ಈ ಮೊದಲು ಯಾವುದೇ ಹೊಸ ವಿಷಯ ತಿಳಿಯಬೇಕೆಂದರೆ ಗ್ರಂಥಾಲಯದಲ್ಲಿ ಪುಸ್ತಕಗಳ ಮಧ್ಯೆ ಗಂಟೆಗಳ ಕಾಲ ಕಳೆಯಬೇಕಿತ್ತು. ಆದರೆ ಇಂದು ಬೆರಳ ತುದಿಯಲ್ಲೇ ಬೇಕಾದ ಮಾಹಿತಿ ಲಭ್ಯವಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವಿಷಯಗಳನ್ನು ನೋಡುವ, ಓದುವ, ಕಲಿಯುವ ದೃಷ್ಟಿಕೋನ ಮತ್ತು ಮೂಲಗಳೂ ಬದಲಾಗಿವೆ. ಡಿಜಿಟಲ್ ಜಗತ್ತಿನಲ್ಲಿ ಬದುಕುತ್ತಿರುವ ನಮ್ಮ ಪೀಳಿಗೆಯು Google, YouTube ನಂತಹ ಸೌಲಭ್ಯಗಳನ್ನು ಹೊಂದಿದೆ.
ನಿಮ್ಮ ಮನದಲ್ಲಿ ಯಾವುದೇ ವಿಷಯದ ಬಗ್ಗೆ ಆಸಕ್ತಿ, ಕುತೂಹಲ ಮೂಡಿದ ಕೂಡಲೇ Google ಅಥವಾ YouTube ನಲ್ಲಿ ಟೈಪ್ ಮಾಡಿ ತಕ್ಷಣ ಉತ್ತರಗಳನ್ನು ಪಡೆಯಬಹುದು. ಇನ್ನೂ Google ನಲ್ಲಿ ಮಾಹಿತಿಯನ್ನು ನೀವು ಓದಬೇಕಾಗುತ್ತದೆ. ಆದರೆ YouTubeನಲ್ಲಿ ಆರಾಮವಾಗಿ ವಿಡಿಯೋ ನೋಡುತ್ತಾ, ಕೇಳುತ್ತಾ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು. ಯುವ ಪೀಳಿಗೆ ಓದುವುದಕ್ಕಿಂತ ವಿಡಿಯೋ ನೋಡುವುದ್ದಕ್ಕೆ ಹೆಚ್ಚು ಒತ್ತು ನೀಡುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.