ಈ ದೂರು ನಿಮ್ಮೊಬ್ಬರದ್ದೇ ಅಲ್ಲ, ಬಹುತೇಕ ಉದ್ಯೋಗಿಗಳು ಇದೇ ರೀತಿ ದೂರುತ್ತಾರೆ. ಅದರಲ್ಲೂ ಸಣ್ಣ ಬ್ರೇಕ್ ತೆಗೆದುಕೊಂಡು ಬಿಟ್ಟರೆ, ಆಫೀಸ್ ಮೀಟಿಂಗ್ ಗಳಿದ್ದರೆ ಆ ದಿನದ ಕೆಲಸ ಆಗೋದೇ ಇಲ್ಲ. ಆಫೀಸ್ ಕೆಲಸವನ್ನು ಬೇಗ ಬೇಗ ಮುಗಿಸಿದ್ರೆ ನಿರಾಳವಾಗಿರಬಹುದು. ಹಾಗಾದರೆ ಆಫೀಸ್ ಕೆಲಸಗಳು ಬೇಗ ಬೇಗ ಮುಗಿಯಬೇಕು ಅಂದ್ರೆ ಏನ್ ಮಾಡಬೇಕು. ಇದಕ್ಕಾಗಿ ಕೆಲವೊಂದು ಟಿಪ್ಸ್ & ಟ್ರಿಕ್ಸ್ ಇವೆ. ಅವುಗಳನ್ನು ಪಾಲಿಸಿದೆ ನಿಮ್ಮ ಕೆಲಸಗಳನ್ನು ವೇಗವಾಗಿ ಮಾಡಿ ಮುಗಿಸಬಹುದು.