PUC Practical Exam: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆ ದಿನಾಂಕ ಪ್ರಕಟ
ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಬರುವ ತಿಂಗಳು ಅಂದರೆ ಫೆಭ್ರವರಿ 6 ರಿಂದ ಆರಂಭವಾಗಲಿದೆ. 28-02-2023ರ ವರೆಗೂ ಪರೀಕ್ಷೆ ದಿನಾಂಕಗಳು ನಿಗದಿಯಾಗಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ ಪರೀಕ್ಷೆ ಜರುಗುತ್ತದೆ.
ನೀವು ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರಬಹುದು ಅಥವಾ ನಿಮ್ಮ ಜಿಲ್ಲಾವಾರು ನಿಗದಿಯಾದ ಪೂರ್ವ ಸಿದ್ಧತಾ ಪರೀಕ್ಷೆ ಬರೆಯುತ್ತಿರಬಹುದು. ಆದರೆ ಇದರೊಟ್ಟಿಗೆ ಇನ್ನೊಂದು ಮಹತ್ವದ ಮಾಹಿತಿ ನಿಮಗಿದೆ.
2/ 7
ಈ ಮಾಹಿತಿಯ ಪ್ರಕಾರ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಬರುವ ತಿಂಗಳು ಅಂದರೆ ಫೆಬ್ರವರಿ 6ರಿಂದ ನಡೆಯಲಿದೆ. 2022-23ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುವ ದಿನಾಂಕವನ್ನು ಪ್ರಕಟಮಾಡಲಾಗಿದೆ.
3/ 7
ಫೆಬ್ರವರಿ 6ರಿಂದ ಆರಂಭವಾದ ಈ ಪ್ರಾಯೋಗಿಕ ಪರೀಕ್ಷೆ 28-02-2023 ರ ವರೆಗೂ ಮುಂದುವರೆಯಲಿದೆ. ಯಾರಿಗೆಲ್ಲಾ ಪ್ರಾಯೋಗಿಕ ಪರೀಕ್ಷೆ ಇರುತ್ತದೆಯೋ ಅವರೆಲ್ಲಾ ಈ ಕುರಿತು ಅಭ್ಯಾಸ ನಡೆಸುವುದು ಸೂಕ್ತ.
4/ 7
ಸೈನ್ಸ್ ವಿದ್ಯಾರ್ಥಿಗಳಿಗೆ ಲ್ಯಾಬ್ ಎಕ್ಸಾಂ ಹಾಗೂ ಪ್ರಾಕ್ಟಿಕಲ್ ನೋಟ್ಸ್ ಟೆಸ್ಟ್ ಮಾಡಲಾಗುತ್ತದೆ. ಅಭ್ಯಾಸ ಪೂರ್ತಿ ಮಾಡಿ ಸಿದ್ಧತೆ ನಡೆಸಿ. ಇನ್ನು ಕಾಮರ್ಸ್ ವಿದ್ಯಾರ್ಥಿಗಳಿಗೂ ಇದು ಅನ್ವಯವಾಗುತ್ತದೆ.
5/ 7
ಆರ್ಟ್ ಅಭ್ಯಾಸ ಮಾಡುತ್ತಿರುವವರು ಮ್ಯೂಸಿಕ್ ಆಯ್ಕೆ ಮಾಡಿಕೊಂಡಿದ್ದರೆ, ಅವರಿಗೂ ಸಹ ಪ್ರಾಕ್ಟಿಕಲ್ ಪರೀಕ್ಷೆ ಇರುತ್ತದೆ. ತಬಲಾ, ಸಿತಾರ್, ಸಂಗೀತ ಹೀಗೆ ಈ ಎಲ್ಲಾ ವಿಷಯಗಳ ಪ್ರಾಯೋಗಿಕ ಪರೀಕ್ಷೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿ.
6/ 7
ಪ್ರಾಯೋಗಿಕ ಪರೀಕ್ಷೆಗಳ ಕೇಂದ್ರವಾರು ಮಾರ್ಕ್ಸ್ ಲಿಸ್ಟ್ ಹಾಗೂ ನಾಮಿನಲ್ ರೋಲ್ಗಳನ್ನು ಹಾಗೂ ಎನ್ ಎಸ್ ಕ್ಯೂ ಎಫ್ ವಿಷಯಗಳ ಪ್ರಾಯೋಗಿಕ ಪರೀಕ್ಷೆಗಳ ಮಾರ್ಕ್ಸ್ ಲಿಸ್ಟ್ ಗಳನ್ನು ಎಲ್ಲಾ ಪ್ರಯೋಗಿಕ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು / ಪ್ರಾಂಶುಪಾಲರು ಕಡ್ಡಾಯವಾಗಿ ಡೌನ್ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದೆ.
7/ 7
ದಿನಾಂಕ 06-02-2023 ರಿಂದ 28-02-2023 ರವರೆಗೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ದಿನಾಂಕವನ್ನು ನಿಗದಿಪಡಿಸಿದೆ. ಈ ಪ್ರಕಾರ ಅಭ್ಯಾಸ ನಡೆಸಿ ಉತ್ತಮ ಅಂಕ ಗಳಿಸಿ.