Success Story: UPSC ಪರೀಕ್ಷೆಯಲ್ಲಿ 2ನೇ Rank ಪಡೆದಿದ್ದರೂ ಡಿವೋರ್ಸ್, 2ನೇ ಮದುವೆಯಿಂದಲೇ ಸುದ್ದಿಯಾದ ಅಧಿಕಾರಿ

ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಐಎಎಸ್ ಅಥರ್ ಅಮೀರ್ ಖಾನ್. ಇವರು ಯುಪಿಎಸ್ ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ 2ನೇ ರ್ಯಾಂಕ್ ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಆದರೆ ತಮ್ಮ ವೈಯಕ್ತಿಕ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾದ ಇವರ ಬಗ್ಗೆ ತಿಳಿಯೋಣ ಬನ್ನಿ

First published:

  • 18

    Success Story: UPSC ಪರೀಕ್ಷೆಯಲ್ಲಿ 2ನೇ Rank ಪಡೆದಿದ್ದರೂ ಡಿವೋರ್ಸ್, 2ನೇ ಮದುವೆಯಿಂದಲೇ ಸುದ್ದಿಯಾದ ಅಧಿಕಾರಿ

    ಐಎಎಸ್ ಅಥರ್ ಅಮೀರ್ ಖಾನ್ ದೇಶದ ಯುವ ಪ್ರತಿಭಾವಂತ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು. ಜಮ್ಮು-ಕಾಶ್ಮೀರದ ನಿವಾಸಿಯಾದ ಅಥರ್ ಅವರು 2015ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಪಡೆಯುವ ಮೂಲಕ ಟಾಪರ್ ಎನಿಸಿಕೊಂಡರು.

    MORE
    GALLERIES

  • 28

    Success Story: UPSC ಪರೀಕ್ಷೆಯಲ್ಲಿ 2ನೇ Rank ಪಡೆದಿದ್ದರೂ ಡಿವೋರ್ಸ್, 2ನೇ ಮದುವೆಯಿಂದಲೇ ಸುದ್ದಿಯಾದ ಅಧಿಕಾರಿ

    ಇವರ ಕುಟುಂಬದಲ್ಲೇ ಐಎಎಸ್ ಅಧಿಕಾರಿಯಾದ ಮೊದಲ ವ್ಯಕ್ತಿ ಇವರು. ಅಥರ್ ಅಮೀರ್ ಖಾನ್ ಕೇವಲ 23ನೇ ವಯಸ್ಸಿನಲ್ಲೇ ಅತ್ಯಂತ ಕಠಿಣವಾದ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದಾರೆ.

    MORE
    GALLERIES

  • 38

    Success Story: UPSC ಪರೀಕ್ಷೆಯಲ್ಲಿ 2ನೇ Rank ಪಡೆದಿದ್ದರೂ ಡಿವೋರ್ಸ್, 2ನೇ ಮದುವೆಯಿಂದಲೇ ಸುದ್ದಿಯಾದ ಅಧಿಕಾರಿ

    ಅನಂತನಾಗ್ ಜಿಲ್ಲೆಯ ದೇವಿಪುರ ಗ್ರಾಮದ ನಿವಾಸಿ ಇವರು. ಇವರ ತಂದೆ ಮೊಹಮ್ಮದ್ ಶಫಿ ಖಾನ್ ಶಿಕ್ಷಕರಾಗಿದ್ದರು. ಅಥರ್ ಅಮೀರ್ ಖಾನ್ ತಮ್ಮ ಶಾಲಾ ಶಿಕ್ಷಣವನ್ನು ಅನಂತನಾಗ್, ಶ್ರೀನಗರದ ಶಾಲೆಗಳಲ್ಲಿ ಪೂರೈಸಿದ್ದಾರೆ. ಐಎಎಸ್ ಅಥರ್ ಅಮೀರ್ ಖಾನ್ 12ನೇ ತರಗತಿಯ ನಂತರ ಐಐಟಿಗೆ ಪ್ರವೇಶ ಪಡೆದರು.

    MORE
    GALLERIES

  • 48

    Success Story: UPSC ಪರೀಕ್ಷೆಯಲ್ಲಿ 2ನೇ Rank ಪಡೆದಿದ್ದರೂ ಡಿವೋರ್ಸ್, 2ನೇ ಮದುವೆಯಿಂದಲೇ ಸುದ್ದಿಯಾದ ಅಧಿಕಾರಿ

    ಹಿಮಾಚಲ ಪ್ರದೇಶದ ಐಐಟಿ ಮಂಡಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಎಂಜಿನಿಯರಿಂಗ್ ನಂತರ ನಾಗರಿಕ ಸೇವೆಗೆ ಸೇರಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು 2009 ರಲ್ಲಿ UPSC ಟಾಪರ್ ಆಗಿದ್ದ ಶಾ ಫೈಸಲ್ ಅವರಿಂದ ಸಲಹೆ ಪಡೆದಿದ್ದರು.

    MORE
    GALLERIES

  • 58

    Success Story: UPSC ಪರೀಕ್ಷೆಯಲ್ಲಿ 2ನೇ Rank ಪಡೆದಿದ್ದರೂ ಡಿವೋರ್ಸ್, 2ನೇ ಮದುವೆಯಿಂದಲೇ ಸುದ್ದಿಯಾದ ಅಧಿಕಾರಿ

    ಐಎಎಸ್ ಅಥರ್ ಅಮೀರ್ ಖಾನ್ ಅವರಿಗೆ ಭಾರತೀಯ ರೈಲ್ವೆ ಸಂಚಾರ ಸೇವೆಯಲ್ಲಿ ಕೆಲಸ ನೀಡಲಾಯಿತು. ಆದರೆ ಅವರು ಐಎಎಸ್ ಆಗಬೇಕೆಂದು ನಿರ್ಧರಿಸಿದ್ದರು, ಅದಕ್ಕಾಗಿ ತಯಾರಿ ನಡೆಸುತ್ತಿದ್ದರು. UPSC ಪರೀಕ್ಷೆಯ ಮೊದಲ ಪ್ರಯತ್ನದಲ್ಲಿಯೇ ಎರಡನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾದರು.

    MORE
    GALLERIES

  • 68

    Success Story: UPSC ಪರೀಕ್ಷೆಯಲ್ಲಿ 2ನೇ Rank ಪಡೆದಿದ್ದರೂ ಡಿವೋರ್ಸ್, 2ನೇ ಮದುವೆಯಿಂದಲೇ ಸುದ್ದಿಯಾದ ಅಧಿಕಾರಿ

    IAS ಅಥರ್ ಅಮೀರ್ ಖಾನ್ ತಮ್ಮ ಯಶಸ್ಸಿನ ತಂತ್ರಗಳನ್ನು ಹಲವು ಬಾರಿ ಹಂಚಿಕೊಂಡಿದ್ದಾರೆ. UPSC ಪರೀಕ್ಷೆಯ ತಯಾರಿಯ ಸಮಯದಲ್ಲಿ ಅವರು ಪ್ರತಿದಿನ ಕನಿಷ್ಠ ಎರಡು ಪತ್ರಿಕೆಗಳನ್ನು ಓದುತ್ತಿದ್ದರು, ಟಿಪ್ಪಣಿಗಳನ್ನು ಮಾಡುತ್ತಿದ್ದರಂತೆ.

    MORE
    GALLERIES

  • 78

    Success Story: UPSC ಪರೀಕ್ಷೆಯಲ್ಲಿ 2ನೇ Rank ಪಡೆದಿದ್ದರೂ ಡಿವೋರ್ಸ್, 2ನೇ ಮದುವೆಯಿಂದಲೇ ಸುದ್ದಿಯಾದ ಅಧಿಕಾರಿ

    ಐಎಎಸ್ ಅಥರ್ ಅಮೀರ್ ಖಾನ್ ಅವರು ತಮ್ಮ ವೈಯಕ್ತಿಕ ವಿಷಯಗಳಿಂದಲೂ ಸಾಕಷ್ಟು ಚರ್ಚೆಯಲ್ಲಿದ್ದರು. 2018 ರಲ್ಲಿ ಐಎಎಸ್ ಟೀನಾ ದಾಬಿ ಅವರನ್ನು ವಿವಾಹವಾಗಿದ್ದರು. ಇವರು ಮೊದಲ ರ್ಯಾಂಕ್ ಪಡೆದಿದ್ದರು. ಮೊದಲು ಮತ್ತು 2ನೇ ರ್ಯಾಂಕ್ ಪಡೆದವರು ಮದುವೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ 2021 ರಲ್ಲಿ, ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಡಿವೋರ್ಸ್ ಪಡೆದರು.

    MORE
    GALLERIES

  • 88

    Success Story: UPSC ಪರೀಕ್ಷೆಯಲ್ಲಿ 2ನೇ Rank ಪಡೆದಿದ್ದರೂ ಡಿವೋರ್ಸ್, 2ನೇ ಮದುವೆಯಿಂದಲೇ ಸುದ್ದಿಯಾದ ಅಧಿಕಾರಿ

    ಇತ್ತೀಚೆಗೆ ಅಥರ್ ಅವರು ನವದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಮತ್ತು ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಮೆಹ್ರೀನ್ ಖಾಜಿ ಅವರನ್ನು 2ನೇ ಮದುವೆಯಾಗಿದ್ದಾರೆ. ಈ ಜೋಡಿ ಆಗಾಗ್ಗೆ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

    MORE
    GALLERIES