Career Tips: ವರ್ಕ್ ಫ್ರಮ್ ಹೋಮ್ನಲ್ಲಿರುವವರು ಈ ತಪ್ಪುಗಳನ್ನು ಮಾಡಿದ್ರೆ, ಕರಿಯರ್ಗೆ ಡ್ಯಾಮೇಜ್ ಆಗುತ್ತೆ
ಕೊರೊನಾ ಇಳಿಮುಖವಾದ ಬಳಿಕ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ನಿಂದ ಕಚೇರಿಗಳಿಗೆ ಮರಳಿದ್ದಾರೆ. ಆದರೆ ಇನ್ನೂ ಕೆಲ ಉದ್ಯೋಗಿಗಳು WFHನಲ್ಲೇ (Work from Home) ಇದ್ದಾರೆ. ಕೆಲ ಉದ್ಯೋಗಗಳನ್ನು ಕಚೇರಿಗೆ ಬಂದೇ ಮಾಡುವ ಅಗತ್ಯ ಇಲ್ಲದಿರುವುದರಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.
WFHನಲ್ಲಿರುವ ಉದ್ಯೋಗಿಗಳು ಕೆಲ ವಿಚಾರಗಳ ಬಗ್ಗೆ ಗಮನಹರಿಸಲೇಬೇಕು. ಇಲ್ಲವಾದರೆ ಅಂತವರ ವೃತ್ತಿ ಅಪಾಯದಲ್ಲಿದೆ ಎಂದು ಅರ್ಥ. ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳು ತಿಳಿಯದೇ ಮಾಡುತ್ತಿರುವ ತಪ್ಪುಗಳ್ಯಾವುವು? ಅದರಿಂದ ಅವರ ಕರಿಯರ್ ಗೆ ಹೇಗೆ ಡ್ಯಾಮೇಜ್ ಆಗುತ್ತಿದೆ ಎಂದು ಇಲ್ಲಿ ತಿಳಿಯೋಣ. (ಸಾಂದರ್ಭಿಕ ಚಿತ್ರ)
2/ 9
1) ನಿಮ್ಮದೇ ಮನೆಯಲ್ಲಿರುವ ಕಾರಣಕ್ಕೆ ವೃತ್ತಿಪರತೆಯನ್ನು ಮರೆಯಬೇಡಿ. ಯಾರೂ ನೋಡುತ್ತಿಲ್ಲ ಎಂದು ಬೇಕಾಬಿಟ್ಟಿ ಕೆಲಸ ಮಾಡಬೇಡಿ. ಉದ್ಯೋಗಿಯಾಗಿ ನೀವು ಕಳಪೆ ಮಟ್ಟವನ್ನು ತಲುಪಬಹುದು. ಮನೆಯಲ್ಲಿದ್ದರೂ ಶಿಸ್ತನ್ನು ಪಾಲಿಸಿ. (ಸಾಂದರ್ಭಿಕ ಚಿತ್ರ)
3/ 9
2) ರಿಮೋಟ್ ವರ್ಕ್ ನಲ್ಲಿದ್ದಾಗ ಸಮಯ ಪಾಲನೆ ತುಂಬಾನೇ ಮುಖ್ಯ, ಕಚೇರಿಯ ಇತರೆ ಉದ್ಯೋಗಿಗಳು, ಮೇಲಿನ ಅಧಿಕಾರಿಗಳ ಸಂಪರ್ಕದಲ್ಲಿರುವುದು ಮುಖ್ಯ. ಸಂವಹನ ಸಮಸ್ಯೆಯಾದರೆ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತೆ. (ಸಾಂದರ್ಭಿಕ ಚಿತ್ರ)
4/ 9
3) ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯೋದು, ರೀಲ್ಸ್ ಅನ್ನು ನೋಡುತ್ತಲೇ ಇರುವುದು. ಅದನ್ನು ಸ್ನೇಹಿತರೊಂದಿಗೆ ಶೇರ್ ಮಾಡುವುದು. ನೆಟ್ ಫ್ಲಿಕ್ಸ್ ನಲ್ಲಿ ಹೊಸ ಸರಣಿಯನ್ನು ವೀಕ್ಷಿಸುವುದು ಅಥವಾ ಸ್ನೇಹಿತರೊಂದಿಗೆ ಚಾಟ್ ಮಾಡುವುದು ನಿಮ್ಮ ಕೆಲಸದ ಸಮಯವನ್ನು ನುಂಗುತ್ತವೆ. ಇವುಗಳ ಮೇಲೆ ನಿಯಂತ್ರಣ ಇರಬೇಕು. (ಸಾಂದರ್ಭಿಕ ಚಿತ್ರ)
5/ 9
4) ಅನಗತ್ಯವಾಗಿ ಸಮಯ ವ್ಯರ್ಥ ಮಾಡಿದರೆ, ಸಮಯಕ್ಕೆ ಸರಿಯಾಗಿ ಕೊಟ್ಟ ಕೆಲಸಗಳು ಮುಗಿಯುವುದಿಲ್ಲ. ಇದು ನಿಮಗೂ ಒತ್ತಡ ಎನಿಸುತ್ತೆ. (ಸಾಂದರ್ಭಿಕ ಚಿತ್ರ)
6/ 9
5) ಮನೆಯಲ್ಲೇ ಕಚೇರಿಯಂತ ಸ್ಥಳ ನಿರ್ಮಿಸುವುದು ಸೂಕ್ತ. ಕುಟುಂಬ ಸದಸ್ಯರು ಓಡಾಟ ಇಲ್ಲದ, ಟಿವಿ ಅಥವಾ ಬೇರೆ ಯಾವುದೇ ಶಬ್ಧಗಳು ಇಲ್ಲದ ಸ್ಥಳವನ್ನು ವರ್ಕಿಂಗ್ ಗೆ ಬಳಸಿಕೊಳ್ಳಿ. ಇದರಿಂದ ನಿಮ್ಮ ಏಕಾಗ್ರತೆ ಕೆಡುವುದಿಲ್ಲ. (ಸಾಂದರ್ಭಿಕ ಚಿತ್ರ)
7/ 9
6) ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಹೆಚ್ಚು ಪ್ರೊಡಕ್ವೀವ್ ಆಗಿ ಇರಲು ಕ್ಲೀನ್ ಡೆಸ್ಕ್ ಅನ್ನು ಬಳಸಬೇಕು. ನಿಮ್ಮ ಕೆಲಸದ ಪ್ರದೇಶದ ಬಳಿ ಆಹಾರ ಸೇವಿಸುವುದನ್ನು ತಪ್ಪಿಸಿ. ನಿಮ್ಮ ಲ್ಯಾಪ್ ಟಾಪ್ ಅನ್ನು ಮಕ್ಕಳಿಂದ ದೂರವಿಡಿ. (ಸಾಂದರ್ಭಿಕ ಚಿತ್ರ)
8/ 9
7) ಮನೆಯಲ್ಲಿದ್ದೇನೆ, ನನಗೆ ಯಾರ ಉಸಾಬರಿಯೂ ಬೇಡ ಎಂದುಕೊಂಡು ಇರಬೇಡಿ. ಸಹೋದ್ಯೋಗಿಗಳ ಜೊತೆ ಕೆಲವೊಮ್ಮೆಯಾದರೂ ಮಾತನಾಡಿ. ಇದರಿಂದ ಕೆಲಸದ ಬಗ್ಗೆ ನಿಮಗೆ ಹೊಸ ಮಾಹಿತಿಗಳು ಸಿಗಬಹುದು. (ಸಾಂದರ್ಭಿಕ ಚಿತ್ರ)
9/ 9
8) WHOನಲ್ಲಿರುವವರ ದೊಡ್ಡ ದೂರು ಎಂದರೆ ಕತ್ತು, ಬೆನ್ನು ನೋವು. ಇದರಿಂದ ಕೆಲಸ ಮಾಡಲು ಹಿಂಸೆ ಎನ್ನುತ್ತಾರೆ. ಇದಕ್ಕಾಗಿ ಆರಾಮಾದಾಯಕವಾಗಿರುವ ಆಫೀಸ್ ಚೇರ್ ಖರೀದಿಸುವುದು ಸೂಕ್ತ. ಇಲ್ಲವಾದರೆ, ದೈಹಿಕ ನೋವುಗಳು ನಿಮ್ಮನ್ನು ಕಾಡುತ್ತಲೇ ಇರುತ್ತವೆ. (ಸಾಂದರ್ಭಿಕ ಚಿತ್ರ)