UPSC Success Story: ಸುದೀರ್ಘ 14 ಗಂಟೆಗಳ ಡ್ಯೂಟಿ ಜೊತೆಗೆ ಮೊದಲ ಪ್ರಯತ್ನದಲ್ಲೇ IAS ಆದ ಅಕ್ಷಿತಾ

ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಮಹಿಳಾ ಐಎಎಸ್ ಅಧಿಕಾರಿ ಅಕ್ಷಿತಾ ಗುಪ್ತಾ. ನಿತ್ಯ 14 ಗಂಟೆಗಳ ಸುದೀರ್ಘ ಉದ್ಯೋಗದ ಮಧ್ಯೆಯೂ ಪರೀಕ್ಷೆಗೆ ತಯಾರಿ ನಡೆಸಿ, ಮೊದಲ ಪ್ರಯತ್ನದಲ್ಲೇ UPSC ಅಲ್ಲಿ ಯಶಸ್ವಿಯಾಗಿದ್ದಾರೆ. ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ.

First published:

  • 17

    UPSC Success Story: ಸುದೀರ್ಘ 14 ಗಂಟೆಗಳ ಡ್ಯೂಟಿ ಜೊತೆಗೆ ಮೊದಲ ಪ್ರಯತ್ನದಲ್ಲೇ IAS ಆದ ಅಕ್ಷಿತಾ

    ಬಹುತೇಕರು ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ನಿರಂತರ ಅಧ್ಯಯನ , ಕೋಚಿಂಗ್ ಪಡೆಯುತ್ತಾರೆ. ಆದರೆ ಐಎಎಸ್ ಅಧಿಕಾರಿ ಅಕ್ಷಿತಾ ಗುಪ್ತಾ ಉದ್ಯೋಗ ಮಾಡಿಕೊಂಡೇ UPSCಯಲ್ಲಿ 69ನೇ ರ್ಯಾಂಕ್ ಪಡೆದಿದ್ದಾರೆ.

    MORE
    GALLERIES

  • 27

    UPSC Success Story: ಸುದೀರ್ಘ 14 ಗಂಟೆಗಳ ಡ್ಯೂಟಿ ಜೊತೆಗೆ ಮೊದಲ ಪ್ರಯತ್ನದಲ್ಲೇ IAS ಆದ ಅಕ್ಷಿತಾ

    ಚಂಡೀಗಢದಲ್ಲಿ ಜನಿಸಿದ ಡಾ. ಅಕ್ಷಿತಾ ಗುಪ್ತಾ ಅವರ ತಂದೆ ಪವನ್ ಗುಪ್ತಾ ಅವರು ಪಂಚಕುಲದ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ಅವರ ತಾಯಿ ಮೀನಾ ಗುಪ್ತಾ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಗಣಿತ ಉಪನ್ಯಾಸಕಿ.

    MORE
    GALLERIES

  • 37

    UPSC Success Story: ಸುದೀರ್ಘ 14 ಗಂಟೆಗಳ ಡ್ಯೂಟಿ ಜೊತೆಗೆ ಮೊದಲ ಪ್ರಯತ್ನದಲ್ಲೇ IAS ಆದ ಅಕ್ಷಿತಾ

    ಅಕ್ಷಿತಾ ಗುಪ್ತಾ ಐಎಎಸ್ ಆಗುವ ಮೊದಲು ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿದ್ದರು. ಆಸ್ಪತ್ರೆಯಲ್ಲಿ 14 ಗಂಟೆಗಳ ಕರ್ತವ್ಯದೊಂದಿಗೆ ಅವರು UPSC ಗೆ ತಯಾರಿ ನಡೆಸಿದರು. 15 ನಿಮಿಷ ಸಿಕ್ಕರೂ ಓದುತ್ತಿದ್ದರಂತೆ.

    MORE
    GALLERIES

  • 47

    UPSC Success Story: ಸುದೀರ್ಘ 14 ಗಂಟೆಗಳ ಡ್ಯೂಟಿ ಜೊತೆಗೆ ಮೊದಲ ಪ್ರಯತ್ನದಲ್ಲೇ IAS ಆದ ಅಕ್ಷಿತಾ

    ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ನ ಮುಖ್ಯ ಪರೀಕ್ಷೆಯಲ್ಲಿ ವೈದ್ಯಕೀಯಕ್ಕೆ ಸಂಬಂಧಿಸಿದ ಐಚ್ಛಿಕ ವಿಷಯಗಳನ್ನೇ ಅಕ್ಷಿತಾ ಗುಪ್ತಾ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಅವರ ತಯಾರಿಯಲ್ಲಿ ಸಾಕಷ್ಟು ಸಹಾಯಕ್ಕೆ ಬಂದಿತು. ಅವರು ಶಸ್ತ್ರಚಿಕಿತ್ಸೆ ಮತ್ತು ಅಂಗರಚನಾಶಾಸ್ತ್ರದಂತಹ ವಿಷಯಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ್ದಾರೆ. .

    MORE
    GALLERIES

  • 57

    UPSC Success Story: ಸುದೀರ್ಘ 14 ಗಂಟೆಗಳ ಡ್ಯೂಟಿ ಜೊತೆಗೆ ಮೊದಲ ಪ್ರಯತ್ನದಲ್ಲೇ IAS ಆದ ಅಕ್ಷಿತಾ

    ಪಂಜಾಬ್ ಕೇಡರ್ ಐಎಎಸ್ ಅಧಿಕಾರಿ ಅಕ್ಷಿತಾ ಗುಪ್ತಾ ಅವರು 2020 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅಖಿಲ ಭಾರತ 69 ರ್ಯಾಂಕ್ ತೆಗೆದಿದ್ದಾರೆ.

    MORE
    GALLERIES

  • 67

    UPSC Success Story: ಸುದೀರ್ಘ 14 ಗಂಟೆಗಳ ಡ್ಯೂಟಿ ಜೊತೆಗೆ ಮೊದಲ ಪ್ರಯತ್ನದಲ್ಲೇ IAS ಆದ ಅಕ್ಷಿತಾ

    ಎಂಬಿಬಿಎಸ್ನ ಮೂರನೇ ವರ್ಷದಲ್ಲಿ ಅಕ್ಷಿತಾ ಯುಪಿಎಸ್ ಸಿಗೆ ತಯಾರಿ ಆರಂಭಿಸಿದರು. ಸ್ಮಾರ್ಟ್ ತಂತ್ರವನ್ನು ಅಳವಡಿಸಿಕೊಂಡು, ಅವರು ಯುಪಿಎಸ್ ಸಿ ಮೇನ್ಸ್ ನಲ್ಲಿ ಐಚ್ಛಿಕ ವಿಷಯವಾದ ವೈದ್ಯಕೀಯ ವಿಜ್ಞಾನದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದರು.

    MORE
    GALLERIES

  • 77

    UPSC Success Story: ಸುದೀರ್ಘ 14 ಗಂಟೆಗಳ ಡ್ಯೂಟಿ ಜೊತೆಗೆ ಮೊದಲ ಪ್ರಯತ್ನದಲ್ಲೇ IAS ಆದ ಅಕ್ಷಿತಾ

    ಐಎಎಸ್ ಡಾ.ಅಕ್ಷಿತಾ ಗುಪ್ತಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಟ್ವಿಟರ್ ನಲ್ಲಿ 18000 ಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ 23 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

    MORE
    GALLERIES