ಮಕ್ಕಳಿಗಾಗಿ ಹಲವಾರು ಕಡೆ ಬೇಸಿಗೆ ಶಿಬಿರಗಳು ಆರಂಭವಾಗಿದೆ. ನೀವು ನಿಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳಿಸುವ ಇಚ್ಚೆ ಹೊಂದಿದ್ದರೆ ಖಂಡಿತ ಈ ಶಿಬಿರಕ್ಕೆ ಕಳಿಸಬಹುದು. ಪ್ರಾಯೋಗಿಕ ವಿಧಾನದ ಮೂಲಕ ಹೊರಾಂಗಣದಲ್ಲಿ ನೀವು ಈ ಶಿಬಿರದ ಅನುಭವವನ್ನು ಪಡೆದುಕೊಳ್ಳಬಹುದು. ಅತ್ಯಂತ ಮೋಜಿನ ದಿನಗಳನ್ನು ಇಲ್ಲಿ ಕಳೆಯಬಹುದು. ಹೊರಾಂಗಣ ಮತ್ತು ಪ್ರಕೃತಿಯ ಅನುಭವಗಳ ಸಂತೋಷವನ್ನು ಹಂಚಿಕೊಳ್ಳಲು ಈಗಿನ ಮಕ್ಕಳಿಗೆ ಅನುಕೂಲ ಆಗುವಂತೆ ಈ ಶಿಬಿರವನ್ನು ರೂಪಿಸಲಾಗಿದೆ. 09-15 ವರ್ಷ ವಯಸ್ಸಿನ ಮಕ್ಕಳಿಗಾಗಿ ಹೊರಾಂಗಣ ಸಾಹಸ ಶಿಬಿರವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ ಈ ವರ್ಷವೂ ಈ ಶಿಬಿರ ನಡೆಯುತ್ತಿದೆ. ಸೂಕ್ತವಾದ ಅರಣ್ಯ ಪ್ರದೇಶದ ಪ್ರಶಾಂತವಾದ ನೈಸರ್ಗಿಕ ಹೊರಾಂಗಣದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ನೀವೂ ಈ ಶಿಬಿರದಲ್ಲಿ ಆತಂಕವಿಲ್ಲದೆ ಭಾಗಿಯಾಗಬಹುದು. ಸದಾ ಶಾಲೆಯಲ್ಲೇ ಪಾಠ ಕೇಳಿ ಮನರಂಜೆಯನ್ನು ಮಿಸ್ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಇದು ತುಂಬಾ ಸಹಾಯವಾಗಲಿದೆ. ಈ ಲಿಂಕ್ ಬಳಸಿ ನೋಂದಾಯಿಸಿ ಇಲ್ಲಿ ಕ್ಲಿಕ್ ಮಾಡಿ ನೀವು ಬೆಂಗಳೂರಿನ ಬಳಿ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಹುಡುಕುತ್ತಿದ್ದರೆ ಈ ಶಿಬಿರಕ್ಕೆ ಹೋಗಬಹುದು. ಸ್ವಾವಲಂಬನೆ, ಸ್ವಾತಂತ್ರ್ಯ, ಧೈರ್ಯ, ಜೀವನ ಕೌಶಲ್ಯ, ಮೌಲ್ಯ ಶಿಕ್ಷಣ, ಸಾಹಸದ ಮನೋಭಾವವನ್ನು ಬೆಳೆಸಿಕೊಳ್ಳಲು ಇಂತಹ ಶಿಬಿರಕ್ಕೆ ಮಕ್ಕಳನ್ನು ಕಳುಹಿಸಲೇ ಬೇಕು.