2) ಐಎಎಸ್ ಸೃಷ್ಟಿ ಜಯಂತ್ ದೇಶಮುಖ್ ಅವರು ತಮ್ಮ ಬ್ಯಾಚ್ ಮೇಟ್ ಕರ್ನಾಟಕದ ಐಎಎಸ್ ಡಾ. ನಾಗಾರ್ಜುನ ಬಿ.ಗೌಡ ಅವರೊಂದಿಗೆ ಪ್ರೇಮ ವಿವಾಹವಾಗಿದ್ದಾರೆ. ಸಿವಿಲ್ ಸರ್ವಿಸ್ ಟ್ರೈನಿಂಗ್ ಅಕಾಡೆಮಿ LBSNAA ಅಂದರೆ ಲಾಲ್ ಬಹದ್ದೂರ್ ಶಾಸ್ತ್ರಿ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿಯ ಸಮಯದಲ್ಲಿ ಇಬ್ಬರೂ ಭೇಟಿಯಾದರು. ಈ ಇಬ್ಬರೂ ಸುಮಾರು ಎರಡೂವರೆ ವರ್ಷಗಳ ಪ್ರೀತಿಸಿದ ಬಳಿಕ 24 ಏಪ್ರಿಲ್ 2022 ರಂದು ವಿವಾಹವಾದರು. ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
3) ಐಎಎಸ್ ತುಷಾರ್ ಸಿಂಗ್ಲಾ ಮತ್ತು ಐಪಿಎಸ್ ನವಜೋತ್ ಸಿಮಿ ಅವರ ಪ್ರೇಮಕಥೆ ತುಂಬಾನೇ ಫೇಮಸ್. ಇಬ್ಬರೂ ಒಂದಷ್ಟು ಕಾಲ ಡೇಟಿಂಗ್ ಮಾಡಿದ ನಂತರ ಮದುವೆಯಾಗಲು ನಿರ್ಧರಿಸಿದ್ದರು. ಫೆಬ್ರವರಿ 14, 2020 ರಂದು, ಪ್ರೇಮಿಗಳ ದಿನದ ಸಂದರ್ಭದಲ್ಲಿ, ಇಬ್ಬರೂ ಐಎಎಸ್ ತುಷಾರ್ ಸಿಂಗ್ಲಾ ಅವರ ಕಚೇರಿಯಲ್ಲಿ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು.
5) ಐಪಿಎಸ್ ಅಂಕುರ್ ಅಗರವಾಲ್ ಮತ್ತು ಐಪಿಎಸ್ ವೃಂದಾ ಶುಕ್ಲಾ ಹರಿಯಾಣದ ಅಂಬಾಲಾ ನಿವಾಸಿಗಳು. ಇಬ್ಬರೂ ಸೇರಿ 10ನೇ ತರಗತಿವರೆಗೆ ಓದಿದ್ದಾರೆ. ವೃಂದಾ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋದರು ಮತ್ತು ಅಂಕುರ್ ಭಾರತದಿಂದಲೇ ಇಂಜಿನಿಯರಿಂಗ್ ಪದವಿ ಪಡೆದರು. ವಿದ್ಯಾಭ್ಯಾಸ ಮುಗಿಸಿದ ವೃಂದಾ ಅಮೆರಿಕದಲ್ಲಿ ಕೆಲಸ ಮಾಡಲು ಆರಂಭಿಸಿದಳು. ಬೆಂಗಳೂರಿನಲ್ಲಿ ಒಂದು ವರ್ಷ ಕೆಲಸ ಮಾಡಿ ಅಂಕುರ್ ಕೂಡ ಅಮೆರಿಕಕ್ಕೆ ಹೋದರು. ಇಬ್ಬರೂ ಅಲ್ಲಿ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ಐಪಿಎಸ್ ಆದ ನಂತರ ಇಬ್ಬರೂ 2019ರಲ್ಲಿ ಮದುವೆಯಾದರು.
8) IAS ಅರ್ತಿಕಾ ಶುಕ್ಲಾ ಮತ್ತು IAS ಜಸ್ಮೀತ್ ಸಿಂಗ್ ಸಂಧು LBSNAA ನಲ್ಲಿ ತರಬೇತಿ ಸಮಯದಲ್ಲಿ ಭೇಟಿಯಾದರು. IAS ತರಬೇತಿಯ ನಂತರ, ಜಸ್ಮೀತ್ ಸಿಂಗ್ ರಾಜಸ್ಥಾನದಲ್ಲಿ ಪೋಸ್ಟಿಂಗ್ ಪಡೆದರು ಮತ್ತು ಅರ್ತಿಕಾ ಶುಕ್ಲಾ ಅವರು ಭಾರತೀಯ ಆಡಳಿತ ಸೇವಾ ಕೇಂದ್ರಾಡಳಿತ ಪ್ರದೇಶದಲ್ಲಿ ಹುದ್ದೆ ಪಡೆದರು. ನಂತರ ಅರ್ತಿಕಾ ಶುಕ್ಲಾ ಕೂಡ ಜಸ್ಮೀತ್ ಸಿಂಗ್ ಸಂಧು ಅವರ ವಿವಾಹವನ್ನು ಉಲ್ಲೇಖಿಸಿ ರಾಜಸ್ಥಾನ ಕೇಡರ್ ಗೆ ಸೇರಿದರು. ಈ ಜೋಡಿ 2017 ರಲ್ಲಿ ವಿವಾಹವಾಗಿದೆ.