Archaeology: ಪುರಾತತ್ವ ಇಲಾಖೆಗೆ ಸೇರಿಕೊಳ್ಬೇಕಾ? ಹಾಗಾದ್ರೆ ಈ ಕೋರ್ಸ್ ಮಾಡಿ
ಹಿಂದಿನ ಕಾಲದ ಎಷ್ಟೋ ಅಚ್ಚರಿಯ ಬೆಚ್ಚಿಬೀಳಿಸುವ ವಿಷಯಗಳನ್ನು ಪತ್ತೆ ಹಚ್ಚಿದ್ದ್ದೇ ಪುರಾತತ್ವ ಇಲಾಖೆ. ನೀವೂ ಸಹ ಈ ಕ್ಷೇತ್ರದಲ್ಲಿ ಆಸಕ್ತಿಹೊಂದಿದ್ದರೆ ಖಂಡಿತ ಇದನ್ನು ಕಲಿಯಬಹುದು. ಭಾರತದಲ್ಲಿ ಈ ಕೋರ್ಸ್ ನೀಡುವ ಹಲವಾರು ಕಾಲೇಜುಗಳು ಲಭ್ಯವಿದೆ
ಹಿಂದಿನ ಕಾಲದ ಮಾನವ ಸಮಾಜಗಳ ಅಭಿವೃದ್ಧಿ ಬಗೆಗಿನ ಅಧ್ಯಯನವನ್ನು ಪುರಾತತ್ವ ಶಾಸ್ತ್ರ ಎಂದು ಕರೆಯಲಾಗುತ್ತದೆ. ಇಂದಿಗೂ ಸಹ ಇದರ ಕುರಿತು ಹಲವಾರು ಜನ ಆಸಕ್ತಿ ಹೊಂದಿದ್ದಾರೆ. ಹಸ್ತಕೃತಿಗಳು, ವಾಸ್ತುಶಿಲ್ಪ ಮತ್ತು ಪಳೆಯುಳಿಕೆಗಳನ್ನು ಇದರಲ್ಲಿ ಅಧ್ಯಯನ ಮಾಡಲಾಗುತ್ತದೆ.
2/ 7
ಇತಿಹಾಸದಲ್ಲಿ ಏನಾಗಿತ್ತು? ಹಳೆ ಕಾಲದಲ್ಲಿ ಸಮಾಜ ಹೇಗಿತ್ತು? ಎಂಬ ಸಂಶೋಧನೆಯನ್ನು ಈ ಕಾಲದಲ್ಲಿ ಮಾಡಲು ಇದು ಸಹಾಯ ಮಾಡುತ್ತದೆ. ವಿಜ್ಞಾನ ಮತ್ತು ಮನುಕುಲ ಎರಡರ ಅಧ್ಯಯನವನ್ನು ಇದರಲ್ಲೇ ಮಾಡಬಹುದು.
3/ 7
ಹಿಂದಿನ ಕಾಲದ ಎಷ್ಟೋ ಅಚ್ಚರಿಯ ಬೆಚ್ಚಿಬೀಳಿಸುವ ವಿಷಯಗಳನ್ನು ಪತ್ತೆ ಹಚ್ಚಿದ್ದ್ದೇ ಪುರಾತತ್ವ ಇಲಾಖೆ. ನೀವೂ ಸಹ ಈ ಕ್ಷೇತ್ರದಲ್ಲಿ ಆಸಕ್ತಿಹೊಂದಿದ್ದರೆ ಖಂಡಿತ ಇದನ್ನು ಕಲಿಯಬಹುದು. ಭಾರತದಲ್ಲಿ ಈ ಕೋರ್ಸ್ ನೀಡುವ ಹಲವಾರು ಕಾಲೇಜುಗಳು ಲಭ್ಯವಿದೆ.
4/ 7
ಮೈಸೂರಿನ ಮಹಾರಾಜಾ ಕಾಲೇಜಿನಲ್ಲೂ ಈ ಕೋರ್ಸ್ ಲಭ್ಯವಿದೆ. ಈಗಾಗಲೇ ಹಲವಾರು ವಿದ್ಯಾರ್ಥಿಗಳು ಈ ಕೋರ್ಸ್ ಮಾಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಧಾರವಾಡ ಯುನಿವರ್ಸಿಟಿಯಲ್ಲೂ ನೀವು ಈ ಕೋರ್ಸ್ ಮಾಡಬಹುದು.
5/ 7
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲೂ ಸಹ ನೀವು ಈ ಕೋರ್ಸ್ ಮಾಡಬಹುದು. ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲೂ ಸಹ ಈ ಕೋರ್ಸ್ ಲಭ್ಯವಿದೆ. ನೀವು ಆಸಕ್ತಿ ಹೊಂದಿದ್ದರೆ ಈ ಕೊರ್ಸ್ ಮಾಡಿ.
6/ 7
ಸಮೀಕ್ಷೆ, ಉತ್ಖನನ ಮತ್ತು ಕೆಲವು ಶಾಸಗಳನ್ನು ಪತ್ತೆ ಹಚ್ಚಿ ಅದನ್ನು ಓದುವ ಹಲವು ಕೌಶಲ್ಯಗಳನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ. 19ನೇ ಶತಮಾನದಲ್ಲಿ ಪುರಾತನ ವಸ್ತು ಶೋಧನೆಯಿಂದ ಅಭಿವೃದ್ಧಿಗೊಂಡಿತು ಆಗಿನಿಂದ ನಮ್ಮಲ್ಲಿ ಹೆಚ್ಚಿನ ಸಂಶೋಧನೆಗಳು ಆರಂಭವಾಗಿದೆ.
7/ 7
ಕಡಲತಡಿಯ ಪುರಾತತ್ತ್ವ ಶಾಸ್ತ್ರ, ಸ್ತ್ರೀಸಮಾನತಾವಾದಿ ಪುರಾತತ್ತ್ವ ಶಾಸ್ತ್ರ ಮತ್ತು ಪುರಾತನ-ಖಗೋಳವಿಜ್ಞಾನ ಹೀಗೆ ಅದರಲ್ಲೇ ಕೆಲವೊಂದು ವಿಭಾಗಗಳೂ ಸಹ ಇದೆ.