1. ಮುಂದಿನ 5 ವರ್ಷಗಳಲ್ಲಿ ಕರಿಯರ್ ಸಂಬಂಧ ನಿಮ್ಮ ಫ್ಯೂಚರ್ ಪ್ಲಾನ್ ಏನು ಎಂದು ಸಂದರ್ಶಕರು ಕೇಳಿದ್ರೆ, ಪೂರ್ತಿ ಸತ್ಯವನ್ನೇ ಹೇಳುವುದು ನಿಜಕ್ಕೂ ಕಷ್ಟ. ಸಮಯಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ, ಮೊದಲೇ ಎಲ್ಲವನ್ನೂ ಪ್ಲ್ಯಾನ್ ಮಾಡಲು ಸಾಧ್ಯವಿಲ್ಲ. ನಿಮ್ಮ ಮನಸ್ಸಿನಲ್ಲಿ ಏನೇ ಇರಲಿ, ಈ ಕಂಪನಿ ಅಥವಾ ಕ್ಷೇತ್ರದಲ್ಲಿ ಕೆಲಸ ಮಾಡುವುದನ್ನು ನೋಡಲು ಬಯಸುತ್ತೀರಿ ಎಂದು ನೀವು ಹೇಳಬಹುದು.
2. ಉದ್ಯೋಗವನ್ನು ಏಕೆ ಬದಲಾಯಿಸುತ್ತಿದ್ದೀರಿ - ಸಂದರ್ಶನದಲ್ಲಿ ಕೇಳಲಾಗುವ ಸಾಮಾನ್ಯ ಪ್ರಶ್ನೆ ಇದು. ಎಚ್ ಆರ್ ನಿಂದ ಹಿಡಿದು ಪ್ರತಿಯೊಬ್ಬರೂ ಖಂಡಿತವಾಗಿಯೂ ಈ ಪ್ರಶ್ನೆಯನ್ನು ನಿಮಗೆ ಕೇಳುತ್ತಾರೆ. ನೀವು ಹಳೆಯ ಉದ್ಯೋಗದಲ್ಲಿ ಅಸಮಾಧಾನಗೊಂಡಿದ್ದೀರಿ ಅಥವಾ ಸಂಬಳಕ್ಕಾಗಿ ಹೊಸ ಉದ್ಯೋಗವನ್ನು ಹುಡುಕುತ್ತಿದ್ದೀರಿ ಎಂದು ಸತ್ಯವನ್ನೇ ಹೇಳುವ ಅಗತ್ಯವಿಲ್ಲ. ಹೊಸ ಸವಾಲುಗಳಿಗಾಗಿ ನೀವು ಉದ್ಯೋಗಗಳನ್ನು ಬದಲಾಯಿಸಲು ಬಯಸುವುದಾಗಿ ಉತ್ತರಿಸಬಹುದು.
4. ನಿಮ್ಮ ಹವ್ಯಾಸ ಏನು.. ಪ್ರತಿಯೊಬ್ಬ ವ್ಯಕ್ತಿಯು ಖಂಡಿತವಾಗಿಯೂ ಕೆಲವು ಹವ್ಯಾಸವನ್ನು ಹೊಂದಿರುತ್ತಾನೆ. ಆದರೆ ಕೆಲಸದ ಸಂದರ್ಶನದಲ್ಲಿ, ಕೆಲವು ಫಿಲ್ಟರ್ ಗಳೊಂದಿಗೆ ಇದರ ಬಗ್ಗೆ ಉತ್ತರಿಸುವುದು ಸೂಕ್ತ. ನೀವು ಹಗಲು-ರಾತ್ರಿ ಸಿನಿಮಾ ಅಥವಾ ವೆಬ್ ಸೀರೀಸ್ ನೋಡುವ ಹವ್ಯಾಸ ಹೊಂದಿದ್ದರೆ ಅಥವಾ ಸೋಶಿಯಲ್ ಮೀಡಿಯಾಕ್ಕೆ ಅಡಿಕ್ಟ್ ಆಗಿದ್ದರೆ ಆ ವಿಷಯವನ್ನು ಸಂದರ್ಶನದಲ್ಲಿ ಹೇಳಬೇಕಾಗಿಲ್ಲ. ಮುಂದೆ ಇರುವ ವ್ಯಕ್ತಿ ನಿಮ್ಮನ್ನು ಸೋಮಾರಿ ಎಂದು ಪರಿಗಣಿಸಬಹುದು.