Central Jobs: ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ; ಬರೋಬ್ಬರಿ 84,866 ಹುದ್ದೆಗಳ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ

ಸಂಸತ್ತಿನ ಬಜೆಟ್-2023 ಅಧಿವೇಶನ-2 ಆರಂಭವಾಗಿದೆ. ಈ ಸಂದರ್ಭದಲ್ಲಿ ಶಿಕ್ಷಣ ಮತ್ತು ಉದ್ಯೋಗ ಕುರಿತು ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಿತು. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂದು ಸದಸ್ಯರು ಕೇಳಿದಾಗ, ಕೇಂದ್ರ ಸರ್ಕಾರ ಸಂಪೂರ್ಣ ವಿವರವನ್ನು ಬಹಿರಂಗಪಡಿಸಿತು.

First published:

  • 18

    Central Jobs: ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ; ಬರೋಬ್ಬರಿ 84,866 ಹುದ್ದೆಗಳ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ

    CRPF ಮತ್ತು BSF ಸೇರಿದಂತೆ ಆರು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಟ್ಟು 84,866 ಹುದ್ದೆಗಳು ಖಾಲಿ ಇವೆ ಎಂದು ಸದನದಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ರಾಜ್ಯಸಭೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    MORE
    GALLERIES

  • 28

    Central Jobs: ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ; ಬರೋಬ್ಬರಿ 84,866 ಹುದ್ದೆಗಳ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ

    ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ರಾಜ್ಯಸಭೆಗೆ ಭಾರತೀಯ ಸೇನೆಯ ವಿವಿಧ ಸಶಸ್ತ್ರ ಪಡೆಗಳಲ್ಲಿನ ಖಾಲಿ ಹುದ್ದೆಗಳ ವಿವರಗಳನ್ನು ನೀಡಿದರು. ಸಿಆರ್ ಪಿಎಫ್ ನಲ್ಲಿ 29,283 ಹುದ್ದೆಗಳು ಖಾಲಿ ಇವೆ ಎಂದು ಉಲ್ಲೇಖಿಸಲಾಗಿದೆ. ಬಿಎಸ್ ಎಫ್ ನಲ್ಲಿ 19,987, ಸಿಐಎಸ್ ಎಫ್ ನಲ್ಲಿ 19,475, ಎಸ್ ಎಸ್ ಬಿಯಲ್ಲಿ 8,273, ಐಟಿಬಿಪಿಯಲ್ಲಿ 4,142 ಮತ್ತು ಅಸ್ಸಾಂ ರೈಫಲ್ಸ್ ನಲ್ಲಿ 3,706 ಹುದ್ದೆಗಳು ಖಾಲಿ ಇವೆ ಎಂದು ಅವರು ಹೇಳಿದರು.

    MORE
    GALLERIES

  • 38

    Central Jobs: ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ; ಬರೋಬ್ಬರಿ 84,866 ಹುದ್ದೆಗಳ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ

    ಸಶಸ್ತ್ರ ಪಡೆಗಳಲ್ಲಿ ಪ್ರಸ್ತುತ 2,193 ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಜನವರಿ 1, 2023 ರ ಮಾಹಿತಿಯ ಪ್ರಕಾರ, ಸಿಆರ್ ಪಿಎಫ್ ನಲ್ಲಿ 750 ವೈದ್ಯರು ಲಭ್ಯವಿದ್ದರೆ, ಈ ಶ್ರೇಣಿಯಲ್ಲಿ ಇನ್ನೂ 34 ಹುದ್ದೆಗಳು ಖಾಲಿ ಇವೆ.

    MORE
    GALLERIES

  • 48

    Central Jobs: ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ; ಬರೋಬ್ಬರಿ 84,866 ಹುದ್ದೆಗಳ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ

    ಪ್ರಸ್ತುತ ಬಿಎಸ್ ಎಫ್ ನಲ್ಲಿ 545 ವೈದ್ಯರು ಸೇವೆ ಸಲ್ಲಿಸುತ್ತಿದ್ದರೆ, ಇನ್ನೂ 54 ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಎಸ್ ಎಸ್ ಬಿಯಲ್ಲಿ 217 ಮತ್ತು ಆಸ್ಪಮ್ ರೈಫಲ್ಸ್ನಲ್ಲಿ 174 ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಈ ಎರಡು ಪಡೆಗಳಲ್ಲಿ ಕ್ರಮವಾಗಿ 45 ಮತ್ತು 5 ವೈದ್ಯರ ಹುದ್ದೆಗಳು ಖಾಲಿ ಇವೆ. ಜನವರಿ 1, 2023 ರ ಮಾಹಿತಿಯ ಪ್ರಕಾರ.. 2,900 ದಾದಿಯರು ಮತ್ತು ಇತರ ಸಿಬ್ಬಂದಿ CRPF ನಲ್ಲಿ ಲಭ್ಯವಿದೆ.

    MORE
    GALLERIES

  • 58

    Central Jobs: ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ; ಬರೋಬ್ಬರಿ 84,866 ಹುದ್ದೆಗಳ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ

    ಬಿಎಸ್ ಎಫ್ ನಲ್ಲಿ 1,791, ಸಿಐಎಸ್ ಎಫ್ ನಲ್ಲಿ 241, ಐಟಿಬಿಪಿಯಲ್ಲಿ 1531, ಎಸ್ ಎಸ್ ಬಿಯಲ್ಲಿ 515 ಮತ್ತು ಅಸ್ಸಾಂ ರೈಫಲ್ಸ್ ನಲ್ಲಿ 1,420 ನರ್ಸ್ ಗಳಿದ್ದಾರೆ. ವಿವಿಧ ಸಶಸ್ತ್ರ ಪಡೆಗಳಲ್ಲಿ ಭರ್ತಿ ಮಾಡಲಿರುವ ದಾದಿಯರ ಹುದ್ದೆಗಳ ವಿವರ ಈ ಕೆಳಗಿನಂತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Central Jobs: ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ; ಬರೋಬ್ಬರಿ 84,866 ಹುದ್ದೆಗಳ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ

    ಸಿಆರ್ ಪಿಎಫ್ ನಲ್ಲಿ 1,330, ಬಿಎಸ್ ಎಫ್ ನಲ್ಲಿ 317, ಸಿಐಎಸ್ ಎಫ್ ನಲ್ಲಿ 81, ಐಟಿಬಿಪಿಯಲ್ಲಿ 169, ಐಟಿಬಿಪಿಯಲ್ಲಿ 228 ಮತ್ತು ಅಸ್ಸಾಂ ರೈಫಲ್ಸ್ ನಲ್ಲಿ 229 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಇತ್ತೀಚೆಗೆ ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಹೊಸ ನೇಮಕಾತಿಗಳನ್ನು ಮಾಡಲಾಗಿದೆ.

    MORE
    GALLERIES

  • 78

    Central Jobs: ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ; ಬರೋಬ್ಬರಿ 84,866 ಹುದ್ದೆಗಳ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ

    ಕಳೆದ ಐದು ತಿಂಗಳಲ್ಲಿ ಸುಮಾರು 31,785 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ನಿವೃತ್ತಿ, ರಾಜೀನಾಮೆ, ಬಡ್ತಿ, ಸಾವು, ಹೊಸ ಬೆಟಾಲಿಯನ್ ಗಳ ಸ್ಥಾಪನೆ, ಹೊಸ ಹುದ್ದೆಗಳ ಸೃಷ್ಟಿ ಇತ್ಯಾದಿಗಳಿಂದಾಗಿ ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಖಾಲಿ ಹುದ್ದೆಗಳು ಸೃಷ್ಟಿಯಾಗುತ್ತವೆ.

    MORE
    GALLERIES

  • 88

    Central Jobs: ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ; ಬರೋಬ್ಬರಿ 84,866 ಹುದ್ದೆಗಳ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ

    ಜನವರಿ 1, 2023 ರ ವೇಳೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 247 ವೈದ್ಯರ ಹುದ್ದೆಗಳು ಮತ್ತು 2,354 ನರ್ಸ್ ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಚಿವ ನಿತ್ಯಾನಂದ ರಾಯ್ ರಾಜ್ಯಸಭೆಯಲ್ಲಿ ಹೇಳಿದರು.

    MORE
    GALLERIES