Chamarajanagar: ಬಂಡೀಪುರ ಅಭಯಾರಣ್ಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಫಾರಿ!
ವಿದ್ಯಾರ್ಥಿಗಳ ಸಫಾರಿಗಾಗಿ 2 ಬಸ್ಗಳ ಖರೀದಿಸಿರುವ ಅರಣ್ಯ ಇಲಾಖೆ ಮಕ್ಕಳನ್ನು ವರ್ಷವಿಡೀ ಅಭಯಾರಣ್ಯ ನೋಡಲು ಕರೆದೊಯ್ಯುವ ಜವಾಬ್ಧಾರಿ ಹೊಂದಿದೆ. ಇದಲ್ಲದೆ ನಾಳೆ ಬಂಡೀಪುರದಲ್ಲಿ 22 ನೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಲ್ಲಿ ಕೇಂದ್ರ ಅರಣ್ಯ ಸಚಿವರು ಭಾಗಿಯಾಗಲಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಬಂಡೀಪುರಕ್ಕೆ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಮಿತ್ರ ಯೋಜನೆಗೆ ಚಾಲನೆ ದೊರೆಯಲಿದೆ.
2/ 8
ಬಂಡೀಪುರ ಅಭಯಾರಣ್ಯದಲ್ಲಿ ಮಕ್ಕಳಿಗೆಂದೇ ವಿಶೇಷ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಾಣಿಗಳ ಕುರತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.
3/ 8
ಯಾವುದು ಈ ಯೋಜನೆ? ಏನಿದರ ವಿಶೇಷತೆ? ಎಂದು ನೋಡುವುದಾದರೆ. ಬಂಡೀಪುರದಲ್ಲಿ ಬಂಡೀಪುರ ಯುವ ಮಿತ್ರ ಯೋಜನೆಗೆ ಎಂಬ ಹೆಸರಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
4/ 8
ಮಕ್ಕಳಿಗೆ ಅರಣ್ಯ ಹಾಗೂ ಕಾಡು ಪ್ರಾನಿಗಳು ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸುವುದು ಇಂದಿನ ಕಾಲಮಾನದಲ್ಲಿ ಬಹಳ ಮುಖ್ಯವಾಗಿದೆ. ಆ ನಿಟ್ಟಿನಲ್ಲೇ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
5/ 8
ಶಾಲಾ ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಜಾಗೃತಿಗೆ ಜಾರಿಗೆ ತರುತ್ತಿರುವ ಬಂಡೀಪುರ ಯುವ ಮಿತ್ರ ಎಲ್ಲಾ ರೀತಿಯ ಸೌಕರ್ಯವನ್ನೂ ಸಹ ವಿದ್ಯಾರ್ಥಿಗಳಿಗೆ ನೀಡಲಿದೆ.
6/ 8
ಬಂಡೀಪುರ ಸುತ್ತಮುತ್ತಲಿನ 140 ಗ್ರಾಮಗಳ ಶಾಲಾ ಮಕ್ಕಳಿಗೆ ಉಚಿತ ಸಫಾರಿ ಹಾಗು ಕಾರ್ಯಾಗಾರ ಮಾಡುವ ಆಶಯವನ್ನು ಬಂಡೀಪುರ ಯುವ ಮಿತ್ರ ಹೊಂದಿದೆ.
7/ 8
ವಿದ್ಯಾರ್ಥಿಗಳ ಸಫಾರಿಗಾಗಿ 2 ಬಸ್ಗಳ ಖರೀದಿಸಿರುವ ಅರಣ್ಯ ಇಲಾಖೆ ಮಕ್ಕಳನ್ನು ವರ್ಷವಿಡೀ ಅಭಯಾರಣ್ಯ ನೋಡಲು ಕರೆದೊಯ್ಯುವ ಜವಾಬ್ಧಾರಿ ಹೊಂದಿದೆ. ಇದಲ್ಲದೆ ನಾಳೆ ಬಂಡೀಪುರದಲ್ಲಿ 22 ನೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಲ್ಲಿ ಕೇಂದ್ರ ಅರಣ್ಯ ಸಚಿವರು ಭಾಗಿಯಾಗಲಿದ್ದಾರೆ.
8/ 8
ಬುಡಕಟ್ಟು ಜನರು ಲಂಟಾನಾ ಬಳಸಿ ತಯಾರಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ಹಾಗು ಮಾರಾಟ ಮಳಿಗೆ ಕೂಡ ನಾಳೆ ಬಂಡೀಪುರದಲ್ಲಿ ಉದ್ಘಾಟನೆಯಾಗಲಿದೆ.