Kannada Medium Students: ಓದಿನಲ್ಲಿ ಹಿಂದೆ ಬಿದ್ದ ಕನ್ನಡ ಮಾಧ್ಯಮದ ಶೇ.60ರಷ್ಟು ಮಕ್ಕಳು; ವರದಿಯಲ್ಲಿ ಬಹಿರಂಗ

ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಮಾತೃಭಾಷೆಯಾದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿದ್ದಾರೆ. ಹೊಸ ವರದಿಯಲ್ಲಿ ಕನ್ನಡ ಮಾಧ್ಯಮದ ಶಾಲಾ ಮಕ್ಕಳ ಶೈಕ್ಷಣಿಕ ಮಟ್ಟದ ಬಗ್ಗೆ ಆಘಾತಕಾರಿ ಅಂಶ ಹೊರ ಬಿದ್ದಿದೆ. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಶೇ.60ರಷ್ಟು ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿದ್ದಾರಂತೆ.

First published:

 • 17

  Kannada Medium Students: ಓದಿನಲ್ಲಿ ಹಿಂದೆ ಬಿದ್ದ ಕನ್ನಡ ಮಾಧ್ಯಮದ ಶೇ.60ರಷ್ಟು ಮಕ್ಕಳು; ವರದಿಯಲ್ಲಿ ಬಹಿರಂಗ

  ಬರೋಬ್ಬರಿ ಶೇ.60ರಷ್ಟು ಕನ್ನಡ ಮಾಧ್ಯಮದ ಮಕ್ಕಳು ಸಾಮಾನ್ಯ ಶೈಕ್ಷಣಿಕ ಮಟ್ಟಕ್ಕಿಂತ ಕಡಿಮೆ ಇದ್ದಾರೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ವರದಿಯಲ್ಲಿ ತಿಳಿದು ಬಂದಿದೆ. ಇದರಿಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕರು, ಮಕ್ಕಳ ಪೋಷಕರಿಗೆ ಆಘಾತವಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Kannada Medium Students: ಓದಿನಲ್ಲಿ ಹಿಂದೆ ಬಿದ್ದ ಕನ್ನಡ ಮಾಧ್ಯಮದ ಶೇ.60ರಷ್ಟು ಮಕ್ಕಳು; ವರದಿಯಲ್ಲಿ ಬಹಿರಂಗ

  ನಿಪುಣ್ ಭಾರತ್ ಅಡಿಯಲ್ಲಿ ಸಮೀಕ್ಷೆಗೆ ಕನ್ನಡ ಮಾಧ್ಯಮದ ಶಾಲಾ ಮಕ್ಕಳನ್ನು ಒಳಪಡಿಸಲಾಗಿತ್ತು. ತಿಳುವಳಿಕೆ ಮತ್ತು ಸಂಖ್ಯಾಶಾಸ್ತ್ರ ಸಂಬಂಧ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿದಾಗ ಸಾಮಾನ್ಯ ಶೈಕ್ಷಣಿಕ ಮಟ್ಟಕ್ಕಿಂತ ಕಡಿಮೆ ಇರುವುದು ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Kannada Medium Students: ಓದಿನಲ್ಲಿ ಹಿಂದೆ ಬಿದ್ದ ಕನ್ನಡ ಮಾಧ್ಯಮದ ಶೇ.60ರಷ್ಟು ಮಕ್ಕಳು; ವರದಿಯಲ್ಲಿ ಬಹಿರಂಗ

  ಸರ್ಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಶಾಲಾ ಆಧಾರಿತ ಕಾರ್ಯಕ್ಷಮತೆ ಪರೀಕ್ಷೆಯಲ್ಲಿ ವಿವಿಧ ಮಾಧ್ಯಮಗಳಲ್ಲಿ ಓದುತ್ತಿರುವ 3 ವಿದ್ಯಾರ್ಥಿಗಳನ್ನು ಮೌಖಿಕವಾಗಿ ಪರೀಕ್ಷಿಸಲಾಯಿತು. (ಸಾಂಕೇತಿಕ ಚಿತ್ರ)

  MORE
  GALLERIES

 • 47

  Kannada Medium Students: ಓದಿನಲ್ಲಿ ಹಿಂದೆ ಬಿದ್ದ ಕನ್ನಡ ಮಾಧ್ಯಮದ ಶೇ.60ರಷ್ಟು ಮಕ್ಕಳು; ವರದಿಯಲ್ಲಿ ಬಹಿರಂಗ

  NCERT ಸಮೀಕ್ಷೆ ಪ್ರಕಾರ ಶೇ.18ರಷ್ಟು ಮಕ್ಕಳು 13 ಪದಗಳನ್ನು ಮಾತ್ರ ಓದಬಲ್ಲರಾಗಿದ್ದಾರೆ. ಶೇ. 38 ವಿದ್ಯಾರ್ಥಿಗಳು 14 ರಿಂದ 29 ಪದಗಳವರೆಗೆ ಓದುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಶೇ. 28 ರಷ್ಟು ಮಕ್ಕಳು 48 ಪದಗಳನ್ನು ಓದಿದರೆ, ಶೇ.16 ಕ್ಕಿಂತ ಕಡಿಮೆ ಮಕ್ಕಳು 49 ಪದಗಳನ್ನು ಮಾತ್ರ ಓದಬಲ್ಲವರಾಗಿದ್ದಾರೆ. .(ಸಾಂಕೇತಿಕ ಚಿತ್ರ)

  MORE
  GALLERIES

 • 57

  Kannada Medium Students: ಓದಿನಲ್ಲಿ ಹಿಂದೆ ಬಿದ್ದ ಕನ್ನಡ ಮಾಧ್ಯಮದ ಶೇ.60ರಷ್ಟು ಮಕ್ಕಳು; ವರದಿಯಲ್ಲಿ ಬಹಿರಂಗ

  ಶೇ. 38 ರಷ್ಟು ಮಕ್ಕಳು ಮಾತ್ರ ಸೀಮಿತ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿದ್ದು ಓದುವಲ್ಲಿ ಉತ್ತಮವಾಗಿದ್ದಾರೆ ಎಂದು ವರದಿ ಹೇಳಿದೆ. ಹೀಗಾಗಿ ಕರ್ನಾಟಕ ಶಿಕ್ಷಣ ಇಲಾಖೆಯು ಶಾಲಾ ಶಿಕ್ಷಣ ವ್ಯವಸ್ಥೆಯ ತಳಹದಿಯಲ್ಲಿ ಶ್ರಮಿಸಬೇಕಾಗಿದೆ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Kannada Medium Students: ಓದಿನಲ್ಲಿ ಹಿಂದೆ ಬಿದ್ದ ಕನ್ನಡ ಮಾಧ್ಯಮದ ಶೇ.60ರಷ್ಟು ಮಕ್ಕಳು; ವರದಿಯಲ್ಲಿ ಬಹಿರಂಗ

  ವ್ಯವಸ್ಥೆ ಸುಧಾರಿಸದಿದ್ದರೆ ಕಲಿಕೆಯ ನಷ್ಟಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳ ಸಮಯವನ್ನು ವ್ಯರ್ಥ ಮಾಡಿದಂತೆ ಆಗುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Kannada Medium Students: ಓದಿನಲ್ಲಿ ಹಿಂದೆ ಬಿದ್ದ ಕನ್ನಡ ಮಾಧ್ಯಮದ ಶೇ.60ರಷ್ಟು ಮಕ್ಕಳು; ವರದಿಯಲ್ಲಿ ಬಹಿರಂಗ

  ಹೀಗಾಗಲೇ ಸರ್ಕಾರಿ ಶಾಲೆಗಳಿಂದ, ಕನ್ನಡ ಮಾಧ್ಯಮ ಶಾಲೆಗಳಿಂದ ಮಕ್ಕಳು-ಪೋಷಕರು ವಿಮುಖರಾಗುತ್ತಿದ್ದಾರೆ. ಶಿಕ್ಷಣ ಗುಣಮುಟ್ಟ ಇಲ್ಲದಿದ್ದರೆ ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸಲು ಮುಂದಾಗುವುದಿಲ್ಲ. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಶೈಕ್ಷಣಿಕ ಮಟ್ಟ ಸುಧಾರಣೆ ಕಾಣಬೇಕಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES