Success Story: ಶೃತಿ ಯರಗಟ್ಟಿ UPSC ಸಾಧನೆ; ಪರೀಕ್ಷೆ ಪಾಸ್ ಆಗಲು ಸೀಕ್ರೆಟ್ ತಿಳಿಸಿದ ಬೆಳಗಾವಿ ಯುವತಿ

ಈ ವರ್ಷ ಯುಪಿಎಸ್ ಸಿ ಪರೀಕ್ಷೆ ಪಾಸ್ ಆಗಿರುವ 25 ಕನ್ನಡಿಗರಲ್ಲಿ ಬೆಳಗಾವಿ ಮೂಲದ ಶೃತಿ ಯರಗಟ್ಟಿ ಕೂಡ ಒಬ್ಬರು. 362ನೇ Rank ಪಡೆದಿರುವ ಶೃತಿ ಅವರು ಮೂಡಲಗಿ ತಾಲೂಕಿನ ಅರಭಾವಿ ಪಟ್ಟಣದ ನಿವಾಸಿ. ಫಲಿತಾಂಶ ಬಂದ ಕೂಡಲೇ ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆ ಮಾತನಾಡಿರುವ ಶೃತಿ ತಮ್ಮ ಯಶಸ್ಸಿನ ಹಾದಿಯ ಬಗ್ಗೆ ಹಂಚಿಕೊಂಡಿದ್ದಾರೆ. (ವರದಿ: ಶರಣು ಹಂಪಿ)

First published:

  • 18

    Success Story: ಶೃತಿ ಯರಗಟ್ಟಿ UPSC ಸಾಧನೆ; ಪರೀಕ್ಷೆ ಪಾಸ್ ಆಗಲು ಸೀಕ್ರೆಟ್ ತಿಳಿಸಿದ ಬೆಳಗಾವಿ ಯುವತಿ

    ಶಿರಢಾಣ ಗ್ರಾಮದ ಡಾ.ಗಂಗಾಧರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಇವರು, ಕೆಸಿಡಿ ಧಾರವಾಡದಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ್ದಾರೆ. ಬಿಎಸ್ ಸಿಯಲ್ಲಿ 7 ಚಿನ್ನದ ಪದಕ ಗಳಿಸಿದ್ದಾರೆ.

    MORE
    GALLERIES

  • 28

    Success Story: ಶೃತಿ ಯರಗಟ್ಟಿ UPSC ಸಾಧನೆ; ಪರೀಕ್ಷೆ ಪಾಸ್ ಆಗಲು ಸೀಕ್ರೆಟ್ ತಿಳಿಸಿದ ಬೆಳಗಾವಿ ಯುವತಿ

    ಇನ್ನು ಗ್ರಾಮೀಣ ಭಾಗದಿಂದ ಬಂದಿರುವ ಶೃತಿ ಅವರ ಇಂದಿನ ಸಾಧನೆಯ ಹಿಂದೆ ಹಲವು ವರ್ಷಗಳ ಪ್ರಯತ್ನವಿದೆ. ಪದವಿ ಬಳಿಕ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ಶುರು ಮಾಡಿದರು. 1 ವರ್ಷಗಳ ಕಾಲ ಕೋಚಿಂಗ್ ಅನ್ನು ಸಹ ಪಡೆದುಕೊಂಡಿದ್ದರು. 5 ಪ್ರಯತ್ನಗಳಲ್ಲಿ ವಿಫಲರಾದ ಬಳಿಕ ಈಗ ತಮ್ಮ 6ನೇ ಪ್ರಯತ್ನದಲ್ಲಿ ಶೃತಿ ಯುಪಿಎಸ್ಸಿ ಪಾಸ್ ಮಾಡಿದ್ದಾರೆ.

    MORE
    GALLERIES

  • 38

    Success Story: ಶೃತಿ ಯರಗಟ್ಟಿ UPSC ಸಾಧನೆ; ಪರೀಕ್ಷೆ ಪಾಸ್ ಆಗಲು ಸೀಕ್ರೆಟ್ ತಿಳಿಸಿದ ಬೆಳಗಾವಿ ಯುವತಿ

    ಮೊದಲ 3 ಪ್ರಯತ್ನಗಳಲ್ಲಿ ಶೃತಿ ಅವರಿಗೆ ಪ್ರಿಲಿಮ್ಸ್ ಸಹ ಪಾಸ್ ಮಾಡಲು ಆಗಲಿಲ್ಲ. 4ನೇ ಬಾರಿ ಸಂದರ್ಶನದ ಹಂತಕ್ಕೆ ಹೋದರೂ ಅಂತಿಮ ಯಶಸ್ಸು ಸಿಗಲಿಲ್ಲ. 5ನೇ ಪ್ರಯತ್ನದಲ್ಲೂ ಸಾಧ್ಯವಾಗಲಿಲ್ಲ. ಕೊನೆಗೆ ಈಗ 6ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

    MORE
    GALLERIES

  • 48

    Success Story: ಶೃತಿ ಯರಗಟ್ಟಿ UPSC ಸಾಧನೆ; ಪರೀಕ್ಷೆ ಪಾಸ್ ಆಗಲು ಸೀಕ್ರೆಟ್ ತಿಳಿಸಿದ ಬೆಳಗಾವಿ ಯುವತಿ

    ಶೃತಿ ಅವರಿಗೆ ಅವರ ಶಾಲಾ ಶಿಕ್ಷಕರೊಬ್ಬರು ಐಎಎಸ್, ಐಪಿಎಸ್ ಅಧಿಕಾರಿಗಳ ಬಗ್ಗೆ ತಿಳಿಸಿದ್ದು ಸ್ಪೂರ್ತಿ ಆಯಿತ್ತಂತೆ. ಅಂದಿನಿಂದ ತಮ್ಮ ಗುರಿಯತ್ತ ಸಾಗಲು ಶ್ರಮ ಆಗಿದ್ದಾರೆ. ಯುಪಿಎಸ್ ಸಿ ಪರೀಕ್ಷೆ ಸುಲಭವಲ್ಲ. ಒಬ್ಬ ಅಭ್ಯರ್ಥಿ ಸರಾಸರಿ 4 ಅಟೆಂಟ್ ಗಳನ್ನು ತೆಗೆದುಕೊಳ್ಳುತ್ತಾರೆ. ಈ ಜರ್ನಿಯಲ್ಲಿ ಕುಗ್ಗದೆ ಪ್ರಯತ್ನಿಸಬೇಕು ಎಂದು ಶೃತಿ ಸಲಹೆ ನೀಡಿದ್ದಾರೆ.

    MORE
    GALLERIES

  • 58

    Success Story: ಶೃತಿ ಯರಗಟ್ಟಿ UPSC ಸಾಧನೆ; ಪರೀಕ್ಷೆ ಪಾಸ್ ಆಗಲು ಸೀಕ್ರೆಟ್ ತಿಳಿಸಿದ ಬೆಳಗಾವಿ ಯುವತಿ

    ಸದಾ ಕಲಿಯುವ ಮನಸ್ಸನ್ನು ಹೊಂದಿರಬೇಕು. ಸ್ಮಾರ್ಟ್ ವರ್ಕ್ ತುಂಬಾನೇ ಮುಖ್ಯ. ನಾನು ಗಂಟೆಗಳ ಲೆಕ್ಕ ಇಲ್ಲದೆ ಓದುತ್ತಿದ್ದೆ. ಅಂದಾಜು ದಿನಕ್ಕೆ 12 ಗಂಟೆಗಳ ಕಾಲ ವೇಳಾಪಟ್ಟಿ ಹಾಕಿಕೊಂಡು ಅಧ್ಯಯನ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

    MORE
    GALLERIES

  • 68

    Success Story: ಶೃತಿ ಯರಗಟ್ಟಿ UPSC ಸಾಧನೆ; ಪರೀಕ್ಷೆ ಪಾಸ್ ಆಗಲು ಸೀಕ್ರೆಟ್ ತಿಳಿಸಿದ ಬೆಳಗಾವಿ ಯುವತಿ

    2 ವರ್ಷ ಯಾವುದೇ ಉದ್ಯೋಗ ಮಾಡದೆ ತಯಾರಿ ನಡೆಸಬೇಕು. ನಂತರ ಕರೆಂಟ್ ಅಫೇರ್ಸ್ ಬಗ್ಗೆ ಜ್ಞಾನ ಗಳಿಸುತ್ತಾ ಹೋದರೆ ಸಾಕು. 2 ವರ್ಷಗಳ ಬೇಸ್ ತಯಾರಿ ಬಳಿಕ ಉದ್ಯೋಗ ಮಾಡಿಕೊಂಡು ಎಕ್ಸಾಂಗೆ ತಯಾರಾಗಬಹುದು ಎಂದು ಶೃತಿ ಹೇಳಿದ್ದಾರೆ.

    MORE
    GALLERIES

  • 78

    Success Story: ಶೃತಿ ಯರಗಟ್ಟಿ UPSC ಸಾಧನೆ; ಪರೀಕ್ಷೆ ಪಾಸ್ ಆಗಲು ಸೀಕ್ರೆಟ್ ತಿಳಿಸಿದ ಬೆಳಗಾವಿ ಯುವತಿ

    ಇನ್ನು ಕನ್ನಡದ ಮಾಧ್ಯಮದ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಪಾಸ್ ಆಗಬಹುದು. ಪ್ರಿಲಿಮ್ಸ್ ಪರೀಕ್ಷೆ ಮಾತ್ರ ಇಂಗ್ಲಿಷ್-ಹಿಂದಿಯಲ್ಲಿರುತ್ತೆ. ಇದು ಸ್ವಲ್ಪ ಕಷ್ಟವಾಗಬಹುದು. ನಂತರ ಮೇನ್ಸ್ ಪರೀಕ್ಷೆ, ಸಂದರ್ಶನವನ್ನು ಕನ್ನಡದಲ್ಲೇ ಮಾಡಬಹುದು ಎಂದು ತಿಳಿಸಿದರು.

    MORE
    GALLERIES

  • 88

    Success Story: ಶೃತಿ ಯರಗಟ್ಟಿ UPSC ಸಾಧನೆ; ಪರೀಕ್ಷೆ ಪಾಸ್ ಆಗಲು ಸೀಕ್ರೆಟ್ ತಿಳಿಸಿದ ಬೆಳಗಾವಿ ಯುವತಿ

    ಶೃತಿ ಅವರ ತಂದೆ ನಿವೃತ್ತ ಶಾಲಾ ಶಿಕ್ಷಕರಾಗಿದ್ದಾರೆ. ಇವರ ಕುಟುಂಬದಲ್ಲೇ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿರುವವರಲ್ಲಿ ಶೃತಿ ಅವರೇ ಮೊದಲಿಗರು. ಇನ್ನು ತಮ್ಮ ಸಾಧನೆಗೆ ಪೋಷಕರು, ತಂಗಿ-ತಮ್ಮ ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಶೃತಿ ಸ್ಮರಿಸಿಕೊಳ್ಳುತ್ತಾರೆ.

    MORE
    GALLERIES