India Post Recruitment 2023: ಕೇಂದ್ರ ಸರ್ಕಾರದ ನೌಕರಿ ಅಂದ್ರೆ ಯಾರು ತಾನೇ ಬೇಡ ಅಂತಾರೆ. ಅದರಲ್ಲೂ ಅಂಚೆ ಇಲಾಖೆಯಲ್ಲಿ ಕೆಲಸ ಸಿಕ್ತು ಅಂದ್ರೆ ಅವರ ಲೈಫ್ ಸೆಟಲ್ ಆದಂತೆ ಅರ್ಥ. ಹೌದು, ಈಗ ಭಾರತೀಯ ಅಂಚೆ ಇಲಾಖೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದೆ. ಒಟ್ಟು 7 ನುರಿತ ಕುಶಲಕರ್ಮಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಹಾಕಲು 8ನೇ ತರಗತಿ ಪಾಸಾಗಿದ್ರೆ ಸಾಕು.