Career Tips: ಉದ್ಯೋಗಿಗಳೇ ರಜೆ ತೆಗೆದುಕೊಳ್ಳುವ ಬಗ್ಗೆ ಯಾವುದೇ ಗಿಲ್ಟ್ ಬೇಡ, ಏಕೆಂದು ತಿಳಿಯಿರಿ
ಬಹುತೇಕ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ರಜೆ ತೆಗೆದುಕೊಳ್ಳುವುದು ಒಂದು ದೊಡ್ಡ ಪ್ರಹಸನವೇ ಆಗುತ್ತದೆ. ಬಾಸ್, ಮ್ಯಾನೇಜರ್ ಅಥವಾ HRಗಳು ರಜೆಯನ್ನು ಮಂಜೂರು ಮಾಡುವಲ್ಲಿ ಅಧಿಕಾರದ ಭಾವನೆಯನ್ನು ತೋರುತ್ತಾರೆ ಅಂತಲೂ ಹೇಳಬಹುದು. ಇಷ್ಟೆಲ್ಲದರ ನಂತರ ರಜೆಯನ್ನು ಪಡೆದ ಉದ್ಯೋಗಿ ಒಂದು ರೀತಿಯ ಗಿಲ್ಟ್ ಅಥವಾ ಕೀಳಿರಿಮೆಯ ಭಾವನೆಗೆ ಒಳಗಾಗುತ್ತಾರೆ.
ಹೌದು, ಭಾರತದ ಬಹುತೇಕ ಉದ್ಯೋಗಿಗಳು ರಜೆಗಳನ್ನು ಕೇಳಿ ಪಡೆದುಕೊಳ್ಳುವುದು ಒಂದು ಅಪರಾಧವೇನು ಎಂಬ ಭಾವನೆಯಲ್ಲೇ ಇದ್ದಾರೆ. ಇನ್ನು ರಜೆ ತೆಗೆದುಕೊಂಡು, ಕೆಲಸಕ್ಕೆ ಮರಳಿದಾಗ ತಪ್ಪಿತಸ್ಥ ಭಾವನೆಯನ್ನು ಹೊಂದುತ್ತಾರೆ ಎಂದು ಕೆಲ ಅಧ್ಯಯನಗಳೇ ಹೇಳಿವೆ. ಇದನ್ನು ಗಿಲ್ಟ್ ವೆಕೆಷನ್ ಸಿಂಡ್ರೋಮ್ ಎನ್ನುತ್ತಾರೆ. ಸಾಂಕೇತಿಕ ಚಿತ್ರ
2/ 7
ಭಾರತದಲ್ಲಿ ಐಟಿ-ಬಿಟಿ ಕಂಪನಿಗಳನ್ನು ಹೊರತುಪಡಿಸಿ ಬಹುತೇಕ ಕಂಪನಿಗಳಲ್ಲಿ 6 ದಿನ ಕೆಲಸ, ಒಂದು ದಿನದ ವಾರದ ರಜೆ ಇರುತ್ತದೆ. ಇದರ ಜೊತೆಗೆ ಸರ್ವಜನಿಕ ರಜೆಗಳು, ಹಬ್ಬಗಳಿಗೆ, ಅನಾರೋಗ್ಯದ ರಜೆಗಳು ಹಾಗೂ ವಿಶೇಷ ರಜೆ ಸೌಲಭ್ಯಗಳನ್ನು ಉದ್ಯೋಗಿಗಳಿಗೆ ನೀಡಲಾಗುತ್ತೆ.
3/ 7
ಮೊದಲಿಗೆ, ರಜೆಗಳು ಉದ್ಯೋಗಿಯ ಹಕ್ಕು ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ರಜೆಯನ್ನೇ ತೆಗೆದುಕೊಳ್ಳದೆ ಕೆಲಸ ಮಾಡುವವರನ್ನು ಉತ್ತರ ಕೆಲಸಗಾರರು, ರಜೆ ತೆಗೆದುಕೊಳ್ಳುವವರನ್ನು ಕೆಟ್ಟ ಉದ್ಯೋಗಿ ಎಂದು ಹೆಸರಿಸುವ ಪದ್ಧತಿಗೆ ಮೊದಲು ಅಂತ್ಯ ಹಾಡಬೇಕು. ಸಾಂಧರ್ಬಿಕ ಚಿತ್ರ
4/ 7
ವಾಸ್ತವದಲ್ಲಿ ಕೆಲಸದ ಏಕತಾನತೆಯನ್ನು ಹೋಗಲಾಡಿಸಲು, ಕೆಲಸದ ಗುಣಮಟ್ಟ ಹೆಚ್ಚಾಗಲು ಪ್ರತಿಯೊಬ್ಬ ಉದ್ಯೋಗಿಯೂ ತನ್ನ ಆಫೀಸ್ ದಿನಚರಿಯಿಂದ ಬ್ರೇಕ್ ತೆಗೆದುಕೊಳ್ಳುವುದು ತುಂಬಾನೇ ಮುಖ್ಯ.
5/ 7
ಇನ್ನು ಆರೋಗ್ಯದ ಕಾರಣಕ್ಕೆ, ಹೆರಿಗೆ, ಪೋಷಕತ್ವದ ಕಾರಣಗಳಿಗೆ ಲಾಂಗ್ ಲೀವ್ ತೆಗೆದುಕೊಳ್ಳುವ ಬಗ್ಗೆಯೂ ಯಾವುದೇ ಕೀಳಿರಿಮೆ ಬೇಡ. ಆ ರಜೆಗಳು ನಿಮ್ಮ ಹಕ್ಕು. ಅನಾರೋಗ್ಯದ ಮಧ್ಯೆಯೂ ಗುಣಮುಟ್ಟವಿಲ್ಲದ ಕೆಲಸ ಮಾಡುವುದಕ್ಕಿಂತ ರಜೆ ತೆಗೆದುಕೊಂಡು ನಂತರ ಪೂರ್ಣ ಮನಸ್ಸಿನಿಂದ ಕೆಲಸಕ್ಕೆ ಹಾಜರಾಗುವುದು ಉತ್ತಮ.
6/ 7
ಇನ್ನು ಸಂಬಳ ಹೆಚ್ಚಳದ ಸಮಯದಲ್ಲಿ, ಬಡ್ತಿ ಸಂದರ್ಭದಲ್ಲಿಯೂ ಉದ್ಯೋಗಿಯ ರಜೆಗಳನ್ನು ಗಣನೆಗೆ ತೆಗೆದುಕೊಳ್ಳುವುದು ಸರಿಯಲ್ಲ. ಹೆಚ್ಚಿನ ರಜೆಗಳನ್ನು ತೆಗೆದುಕೊಂಡಿದ್ದಾರೆ ಎಂದು ಯಾವುದೇ ಉದ್ಯೋಗಿಯನ್ನು ಅಳೆಯುವಂತಿಲ್ಲ. ಸಂಬಳ, ಬಡ್ತಿಯನ್ನು ನಿರಾಕರಿಸುವಂತಿಲ್ಲ.
7/ 7
ಇನ್ನು ಉದ್ಯೋಗಿಗಳು ಕೂಡ ರಜೆಗಳನ್ನು ತೆಗೆದುಕೊಳ್ಳುವ ಬಗ್ಗೆ ರಚನಾತ್ಮವಾಗಿ ಯೋಚಿಸಬೇಕು. ಅನಗತ್ಯ ಕಾರಣಗಳಿಗೆ ರಜೆ ತೆಗೆದುಕೊಳ್ಳುವುದು, ಸರಿಯಾಗಿ ಮಾಹಿತಿ ನೀಡದೆ ರಜೆಗಳನ್ನು ತೆಗೆದುಕೊಳ್ಳುವುದನ್ನು ಮಾಡಬಾರದು. ಹೆಚ್ಚಿನ ಕೆಲಸವನ್ನು ತಪ್ಪಿಸಿಕೊಳ್ಳಲು ನಿರ್ದಿಷ್ಟ ದಿನಗಳಲ್ಲಿ ರಜೆ ಹಾಕುವುದು ಕೂಡ ನೈತಿಕವಾಗಿ ಸರಿಯಲ್ಲ.