Govt Jobs: ಸರ್ಕಾರಿ ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ಪ್ರತಿವರ್ಷ ಈ ಇಲಾಖೆಗಳಲ್ಲೇ ಹೆಚ್ಚು ನೇಮಕಾತಿ ನಡೆಯೋದು

Govt Job Notifications: ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಿನ ಯುವ ಜನತೆ ಸರ್ಕಾರಿ ಉದ್ಯೋಗಗಳತ್ತ ಆಕರ್ಷಿತರಾಗುತ್ತಿದ್ದಾರೆ. ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷೆಗೆಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗುವುದೇ ಇದಕ್ಕೆ ಸಾಕ್ಷಿ. ಆದರೆ ಸರ್ಕಾರದ ಯಾವ ಇಲಾಖೆಗಳಲ್ಲಿ ಪ್ರತಿವರ್ಷ ಹೆಚ್ಚು ನೇಮಕಾತಿ ನಡೆಯುತ್ತದೆ ಗೊತ್ತೇ? ಆ ಕುರಿತ ಮಾಹಿತಿ ಇಲ್ಲಿದೆ. ಈ ಮಾಹಿತಿಯಿಂದ ಆಕಾಂಕ್ಷಿಗಳು ಸ್ಪಷ್ಟ ಗುರಿಯನ್ನು ಹೊಂದುವ ಮೂಲಕ ಸರ್ಕಾರಿ ಕೆಲಸ ಗಿಟ್ಟಿಸಬಹುದು.

First published:

  • 17

    Govt Jobs: ಸರ್ಕಾರಿ ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ಪ್ರತಿವರ್ಷ ಈ ಇಲಾಖೆಗಳಲ್ಲೇ ಹೆಚ್ಚು ನೇಮಕಾತಿ ನಡೆಯೋದು

    1) UPSC Jobs: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ ಅಥವಾ UPSC CSE ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ. UPSC ಯ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. UPSC ಯು IFS, IAS, IPS ಮತ್ತು ಇತರ ಗ್ರೂಪ್ A ಮತ್ತು B ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲು ಈ ಪರೀಕ್ಷೆಯನ್ನು ನಡೆಸುವ ಕೇಂದ್ರ ಸಮಿತಿಯಾಗಿದೆ. ಪ್ರತಿವರ್ಷ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ. ಇದಕ್ಕಾಗಿ ತಯಾರಿ ನಡೆಸುವವರಿಗೆ ಪ್ರತಿವರ್ಷ ಅವಕಾಶ ಸಿಗುತ್ತದೆ.

    MORE
    GALLERIES

  • 27

    Govt Jobs: ಸರ್ಕಾರಿ ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ಪ್ರತಿವರ್ಷ ಈ ಇಲಾಖೆಗಳಲ್ಲೇ ಹೆಚ್ಚು ನೇಮಕಾತಿ ನಡೆಯೋದು

    2) IBPS PO Recruitment: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಪ್ರತಿ ವರ್ಷ ಪ್ರೊಬೇಷನರಿ ಆಫೀಸರ್ ಗಳಿಗೆ ಖಾಲಿ ಹುದ್ದೆಗಳನ್ನು ಬಿಡುಗಡೆ ಮಾಡುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳು IBPS PO ಗಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ. ಇವುಗಳನ್ನು ಪ್ರತಿ ವರ್ಷ ಸೆಪ್ಟೆಂಬರ್/ಅಕ್ಟೋಬರ್ ನಲ್ಲಿ ನಡೆಸಲಾಗುತ್ತದೆ. ಅದರ ಅಧಿಸೂಚನೆಯನ್ನು ಪ್ರತಿ ವರ್ಷ ಆಗಸ್ಟ್ನಲ್ಲಿ ನೀಡಲಾಗುತ್ತದೆ.

    MORE
    GALLERIES

  • 37

    Govt Jobs: ಸರ್ಕಾರಿ ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ಪ್ರತಿವರ್ಷ ಈ ಇಲಾಖೆಗಳಲ್ಲೇ ಹೆಚ್ಚು ನೇಮಕಾತಿ ನಡೆಯೋದು

    3) SBI PO: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವರ್ಷವಿಡೀ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. PO ಎಂದರೆ ಪ್ರೊಬೇಷನರಿ ಆಫೀಸರ್, ಇದು ಪದವೀಧರರಲ್ಲಿ ಹೆಚ್ಚು ಬೇಡಿಕೆಯಿರುವ ಪೋಸ್ಟ್ ಗಳಲ್ಲಿ ಒಂದಾಗಿದೆ. SBI ತನ್ನ ವಿವಿಧ ಶಾಖೆಗಳಿಗೆ ಅವಶ್ಯಕತೆಗಳನ್ನು ಪೂರೈಸಲು ಪ್ರತಿ ವರ್ಷ PO ಪೋಸ್ಟ್ ಗಳ ಭರ್ತಿಗೆ ಕರೆ ನೀಡುತ್ತೆ. ಪ್ರಿಲಿಮ್ಸ್, ಮೇನ್ಸ್ ಮತ್ತು ಜಿಡಿ/ಇಂಟರ್ ವ್ಯೂ ಎಸ್ಬಿಐ ಪಿಒ ನೇಮಕಾತಿ ಪರೀಕ್ಷೆಯ ಮೂರು ಹಂತಗಳಾಗಿವೆ.

    MORE
    GALLERIES

  • 47

    Govt Jobs: ಸರ್ಕಾರಿ ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ಪ್ರತಿವರ್ಷ ಈ ಇಲಾಖೆಗಳಲ್ಲೇ ಹೆಚ್ಚು ನೇಮಕಾತಿ ನಡೆಯೋದು

    4) SSC CGL Recruitment: ಗ್ರೂಪ್ ಬಿ ಮತ್ತು ಗ್ರೂಪ್ ಸಿ ಯಲ್ಲಿ ಅಧಿಕಾರಿಗಳನ್ನು ನೇಮಿಸಿಕೊಳ್ಳಲು SSC CGL, SSC CHSL, SSC CPO ಇತ್ಯಾದಿ ಪರೀಕ್ಷೆಗಳನ್ನು ನಡೆಸುತ್ತದೆ. SSC ಎನ್ನುವುದು CGL ಅನ್ನು ಭರ್ತಿ ಮಾಡಲು ನಡೆಸಿದ ಪದವಿ ಮಟ್ಟದ ಪರೀಕ್ಷೆಯಾಗಿದೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಅಧಿಕಾರಿ, ಸಹಾಯಕ ಮಟ್ಟದ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪ್ರತಿವರ್ಷ ಈ ಪರೀಕ್ಷೆಗೆ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ.

    MORE
    GALLERIES

  • 57

    Govt Jobs: ಸರ್ಕಾರಿ ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ಪ್ರತಿವರ್ಷ ಈ ಇಲಾಖೆಗಳಲ್ಲೇ ಹೆಚ್ಚು ನೇಮಕಾತಿ ನಡೆಯೋದು

    5) RRB JE & SE Recruitment: ರೈಲ್ವೆಯು ಭಾರತದಲ್ಲಿನ ಅತಿದೊಡ್ಡ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ. ವಿಶ್ವದ ಅತಿದೊಡ್ಡ ಉದ್ಯೋಗದಾತರಲ್ಲಿ ಒಂದಾಗಿದೆ. ಇದು ವಿವಿಧ ವಿಭಾಗಗಳಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು RRB JE ನೇಮಕಾತಿಯನ್ನು ನಡೆಸುತ್ತದೆ.

    MORE
    GALLERIES

  • 67

    Govt Jobs: ಸರ್ಕಾರಿ ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ಪ್ರತಿವರ್ಷ ಈ ಇಲಾಖೆಗಳಲ್ಲೇ ಹೆಚ್ಚು ನೇಮಕಾತಿ ನಡೆಯೋದು

    6) RBI Grade B : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದೇಶದ ಕೇಂದ್ರ ಬ್ಯಾಂಕ್. ಭಾರತ ಸರ್ಕಾರದ ಸಂಪೂರ್ಣ ಸ್ವಾಮ್ಯದ ಬ್ಯಾಂಕ್ ಇದಾಗಿದೆ. ಪ್ರತಿ ವರ್ಷ, ಆರ್ ಬಿಐ ತನ್ನ ಮ್ಯಾನೇಜ್ ಮೆಂಟ್ ಕೇಡರ್ ನಲ್ಲಿ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಪರೀಕ್ಷೆಯನ್ನು ನಡೆಸುತ್ತದೆ. ಇದನ್ನು ಆರ್ಬಿಐ ಗ್ರೇಡ್ ಬಿ ಅಧಿಕಾರಿಗಳ ನೇಮಕಾತಿ ಎಂದು ಕರೆಯಲಾಗುತ್ತದೆ.

    MORE
    GALLERIES

  • 77

    Govt Jobs: ಸರ್ಕಾರಿ ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ಪ್ರತಿವರ್ಷ ಈ ಇಲಾಖೆಗಳಲ್ಲೇ ಹೆಚ್ಚು ನೇಮಕಾತಿ ನಡೆಯೋದು

    7) RRB ALP Recruitment : RRB ALP ಎಂಬುದು ಲೋಕೋ ಪೈಲಟ್ ಲೋಕೋಮೋಟಿವ್ ಪೈಲಟ್ ನ ಕಿರು ರೂಪವಾಗಿದೆ. ಇದನ್ನು ಭಾರತೀಯ ರೈಲ್ವೇಯ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಇಬ್ಬರು ಲೋಕೋ ಪೈಲಟ್ ಗಳು ಲೊಕೊಮೊಟಿವ್ ಎಂಜಿನ್ ಅನ್ನು ಚಾಲನೆ ಮಾಡುತ್ತಾರೆ. ಲೊಕೊ ಪೈಲಟ್ ಗಳನ್ನು ಆಯ್ಕೆ ಮಾಡಲು ಭಾರತೀಯ ರೈಲ್ವೇ RRB ALP ಪರೀಕ್ಷೆಯನ್ನು ನಡೆಸುತ್ತದೆ.

    MORE
    GALLERIES