ಐಎಎಸ್ ರೋಮನ್ ಸೈನಿ ಮಧ್ಯಪ್ರದೇಶ ಕೇಡರ್ ಗೆ ಸೇರಿದವರು. ಅನ್ಸಾರ್ ಅಹ್ಮದ್ ಶೇಖ್ ನಂತರ ಇವರು ದೇಶದ ಅತ್ಯಂತ ಕಿರಿಯ ಐಎಎಸ್ ಎನಿಸಿಕೊಂಡರು. ರೋಮನ್ ಸೈನಿ ಕೇವಲ 22 ನೇ ವಯಸ್ಸಿನಲ್ಲಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಖಿಲ ಭಾರತ 18 ನೇ ಶ್ರೇಣಿಯೊಂದಿಗೆ ಉತ್ತೀರ್ಣರಾದರು. 2013 ರ ಬ್ಯಾಚ್ ಐಎಎಸ್ ಆಗಿರುವ ರೋಮನ್ ಸೈನಿ ಅವರು 2015 ರಲ್ಲಿ ತಮ್ಮ ಸೇವೆಗೆ ರಾಜೀನಾಮೆ ನೀಡಿದರು. ಶೈಕ್ಷಣಿಕ ತಂತ್ರಜ್ಞಾನ ಕಂಪನಿಯಾದ ಅನಾಕಾಡೆಮಿಯನ್ನು ಪ್ರಾರಂಭಿಸಿದರು.