ರಂದು ಕೊನೆಗೊಳ್ಳುತ್ತದೆ.
5/ 8
10, 12 ನೇ ತರಗತಿಯ ಪರೀಕ್ಷೆ ಬೆಳಗ್ಗೆ 10.30ಕ್ಕೆ ಆರಂಭವಾಗಿ ಮಧ್ಯಾಹ್ನ 1.30ಕ್ಕೆ ಮುಕ್ತಾಯವಾಗಲಿದೆ. ಅಧಿಕೃತ ಸೂಚನೆಯ ಪ್ರಕಾರ, ಮಂಡಳಿಯು ಜೆಇಇ ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ಪರಿಗಣಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಈ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
6/ 8
ಒಂದೇ ದಿನಾಂಕದಂದು ಎರಡು ಪರೀಕ್ಷೆಗಳು ಬರದಂತೆ ಸರಿಯಾದ ಕ್ರಮ ಅನ್ವಯಿಸಿ. ಅಂಕಪಟ್ಟಿ ರಚಿಸಲಾಗಿದೆ. ಇದರ ಅನ್ವಯ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ತಯಾರಿನಡೆಸಬೇಕು.
7/ 8
ಸಾಮಾನ್ಯವಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಪರೀಕ್ಷೆ ನಡೆಯುವುದಕ್ಕಿಂತ 45 ದಿನ ಮುಂಚಿತವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು ಅದೇ ರೀತಿ ಪರೀಕ್ಷೆಗೆ ಎರಡು ತಿಂಗಳಿರುವಾಗಲೇ ಬಿಡುಗಡೆ ಮಾಡಲಾಗಿದೆ.
8/ 8
ನಕಲಿ ದಾಖಲೆಯಲ್ಲೂ ಸಹ ಫೆಬ್ರವರಿ 15 ರಂದು ಪರೀಕ್ಷೆಗಳು ಪ್ರಾರಂಭವಾಗುತ್ತವೆ ಎಂದು ಪ್ರಕಟವಾಗಿತ್ತು ಆದರೆ ಯಾವುದೇ ಅಧಿಕೃತ ಮಾಹಿತಿಯನ್ನು CBSE ಬಿಡುಗಡೆ ಮಾಡಿರಲಿಲ್ಲ. ಆದರೆ ಈಗ ಅಧಿಕೃತವಾಗಿ ವೇಳಾಪಟ್ಟಿ ಬಿಡುಗಡೆಯಾಗಿದೆ.