UPSC Exam 2023: ಮೇ 28ರಂದು ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ: ಈಗಿನಿಂದಲೇ ತಯಾರಿ ಈ ರೀತಿ ಇರಲಿ
UPSC ಪರೀಕ್ಷೆಯನ್ನು ದೇಶದ ಪ್ರತಿಷ್ಠಿತ ಪರೀಕ್ಷೆ ಎನ್ನಲಾಗುತ್ತೆ. ಈಗಾಗಲೇ 2023ನೇ ಸಾಲಿನ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗಿದೆ. ಲಕ್ಷಾಂತರ ಅಭ್ಯರ್ಥಿಗಳು ಭರವಸೆಯೊಂದಿಗೆ ಪರೀಕ್ಷೆಯನ್ನು ಎದುರು ನೋಡುತ್ತಿದ್ದಾರೆ. ಮೇ 28ರಂದು ಪ್ರಿಲಿಮ್ಸ್ ಪರೀಕ್ಷೆ ನಡೆಯಲಿದೆ. ಈಗಿನಿಂದಲೇ ಯಾವ ರೀತಿ ಪರೀಕ್ಷೆಗೆ ತಯಾರಿ ನಡೆಸಬೇಕು ಎಂಬ ಮಾಹಿತಿ ಇಲ್ಲಿದೆ.
ಯುಪಿಎಸ್ ಸಿ 3 ಹಂತಗಳಲ್ಲಿ ನಡೆಯುವ ಪರೀಕ್ಷೆಯಾಗಿದೆ. UPSC ಪ್ರಿಲಿಮ್ಸ್ ಪರೀಕ್ಷೆ, UPSC ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಸುತ್ತು. ಈ ಮೂರು ಹಂತಗಳಲ್ಲಿ ಉತ್ತಮ ಅಂಕ ಗಳಿಸಿದ ಅಭ್ಯರ್ಥಿಗಳನ್ನು IAS, IPS ಅಥವಾ IFS ಸೇವೆಗೆ ಆಯ್ಕೆ ಮಾಡಲಾಗುತ್ತದೆ. (ಪ್ರಾತಿನಿಧಿಕ ಚಿತ್ರ)
2/ 8
ಅನೇಕರು ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಬೇಕು, ದೇಶ ಸೇವೆ ಮಾಡಬೇಕು ಎಂದು ಹಾತೊರೆಯುತ್ತಾರೆ. ಆದರೆ ಅದಕ್ಕೆ ತಯಾರಿ ನಡೆಸಬೇಕು. ಸರಿಯಾದ ಅಧ್ಯಯನ ಕ್ರಮವನ್ನು ಪಾಲಿಸಿದರೆ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು. ಹಾಗಾದರೆ ಅಧ್ಯಯನವನ್ನು ನಿಖರವಾಗಿ ಎಲ್ಲಿಂದ ಪ್ರಾರಂಭಿಸಬೇಕು? ಬಹಳಷ್ಟು ಜನರಿಗೆ ಇದರ ಬಗ್ಗೆ ತಿಳಿದಿಲ್ಲ. (ಪ್ರಾತಿನಿಧಿಕ ಚಿತ್ರ)
3/ 8
ಅದಕ್ಕಾಗಿಯೇ ಇಂದು ನಾವು UPSC ಪರೀಕ್ಷೆಗೆ ತಯಾರಿ ಮತ್ತು IAS ಆಗಲು ಕೆಲವು ವಿಶೇಷ ಸಲಹೆಗಳನ್ನು ನೀಡಲಿದ್ದೇವೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಶೇಷ ಯೋಜನೆ ಮತ್ತು ಸಿದ್ಧತೆ ಅಗತ್ಯವಿದೆ. ಆತ್ಮವಿಶ್ವಾಸವೂ ಬೇಕು. (ಪ್ರಾತಿನಿಧಿಕ ಚಿತ್ರ)
4/ 8
ಐಎಎಸ್ ಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳು ತಯಾರಿಯನ್ನು ಪ್ರಾರಂಭಿಸುವ ಮೊದಲು ಮಾನಸಿಕವಾಗಿ ಮತ್ತು ದೈಹಿಕವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು. ನೀವು ಮಾನಸಿಕವಾಗಿ ಸಿದ್ಧರಾಗಿದ್ದರೆ, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಆತ್ಮವಿಶ್ವಾಸ ನಿಮ್ಮಲ್ಲಿರುತ್ತದೆ. ಆಗ ನೀವು ಐಎಎಸ್ ಆಗಲು ಸಾಧ್ಯವಾಗುತ್ತದೆ. (ಸಾಂದರ್ಭಿಕ ಚಿತ್ರ)
5/ 8
ಐಎಎಸ್ ಆಗಲು ಗುರಿ ಸೆಟ್ ಮಾಡುವುದು ಹಾಗೂ ಪರಿಣಾಮಕಾರಿಯಾಗಿ ಸಮಯ ನಿರ್ವಹಿಸುವ ಅಗತ್ಯವಿರುತ್ತದೆ. ನೀವು ಕೆಲಸ ಮಾಡುತ್ತಿದ್ದರೆ, ಅಧ್ಯಯನ ಮಾಡಲು ಸಮಯವನ್ನು ಹೇಗೆ ವಿನಿಯೋಗಿಸುತ್ತೀರಿ ಎಂಬುದನ್ನು ವಿಶ್ಲೇಷಿಸಬೇಕು.
6/ 8
ಐಎಎಸ್ ಅಧಿಕಾರಿಯಾಗಲು ವೇಳಾಪಟ್ಟಿಯನ್ನು ಸಿದ್ಧಪಡಿಸುವುದು ಸಹ ಅಗತ್ಯವಾಗಿದೆ. ಪಠ್ಯಕ್ರಮವು ಯಾವುದೇ ಪರೀಕ್ಷೆಯ ಆತ್ಮವಾಗಿದೆ. ಆದ್ದರಿಂದ ಸಂಪೂರ್ಣ ಪಠ್ಯಕ್ರಮವನ್ನು ತಿಳಿದುಕೊಂಡು ಅಧ್ಯಯನ ಮಾಡುವುದು ಮುಖ್ಯ. ಪುಸ್ತಕಗಳನ್ನು ಓದುವ ಮೊದಲು ಪಠ್ಯಕ್ರಮವನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯ.
7/ 8
ಅಭ್ಯರ್ಥಿಗಳು UPSC ಸಿವಿಲ್ ಸರ್ವೀಸಸ್ ಪರೀಕ್ಷೆಯ ಪಠ್ಯಕ್ರಮವನ್ನು ಅನುಸರಿಸಬೇಕು. ಪಠ್ಯಕ್ರಮವನ್ನು ತಿಳಿದುಕೊಳ್ಳುವುದು ನಿಮಗೆ ಸಂಬಂಧಿತ ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಯಾವ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂಬ ಅಂದಾಜು ಸಿಗುತ್ತೆ.
8/ 8
ಈಗ ನಾವು ಜನವರಿ ತಿಂಗಳಿನಲ್ಲಿದ್ದು, ಶ್ರದ್ಧೆಯಿಂದ ತಯಾರಿ ನಡೆಸಿದರೆ ಮೇನಲ್ಲಿ ನಡೆಯಲಿರುವ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು. ಇನ್ನು ಹಲವು ಯುಪಿಎಸ್ ಸಿ ಸಾಧಕರು ಸಲಹೆ ನೀಡುವಂತೆ ಪ್ರಿಲಿಮ್ಸ್ ಹಾಗೂ ಮುಖ್ಯ ಪರೀಕ್ಷೆಗೆ ಒಟ್ಟಿಗೆ ಅಭ್ಯಾಸ ನಡೆಸುವುದು ಸೂಕ್ತ.