ಐಪಿಎಸ್ ತೃಪ್ತಿ ಭಟ್ ಅವರು ಪಂತನಗರ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿದ್ದಾರೆ. ಇದಾದ ನಂತರ ಬೆಂಗಳೂರಿನ ಇಸ್ರೋದಲ್ಲಿ ಸೈಂಟಿಸ್ಟ್ ಸಿ ಹುದ್ದೆಯ ಸೇರಿದಂತೆ ಆರು ಸರ್ಕಾರಿ ಮತ್ತು ಸರ್ಕಾರೇತರ ಪ್ರತಿಷ್ಠಿತ ಸಂಸ್ಥೆಗಳಿಂದ ಅವರಿಗೆ ಉದ್ಯೋಗದ ಆಫರ್ ಗಳು ಬಂದವು. ಎಲ್ಲವನ್ನೂ ತಿರಸ್ಕರಿಸಿ ಐಪಿಎಸ್ ಆಗಲು ಆದ್ಯತೆ ನೀಡಿದ್ದರು.