Bengaluru: ಸುಸೂತ್ರವಾಗಿ ನಡೆದ ಮೊದಲನೇ ದಿನದ CET ಪರೀಕ್ಷೆ

ಬೆಂಗಳೂರಿನ 121 ಕೇಂದ್ರಗಳು ಸೇರಿದಂತೆ ರಾಜ್ಯದ ಎಲ್ಲಾ 592 ಕೇಂದ್ರಗಳಲ್ಲಿ ಪರೀಕ್ಷೆಯು ಪಾರದರ್ಶಕವಾಗಿ ನಡೆದಿದೆ. ವಿದ್ಯಾರ್ಥಿಗಳೆಲ್ಲಾ ತುಂಬಾ ಸುಸೂತ್ರವಾಗಿ ಮೊದಲ ದಿನದ ಪರೀಕ್ಷೆ ಬರೆದಿದ್ದಾರೆ.

First published:

  • 17

    Bengaluru: ಸುಸೂತ್ರವಾಗಿ ನಡೆದ ಮೊದಲನೇ ದಿನದ CET ಪರೀಕ್ಷೆ

    ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ -23) ನಿನ್ನೆ ಸುಸೂತ್ರವಾಗಿ ನಡೆದಿದೆ. ಕೊನೆ ಕ್ಷಣದಲ್ಲಿ ಬದಲಾಯಿಸಿದ ಸಮಯದ ಹೊರತಾಗಿಯೂ ಎಲ್ಲರೂ ಹಾಜರಾಗಿದ್ದಾರೆ.

    MORE
    GALLERIES

  • 27

    Bengaluru: ಸುಸೂತ್ರವಾಗಿ ನಡೆದ ಮೊದಲನೇ ದಿನದ CET ಪರೀಕ್ಷೆ

    ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಪರೀಕ್ಷೆ ಬರೆದ ವಿಧ್ಯಾರ್ಥಿಗಳು ಮುಂದಿನ ಪರೀಕ್ಷೆಗೆ ಮತ್ತೆ ತಯಾರಿ ನಡೆಸಿದ್ದಾರೆ. ಟ್ರಾಫಿಕ್​ ಸಮಸ್ಯೆ ಆಗಬಹುದು ಎಂಬ ಗೊಂದಲದಿಂದ ಭಯಗೊಂಡಿದ್ದ ವಿದ್ಯಾರ್ಥಿಗಳಿಗೆ ಹಾಗೇನೂ ಆಗಿಲ್ಲ.

    MORE
    GALLERIES

  • 37

    Bengaluru: ಸುಸೂತ್ರವಾಗಿ ನಡೆದ ಮೊದಲನೇ ದಿನದ CET ಪರೀಕ್ಷೆ

    ಬೆಂಗಳೂರಿನ 121 ಕೇಂದ್ರಗಳು ಸೇರಿದಂತೆ ರಾಜ್ಯದ ಎಲ್ಲಾ 592 ಕೇಂದ್ರಗಳಲ್ಲಿ ಪರೀಕ್ಷೆಯು ಪಾರದರ್ಶಕವಾಗಿ ನಡೆದಿದೆ. ವಿದ್ಯಾರ್ಥಿಗಳೆಲ್ಲಾ ತುಂಬಾ ಸುಸೂತ್ರವಾಗಿ ಮೊದಲ ದಿನದ ಪರೀಕ್ಷೆ ಬರೆದಿದ್ದಾರೆ.

    MORE
    GALLERIES

  • 47

    Bengaluru: ಸುಸೂತ್ರವಾಗಿ ನಡೆದ ಮೊದಲನೇ ದಿನದ CET ಪರೀಕ್ಷೆ

    ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟು ನೋಂದಾಯಿಸಿದ್ದ 2,61,610 ವಿದ್ಯಾರ್ಥಿಗಳ ಪೈಕಿ ಜೀವಶಾಸ್ತ್ರ ಪರೀಕ್ಷೆಗೆ 2,00,457 (82.53%) ಹಾಗೂ ಗಣಿತ ಪರೀಕ್ಷೆಗೆ 2,39,716 (93.78%) ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

    MORE
    GALLERIES

  • 57

    Bengaluru: ಸುಸೂತ್ರವಾಗಿ ನಡೆದ ಮೊದಲನೇ ದಿನದ CET ಪರೀಕ್ಷೆ

    ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಕಾರಣ ಮುನ್ನೆಚ್ಙರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದ ಕೆಇಎ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಯಶಸ್ವಿಯಾಗಿದೆ.

    MORE
    GALLERIES

  • 67

    Bengaluru: ಸುಸೂತ್ರವಾಗಿ ನಡೆದ ಮೊದಲನೇ ದಿನದ CET ಪರೀಕ್ಷೆ

    ವಾಹನ ದಟ್ಟಣೆಯಲ್ಲಿ ಸಿಲುಕಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ತಲುಪುವುದು ತಡವಾಗಬಾರದೆಂದು ಕ್ರಮ ಕೈಗೊಳ್ಳಲಾಗಿತ್ತು. ಬೆಂಗಳೂರಿನ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವವರಿಗೆ ನಿಗದಿತ ಸಮಯಕ್ಕಿಂತ 2 ಗಂಟೆ ಮುಂಚಿತವಾಗಿ ಆಯಾ ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿತ್ತು.

    MORE
    GALLERIES

  • 77

    Bengaluru: ಸುಸೂತ್ರವಾಗಿ ನಡೆದ ಮೊದಲನೇ ದಿನದ CET ಪರೀಕ್ಷೆ

    ಇಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ನಿಗದಿಯಾಗಿರುವ ಎರಡನೇ ದಿನದ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಎಂದಿನಿಂತೆ ಇಂದೂ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ಆಗಮನಿಸಿದ್ದಾರೆ.

    MORE
    GALLERIES