Monday Blues: ಭಾನುವಾರದ ರಜೆ ಬಳಿಕ ಸೋಮವಾರ ಕೆಲಸಕ್ಕೆ ಹೋಗಲು ಹಿಂಸೆ ಅನಿಸೋದು ಏಕೆ?
ಸೋಮವಾರ ಬೆಳಗ್ಗೆ ಒಮ್ಮೆ ಸೋಷಿಯಲ್ ಮೀಡಿಯಾದ ಮೇಲೆ ಕಣ್ಣಾಡಿಸಿ ಮೆಮೆ, ಟ್ರೋಲ್ ಪೇಜ್ ಗಳ ತುಂಬೆಲ್ಲಾ ಸೋಮವಾರ ಕೆಲಸಕ್ಕೆ ಹೋಗುವುದು ಎಷ್ಟು ಹಿಂಸೆ ಅನ್ನೋ ತರದ ಪೋಸ್ಟ್ ಗಳೇ ಕಣ್ಣಿಗೆ ರಾಚುತ್ತವೆ. ಇವುಗಳನ್ನು ನೋಡಿದ ಉದ್ಯೋಗಿಗಳು ಅಯ್ಯೋ ವೀಕ್ ಆಫ್ ಮುಗಿತು, ಮತ್ತೆ ಮುಂದಿನ ವೀಕ್ ಆಫ್ ವರೆಗೆ ಇಡೀ ವಾರ ಕೆಲಸ ಮಾಡಬೇಕು ಅಂತ ನೊಂದುಕೊಳ್ಳುತ್ತಾರೆ.
ಭಾನುವಾರದ ರಜೆ ಬಳಿಕ ಸೋಮವಾರ ಕೆಲಸಕ್ಕೆ ಹೋಗಲು ಹಿಂಸೆ ಅನಿಸೋದನ್ನು ಮಂಡೇ ಬ್ಲೂಸ್ ಅಂತಾರೆ. ಕೆಲಸದ ವಾರವನ್ನು ಪ್ರಾರಂಭಿಸುವ ಭಯದ ಭಾವನೆ ಇದು. ಉದ್ಯೋಗಿಗೆ ತಾನು ಮಾಡುವ ಕೆಲಸ, ಕಂಪನಿ ಇಷ್ಟವಿಲ್ಲದಿದ್ದರೆ ಮಂಡೇ ಬ್ಲೂಸ್ ಜಿಗುಪ್ಸೆಯ ಹಂತವನ್ನು ತಲುಪಿ ಬಿಡುತ್ತೆ.
2/ 7
ಇಡೀ ವಾರ ದೀರ್ಘವಾಗಿ ನಡೆಯುವ ಸಮಯ, ವಾರಂತ್ಯದಲ್ಲಿ ಮಾತ್ರ ಬೇಗನೇ ಮುಗಿದ ಭಾವನೆ ಮೂಡುತ್ತೆ. ಇನ್ನು ವಾರಂತ್ಯದ ವಿಶ್ರಾಂತಿಯ ಮೂಡ್ ನಿಂದ ಹೊರಬರಲು ಉದ್ಯೋಗಿಗಳಿಗೆ ಇಷ್ಟವಾಗುವುದಿಲ್ಲ.
3/ 7
ಇಷ್ಟೇ ಅಲ್ಲ, ವಾರಂತ್ಯದ ರಜೆಯನ್ನು ಟ್ರಿಪ್-ಸುತ್ತಾಟ ಎಂದು ಕಳೆಯುವ ಉದ್ಯೋಗಿಗಳು ವಿಶ್ರಾಂತಿಯನ್ನು ಕಡೆಗಣಿಸುತ್ತಾರೆ. ಸುತ್ತಾಟದ ದಣಿವಿನಲ್ಲೇ ಮತ್ತೆ ಕೆಲಸಕ್ಕೆ ಹೋಗುವುದು ನಿಜಕ್ಕೂ ಹಿಂಸೆ ಎನಿಸುತ್ತೆ.
4/ 7
ನಿತ್ಯದ ಕೆಲಸದ ಏಕತಾನತೆ, ಆಯಾಸದಿಂದ ಹೊರ ಬರಲು ವಾರಂತ್ಯದ ರಜೆ ಬೇಕೇಬೇಕು. ಆದರೆ ಬ್ರೇಕ್ ಟೈಮ್ ಅಲ್ಲೂ ಸುತ್ತಾಟ ಅಂತ ಮತ್ತಷ್ಟು ಆಯಾಸಗೊಂಡರೆ ಸೋಮವಾರ ಭಯಾನಕವಾಗಿಯೇ ಕಾಣುತ್ತೆ. ಇನ್ನು ಮಂಡೇ ಬ್ಲೂಸ್ ನಿಂದ ಹೊರ ಬರಲು ಕೆಲವೊಂದು ಟಿಪ್ಸ್ ಸಹ ಇದೆ. (ಸಾಂದರ್ಭಿಕ ಚಿತ್ರ)
5/ 7
ಸೋಮವಾರದ ಬೆಳಗಿನ ಕೆಲಸನ್ನು ರಜೆಗೆ ಹೋಗುವ ಮುನ್ನ ದಿನವೇ ಮಾಡಿ ಇಟ್ಟಿರಿ. ಇದರಿಂದ ಸೋಮವಾರ ಆಫೀಸ್ ಗೆ ಬಂದ ಕೂಡಲೇ ಹೆಚ್ಚು ಕೆಲಸ ಇರೋದಿಲ್ಲ. ಸಾಂಕೇತಿಕ ಚಿತ್ರ
6/ 7
ಸೋಮವಾರ ಆಫೀಸ್ ನಲ್ಲಿ ಮೂಡ್ ಚೆನ್ನಾಗಿರಬೇಕು ಎಂದರೆ ಭಾನುವಾರ ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು. ಮೋಜು-ಮಸ್ತಿ, ಲೇಟ್ ನೈಟ್ ಎಂಜಾಯ್ ಮೆಂಟ್ ಗಳನ್ನು ಶನಿವಾರ ರಾತ್ರಿ ಇಟ್ಟುಕೊಳ್ಳುವುದು ಜಾಣತನ.
7/ 7
ಇನ್ನು ನಿಮ್ಮ ಕೆಲಸದಲ್ಲಿ ಭಾನುವಾರದ ಬದಲು ಬೇರೆಯ ದಿನ ವೀಕ್ ಆಫ್ ತೆಗೆದುಕೊಳ್ಳುವ ಅವಕಾಶವಿದ್ದರೆ, ತೆಗೆದುಕೊಳ್ಳಿ. ಆಗ ಮಂಡೇ ಬ್ಲೂಸ್ ನಿಮ್ಮನ್ನು ಕಾಡೋದಿಲ್ಲ. ಸೋಮವಾರವೇ ಆಫ್ ಇದ್ದರಂತೂ ಮಂಡೇ ಬ್ಲೂಸ್ ಗೆ ನಿಮ್ಮಲ್ಲಿ ಅರ್ಥವೇ ಇಲ್ಲ ಎನ್ನಬಹುದು.