UPSC Exam Result: ಯಾವುದೇ ಪರೀಕ್ಷೆ ಫಲಿತಾಂಶವಿರಲಿ ಯಾವಾಗಲೂ ಹುಡುಗಿಯರದ್ದೇ ಮೇಲುಗೈ ಏಕೆ?

SSLC ಬೋರ್ಡ್ ಎಕ್ಸಾಂ ರಿಸಲ್ಟ್ ಇರಲಿ, ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶವೇ ಇರಲಿ. ಅಷ್ಟೇ ಏಕೆ ನಿನ್ನೆಯಷ್ಟೇ ಪ್ರಕಟಗೊಂಡ ಸ್ಪರ್ಧಾತ್ಮಕ ಪರೀಕ್ಷೆ ಯುಪಿಎಸ್ ಸಿ ಫಲಿತಾಂಶವಾದರೂ ಸರಿ ಯುವತಿಯರದ್ದೇ ದರ್ಬಾರು. ಪರೀಕ್ಷೆಗಳ ಫಲಿತಾಂಶ ಹೊರ ಬೀಳುತ್ತಿದ್ದಂತೆ ಈ ಬಾರಿಯೂ ಹುಡುಗಿಯರದ್ದೇ ಮೇಲುಗೈ ಅನ್ನೋ ವಾಕ್ಯ ಮಿಸ್ಸೇ ಆಗಲ್ಲ.

First published:

 • 18

  UPSC Exam Result: ಯಾವುದೇ ಪರೀಕ್ಷೆ ಫಲಿತಾಂಶವಿರಲಿ ಯಾವಾಗಲೂ ಹುಡುಗಿಯರದ್ದೇ ಮೇಲುಗೈ ಏಕೆ?

  ಯಾವುದೇ ಪರೀಕ್ಷೆಯಲ್ಲಿ ಹುಡುಗಿಯರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ಆಗಿರುತ್ತಾರೆ. ಜೊತೆಗೆ ಟಾಪ್ ರ್ಯಾಂಕ್ ಗಳನ್ನು ಸಹ ಯುವತಿಯರೇ ತಮ್ಮದಾಗಿಸಿಕೊಂಡಿರುತ್ತಾರೆ. ನಿನ್ನೆ ಪ್ರಕಟಗೊಂಡ ಯುಪಿಎಸ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಅಗ್ರ 4 ರ್ಯಾಂಕ್ ಗಳನ್ನು ಯುವತಿಯರೇ ಆಕ್ರಮಿಸಿಕೊಂಡಿದ್ದಾರೆ. 5ನೇ ಸ್ಥಾನವನ್ನು ಯುವಕರಿಗೆ ಬಿಟ್ಟುಕೊಟ್ಟಿದ್ದಾರೆ. (ಚಿತ್ರ: UPSC 2022 ಟಾಪರ್ಸ್)

  MORE
  GALLERIES

 • 28

  UPSC Exam Result: ಯಾವುದೇ ಪರೀಕ್ಷೆ ಫಲಿತಾಂಶವಿರಲಿ ಯಾವಾಗಲೂ ಹುಡುಗಿಯರದ್ದೇ ಮೇಲುಗೈ ಏಕೆ?

  ಬೋರ್ಡ್ ಪರೀಕ್ಷೆಗಳು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಾಗಿ ಹುಡುಗಿಯರು ಅಗ್ರಸ್ಥಾನದಲ್ಲಿರುವುದನ್ನು ನೀವು ಗಮನಿಸಿರಬೇಕು. ಆದರೆ ಇದು ಏಕೆ ಹೀಗೆ ಎಂದು ಯೋಚಿಸಿದ್ದೀರಾ? ಆ ನಿಟ್ಟಿನಲ್ಲಿ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಅಧ್ಯಯನ ನಡೆಸಿದೆ.

  MORE
  GALLERIES

 • 38

  UPSC Exam Result: ಯಾವುದೇ ಪರೀಕ್ಷೆ ಫಲಿತಾಂಶವಿರಲಿ ಯಾವಾಗಲೂ ಹುಡುಗಿಯರದ್ದೇ ಮೇಲುಗೈ ಏಕೆ?

  ಸಮೀಕ್ಷೆಯ ಪ್ರಕಾರ ಹುಡುಗಿಯರು ಓದುವುದರಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ಅನೇಕ ಗಂಡು ಮಕ್ಕಳು ಓದಲು ಇಷ್ಟಪಡುವುದಿಲ್ಲ. ಹಾಗಾಗಿ ಹುಡುಗರಿಗೆ ಹುಡುಗಿಯರಿಗಿಂತ ಕಡಿಮೆ ಜ್ಞಾನವಿದೆ.

  MORE
  GALLERIES

 • 48

  UPSC Exam Result: ಯಾವುದೇ ಪರೀಕ್ಷೆ ಫಲಿತಾಂಶವಿರಲಿ ಯಾವಾಗಲೂ ಹುಡುಗಿಯರದ್ದೇ ಮೇಲುಗೈ ಏಕೆ?

  ಅರ್ಧಕ್ಕಿಂತ ಕಡಿಮೆ ಹುಡುಗಿಯರು ದಿನಕ್ಕೆ ಕನಿಷ್ಠ ಅರ್ಧ ಗಂಟೆ ಆದ್ರೈ ಓದುತ್ತಾರೆ. ಮೂರನೇ ಒಂದು ಭಾಗಕ್ಕಿಂತ ಕಡಿಮೆ ಮಕ್ಕಳು ಓದಲು ಹೆಚ್ಚು ಸಮಯವನ್ನು ಕಳೆಯುತ್ತಾರೆ.

  MORE
  GALLERIES

 • 58

  UPSC Exam Result: ಯಾವುದೇ ಪರೀಕ್ಷೆ ಫಲಿತಾಂಶವಿರಲಿ ಯಾವಾಗಲೂ ಹುಡುಗಿಯರದ್ದೇ ಮೇಲುಗೈ ಏಕೆ?

  ಕೆನಡಾದ ನ್ಯೂ ಬ್ರನ್ಸ್ ವಿಕ್ ವಿಶ್ವವಿದ್ಯಾನಿಲಯದ ಮನಃಶಾಸ್ತ್ರಜ್ಞರ ಅಧ್ಯಯನದ ಪ್ರಕಾರ, ಹುಡುಗಿಯರು ಗಮನಹರಿಸುವಲ್ಲಿ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಗಂಡು ಮಕ್ಕಳು ಹೆಚ್ಚು ಗಮನಹರಿಸಲು ಸಾಧ್ಯವಿಲ್ಲ, ಆದ್ದರಿಂದ ಅವರು ಪರೀಕ್ಷೆಯಲ್ಲಿ ಹಿಂದೆ ಉಳಿಯುತ್ತಾರೆ.

  MORE
  GALLERIES

 • 68

  UPSC Exam Result: ಯಾವುದೇ ಪರೀಕ್ಷೆ ಫಲಿತಾಂಶವಿರಲಿ ಯಾವಾಗಲೂ ಹುಡುಗಿಯರದ್ದೇ ಮೇಲುಗೈ ಏಕೆ?

  ಸಂಶೋಧನೆಯ ಪ್ರಕಾರ ಗಂಡು ಮಕ್ಕಳು ವರ್ಚುವಲ್ ಜಗತ್ತಿನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಆನ್ ಲೈನ್ ಆಟಗಳನ್ನು ಆಡುವ ಮೂಲಕ ಇಂಟರ್ನೆಟ್ ಅನ್ನು ಹೆಚ್ಚು ಬಳಸುತ್ತಾರೆ. ಇವರಿಗೆ ಕುಟುಂಬದಿಂದಲೂ ಕಡಿಮೆ ಪ್ರೋತ್ಸಾಹ ಸಿಗುತ್ತದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 78

  UPSC Exam Result: ಯಾವುದೇ ಪರೀಕ್ಷೆ ಫಲಿತಾಂಶವಿರಲಿ ಯಾವಾಗಲೂ ಹುಡುಗಿಯರದ್ದೇ ಮೇಲುಗೈ ಏಕೆ?

  ಹುಡುಗಿಯರು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಹಾಗಾಗಿ ಉತ್ತಮ ಅಂಕಗಳನ್ನು ಗಳಿಸಲು ಮನೆಯವರಿಂದ ಪ್ರೋತ್ಸಾಹವೂ ಸಿಗುತ್ತದೆ.

  MORE
  GALLERIES

 • 88

  UPSC Exam Result: ಯಾವುದೇ ಪರೀಕ್ಷೆ ಫಲಿತಾಂಶವಿರಲಿ ಯಾವಾಗಲೂ ಹುಡುಗಿಯರದ್ದೇ ಮೇಲುಗೈ ಏಕೆ?

  ಹುಡುಗ, ಹುಡುಗಿಯರ ನಡುವೆ ಯಾವುದೇ ತಾರತಮ್ಯ ಮಾಡುವ ಉದ್ದೇಶ ಹೊಂದಿಲ್ಲ. ಆದರೆ ಗಂಡು-ಹೆಣ್ಣು ಬೇಧವಿಲ್ಲದೆ ಯಾರೇ ಆದರೂ ಸರಿಯಾಗಿ ಮತ್ತು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅಧ್ಯಯನ ಮಾಡಿದರೆ ಪರೀಕ್ಷೆಗಳಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ.

  MORE
  GALLERIES