ಇವರು ಕಠಿಣ ಪರಿಸ್ಥಿತಿಗಳನ್ನು ನಿವಾರಿಸಿ UPSC ಪರೀಕ್ಷೆಯನ್ನು ಭೇದಿಸಿದ್ದಾರೆ. ಕಠಿಣ ಪರಿಶ್ರಮ, ಸಂಕಲ್ಪ ಮತ್ತು ಅಧ್ಯಯನ ಮನೋಭಾವದ ಬಲದಿಂದ ತಮ್ಮ ಗುರಿಯನ್ನು ಸಾಧಿಸಿದ್ದಾರೆ. ದುಬಾರಿ ಪುಸ್ತಕಗಳು ಅಥವಾ ಖಾಸಗಿ ತರಬೇತಿಯನ್ನು ಪಡೆಯಲು ಇವರಿಗೆ ಸಾಧ್ಯವಾಗಲಿಲ್ಲ, ಆದರೂ UPSC ಅನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಧಿಕಾರಿಗಳ ಕಥೆಗಳು ಖಂಡಿತವಾಗಿಯೂ ನಿಮಗೆ ಸ್ಫೂರ್ತಿ ನೀಡುತ್ತದೆ.
1) ಅಂಶುಮಾನ್ ರಾಜ್: ಇವರು ಬಿಹಾರದ ಬಕ್ಸಾರ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. 10ನೇ ತರಗತಿವರೆಗೆ ಇವರ ಮನೆಯಲ್ಲಿ ವಿದ್ಯುತ್ ಇರಲಿಲ್ಲ. ಹಾಗಾಗಿ ರಾತ್ರಿ ಸೀಮೆಎಣ್ಣೆ ದೀಪದ ಬೆಳಕಿನಲ್ಲೇ ಓದುತ್ತಿದ್ದರು. ಕುಟುಂಬದಲ್ಲಿನ ಹಣಕಾಸು ಸಮಸ್ಯೆಯಿಂದ ಯುಪಿಎಸ್ ಸಿ ಪರೀಕ್ಷೆಗಾಗಿ ಯಾವುದೇ ಕೋಚಿಂಗ್ ತರಗತಿಗಳನ್ನು ತೆಗೆದುಕೊಳ್ಳಲಿಲ್ಲ. ನಾಲ್ಕನೇ ಪ್ರಯತ್ನದಲ್ಲಿ UPSC ತೇರ್ಗಡೆಯಾದರು, IAS ಅಧಿಕಾರಿಯಾಗಬೇಕೆಂಬ ಅವರ ಕನಸು ನನಸಾಯಿತು.
ಇಂಜಿನಿಯರಿಂಗ್ ಮುಗಿಸಿ ಐಎಎಸ್ ಆಗಲು ಯುಪಿಎಸ್ ಸಿಗೆ ತಯಾರಿ ಆರಂಭಿಸಿದರು. ಕೆಲ ಕಾಲ ಸೇಂಟ್ ಥಾಮಸ್ ಮೌಂಟ್ ನಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಪಾಠ ಮಾಡಿದರು. ತನ್ನ ಎಂಟೆಕ್ ಪದವಿಯನ್ನು ಸಹ ಪೂರ್ಣಗೊಳಿಸಿ, 2017 ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ 101ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡರು. (ಪ್ರಾತಿನಿಧಿಕ ಚಿತ್ರ)