Workplace Mistakes: ಉದ್ಯೋಗಿಗಳು ತಿಳಿದೋ, ತಿಳಿಯದೆಯೋ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು

ಎಲ್ಲವನ್ನೂ ಶಾಲಾ-ಕಾಲೇಜುಗಳಲ್ಲಿ ಕಲಿಸಲು ಸಾಧ್ಯವಿಲ್ಲ. ಶಿಕ್ಷಣ ಮುಗಿಸಿ ನೀವು ಸ್ವತಂತ್ರ ಉದ್ಯೋಗಿಯಾದಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತೆ. ಇವು ಸಾಮಾನ್ಯ ಜ್ಞಾನದಿಂದ ಬರುವ ತಿಳಿವಳಿಕೆಯಾಗಿವೆ. ಅದರಲ್ಲೂ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ತಿಳಿದು, ತಿಳಿಯದೆಯೋ ಮಾಡುವ ತಪ್ಪುಗಳು ಅವರ ವೃತ್ತಿಗೆ ಕಂಟಕವಾಗುತ್ತವೆ.

First published:

  • 17

    Workplace Mistakes: ಉದ್ಯೋಗಿಗಳು ತಿಳಿದೋ, ತಿಳಿಯದೆಯೋ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು

    ಇವುಗಳ ಬಗ್ಗೆ ಯಾರೂ ನಿಮಗೆ ಹೇಳುವುದಿಲ್ಲ. ಆದರೆ ಉದ್ಯೋಗಿಯಾಗಿ ನೀವು ಇವುಗಳ ಬಗ್ಗೆ ತಿಳಿವಳಿಕೆಯನ್ನು ಹೊಂದಿರಲೇಬೇಕು. ತಿಳಿದು, ತಿಳಿಯದೆಯೋ ನೀವು ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಿ.

    MORE
    GALLERIES

  • 27

    Workplace Mistakes: ಉದ್ಯೋಗಿಗಳು ತಿಳಿದೋ, ತಿಳಿಯದೆಯೋ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು

    1) ಜವಾಬ್ದಾರಿಗಳಿಗೆ ಬೆನ್ನು ತೋರಿಸುವುದು: ಯಾವುದೇ ಹೊಸ ಪ್ರಾಜೆಕ್ಟ್, ಕೆಲಸ ಬಂದರೆ ಜವಾಬ್ದಾರಿ ತೆಗೆದುಕೊಳ್ಳದೇ ಇರುವುದು. ಯಾವುದ್ದಕ್ಕೂ ಮುಂದೆ ಬರದೆ ಗುಂಪಿನೊಳಗೆ ಉಳಿದು ಬಿಡುವುದು ನಿಮ್ಮನ್ನು ಸಾಮಾನ್ಯ ಉದ್ಯೋಗಿಯನ್ನಾಗಿಸುತ್ತೆ.

    MORE
    GALLERIES

  • 37

    Workplace Mistakes: ಉದ್ಯೋಗಿಗಳು ತಿಳಿದೋ, ತಿಳಿಯದೆಯೋ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು

    2) ಸಮಯ ಪ್ರಜ್ಞೆಯ ಕೊರತೆ: ಆಫೀಸ್ ಗೆ ತಡವಾಗಿ ಬರುವುದು, ಅವಧಿಗೂ ಮುನ್ನವೇ ತೆರಳುವುದು ಮಾತ್ರವಲ್ಲ. ಎಲ್ಲಾ ಟಾಸ್ಕ್ ಗಳ ಡೆಡ್ ಲೈನ್ ಮೀರುವುದು. ಅನಗತ್ಯ ವಿಷಯಗಳಲ್ಲೇ ಆಫೀಸ್ ಸಮಯವನ್ನು ಕಳೆಯುವುದು ಕೂಡ ತಪ್ಪು.

    MORE
    GALLERIES

  • 47

    Workplace Mistakes: ಉದ್ಯೋಗಿಗಳು ತಿಳಿದೋ, ತಿಳಿಯದೆಯೋ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು

    3) ಬದಲಾವಣೆಗೆ ಒಗ್ಗಿಕೊಳ್ಳದೇ ಇರುವುದು: ಸಮಯಕ್ಕೆ ತಕ್ಕಂತೆ ಅಪ್ ಡೇಟ್ ಆಗುವ ಉದ್ಯೋಗಿಗಳು ಕಂಪನಿಗೆ ಬೇಕು. ಹೊಸತನ್ನು ಸ್ವೀಕರಿಸದೇ ಇರುವುದು, ಬದಲಾವಣೆಗೆ ಹೆದರುವವರು ಹಿಂದೆ ಉಳಿಯುತ್ತಾರೆ.

    MORE
    GALLERIES

  • 57

    Workplace Mistakes: ಉದ್ಯೋಗಿಗಳು ತಿಳಿದೋ, ತಿಳಿಯದೆಯೋ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು

    4) ಟೀಂ ಪ್ಲೇಯರ್ ಆಗದೇ ಇರುವುದು: ಆಫೀಸ್ ಕೆಲಸಗಳನ್ನು ತಂಡವಾಗಿ ನಿರ್ವಹಿಸುವ ಅಗತ್ಯವಿರುತ್ತದೆ. ಸಹೋದ್ಯೋಗಿಗಳ ಜೊತೆ ಸೇರಿ ಕೆಲಸ ಮಾಡದೇ ಪ್ರತ್ಯೇಕವಾಗಿಯೇ ಉಳಿಯುವುದು. ಕೇವಲ ತಮ್ಮ ಕೆಲಸದ ಬಗ್ಗೆ ಮಾತ್ರ ಯೋಚಿಸುವುದು ತಪ್ಪಾಗುತ್ತದೆ.

    MORE
    GALLERIES

  • 67

    Workplace Mistakes: ಉದ್ಯೋಗಿಗಳು ತಿಳಿದೋ, ತಿಳಿಯದೆಯೋ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು

    5) ಕಳಪೆ ಸಂವಹನ: ಉದ್ಯೋಗಿಯಾಗಿ ನಿಮ್ಮ ಕಮ್ಯುನಿಕೇಷನ್ ಸ್ಕಿಲ್ ತುಂಬಾನೇ ಮುಖ್ಯ. ಮಾತನಾಡಲು ಹಿಂಜರಿಯುವುದು, ಮೇಲ್ ಗಳಲ್ಲಿ ಸರಿಯಾಗಿ ಪ್ರತಿಕ್ರಿಯಿಸದೇ ಇರುವುದು ನಿಮ್ಮನ್ನು ಕಳಪೆ ಉದ್ಯೋಗಿಯನ್ನಾಗಿ ಮಾಡುತ್ತೆ.

    MORE
    GALLERIES

  • 77

    Workplace Mistakes: ಉದ್ಯೋಗಿಗಳು ತಿಳಿದೋ, ತಿಳಿಯದೆಯೋ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು

    6) ನಿರಂತರ ಪ್ರಗತಿ ಇರಬೇಕು: ಯಾವಾಗಲೋ ಒಮ್ಮೆ ಉತ್ತಮ ಪರ್ಫಾಮರ್ ಎನಿಸಿಕೊಂಡರೆ ಸಾಲದು. ನೀವು ನಿರಂತರವಾಗಿ ಕೆಲಸದಲ್ಲಿ ಪ್ರಗತಿ ತೋರಿಸಬೇಕು. ಒಂದು ತಪ್ಪನ್ನು ಒಮ್ಮೆ ಮಾತ್ರ ಮಾಡಬೇಕು, ಮತ್ತೆ ಎಂದಿಗೂ ಆ ತಪ್ಪು ಮರುಕಳಿಸಬಾರದು. ತಪ್ಪುಗಳಿಂದ ಪಾಠ ಕಲಿಯಬೇಕು.

    MORE
    GALLERIES