ಪರೀಕ್ಷೆಯಲ್ಲಿ ಪಾಸ್ ಆಗಲು ಕೋಚಿಂಗ್ ಪಡೆಯಲೇಬೇಕು ಅಂತೇನು ಇಲ್ಲ ಅಂತಾರೆ ಹರಿರಾಮ್ ಶಂಕರ್. ನಾನು ಕೂಡ ಕೋಚಿಂಗ್ ಗಾಗಿ ದೆಹಲಿ, ಚೆನ್ನೈಗೆ ಹೋಗಿದ್ದೆ. ಆದರೆ ಅದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಸ್ವಯಂ ಅಧ್ಯಯನದಿಂದಲೇ ನನಗೆ ಯಶಸ್ಸು ಸಿಕ್ಕಿತು. ಹಾಗಾಂತ ಕೋಚಿಂಗ್ ಪಡೆಯುವುದು ತಪ್ಪು ಅಂತೇನು ಇಲ್ಲ, ಐಚ್ಛಿಕ ವಿಷಯಗಳಿಗೆ ಕೋಚಿಂಗ್ ಪಡೆಯಬಹುದು ಎಂದಿದ್ದಾರೆ.