5) ಆಸ್ತಿಗಳನ್ನು ಮಾಡುವುದು: ನಿಮಗೆ ಪಿತ್ರಾರ್ಜಿತವಾಗಿ ಆಸ್ತಿ ಇಲ್ಲವೇ ಆಸ್ತಿಯಿಂದ ದೊಡ್ಡ ಮೊತ್ತದ ಹಣ ಬಂದಿದ್ದರೆ ಅದನ್ನು ಜೀವನ ಪೂರ್ತಿ ಆದಾಯ ಬರುವಂತೆ ಮಾಡಿಕೊಳ್ಳಬಹುದು. ಮನೆಗಳನ್ನು ಕಟ್ಟಿ ಬಾಡಿಗೆಗೆ ಬಿಡುವುದು, ಮದುವೆ ಚೌಟ್ರಿಗಳನ್ನು ಕಟ್ಟುವುದು. ಕಾಂಪ್ಲೆಕ್ಸ್ ಗಳನ್ನು ಕಟ್ಟಿ ಬಾಡಿಗೆಗೆ ಕೊಡುವುದು ನಿಮಗೆ ನಿರಂತರ ಆದಾಯವನ್ನು ಕೊಡುತ್ತದೆ.