UPSC Prelims ಪರೀಕ್ಷೆಗೆ ಎರಡೇ ವಾರ ಬಾಕಿ; ಕೊನೆ ದಿನಗಳ ತಯಾರಿ ಈ ರೀತಿ ಇರಲಿ

ಈ ವರ್ಷದ ಯುಪಿಎಸ್ ಸಿ ಪ್ರಿಲಿಮ್ಸ್ ಪರೀಕ್ಷೆ ಮೇ 28ರಂದು ನಡೆಯಲಿದೆ. ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕೆಂಬ ಕನಸು ಹೊತ್ತ ಸಾವಿರಾರು ಅಭ್ಯರ್ಥಿಗಳು ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ. ಅಂಥವರಿಗೆ ಇನ್ನು 2 ವಾರ ಮಾತ್ರ ಬಾಕಿ ಇದೆ. ಈ ಕೊನೆ ದಿನಗಳಲ್ಲಿ ತಯಾರಿ ಹೇಗಿರಬೇಕು ಎಂದು ಇಲ್ಲಿ ತಿಳಿಸಲಾಗಿದೆ.

First published:

  • 17

    UPSC Prelims ಪರೀಕ್ಷೆಗೆ ಎರಡೇ ವಾರ ಬಾಕಿ; ಕೊನೆ ದಿನಗಳ ತಯಾರಿ ಈ ರೀತಿ ಇರಲಿ

    ದೈಹಿಕವಾಗಿ, ಮಾನಸಿಕವಾಗಿಯೂ ದೃಢವಾಗಿರುವುದು ಮುಖ್ಯ. ಊಟ-ನಿದ್ರೆ ತಪ್ಪಿಸಿ ಓದುವ ತಪ್ಪು ಮಾಡಬೇಡಿ. ತಪಸ್ಸಿನಂತೆ ಪರೀಕ್ಷೆಗೆ ತಯಾರಿ ನಡೆಸಬೇಕೆಂದರೆ ಮಾನಸಿಕ ಶಾಂತಿ ಮುಖ್ಯ. ಯೋಗ-ಧ್ಯಾನದ ಅಭ್ಯಾಸವಿದ್ದರೆ ಒಳ್ಳೆಯದು.

    MORE
    GALLERIES

  • 27

    UPSC Prelims ಪರೀಕ್ಷೆಗೆ ಎರಡೇ ವಾರ ಬಾಕಿ; ಕೊನೆ ದಿನಗಳ ತಯಾರಿ ಈ ರೀತಿ ಇರಲಿ

    ಪರೀಕ್ಷಾ ವಿಧಾನ, ಕಟ್ ಆಫ್ ಅಂಕಗಳ ಬಗ್ಗೆ ನಿಖರ ಮಾಹಿತಿ ಪಡೆಯಿರಿ. 5-6 ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡಿದರೆ ನಿಮಗೆ ಪರೀಕ್ಷೆಯ ಬಗ್ಗೆ ಸ್ಪಷ್ಟತೆ ಬರುತ್ತದೆ.

    MORE
    GALLERIES

  • 37

    UPSC Prelims ಪರೀಕ್ಷೆಗೆ ಎರಡೇ ವಾರ ಬಾಕಿ; ಕೊನೆ ದಿನಗಳ ತಯಾರಿ ಈ ರೀತಿ ಇರಲಿ

    ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸೂಕ್ತ ವೇಳಾಪಟ್ಟಿ, ತಂತ್ರ ಮುಖ್ಯ. ದಿನಕ್ಕೆ ಎಷ್ಟು ಗಂಟೆ ಓದಬೇಕು, ಯಾವ ವಿಷಯಗಳನ್ನು ಓದಬೇಕು, ಯಾವಾಗ ವಿಶ್ರಾಂತಿ ಪಡೆಯಬೇಕು ಎಂದು ನಿರ್ಧರಿಸಿ. ವೇಳಾಪಟ್ಟಿಗೆ ಬದ್ಧರಾಗಿ ನಡೆದುಕೊಳ್ಳಿ.

    MORE
    GALLERIES

  • 47

    UPSC Prelims ಪರೀಕ್ಷೆಗೆ ಎರಡೇ ವಾರ ಬಾಕಿ; ಕೊನೆ ದಿನಗಳ ತಯಾರಿ ಈ ರೀತಿ ಇರಲಿ

    ಕೊನೆ ಕ್ಷಣದಲ್ಲಿ ಹೆಚ್ಚಿನ ಪುಸ್ತಕಗಳ ಅಧ್ಯಯನ ಗೊಂದಲವನ್ನು ಸೃಷ್ಟಿಸುತ್ತದೆ. ಹಾಗಾಗಿ ಯಾವ ಪುಸ್ತಕ, ಇಂಟರ್ನೆಟ್ ನಲ್ಲಿ ಎಲ್ಲಿ, ಯಾವ ಮಾಹಿತಿ ಪಡೆಯಬೇಕೆಂಬ ಬಗ್ಗೆ ಸ್ಪಷ್ಟತೆ ಇರಲಿ.

    MORE
    GALLERIES

  • 57

    UPSC Prelims ಪರೀಕ್ಷೆಗೆ ಎರಡೇ ವಾರ ಬಾಕಿ; ಕೊನೆ ದಿನಗಳ ತಯಾರಿ ಈ ರೀತಿ ಇರಲಿ

    ಈ ಕೊನೆ ದಿನಗಳಲ್ಲಿ ಹೆಚ್ಚಾಗಿ ಮಾದರಿ ಪ್ರಶ್ನೆಗಳನ್ನು ಬಗೆಹರಿಸಿ. ಮಾಕ್ ಟೆಸ್ಟ್ ಗಳನ್ನು ನಿರಂತರವಾಗಿ ತೆಗೆದುಕೊಂಡರೆ ನಿಮ್ಮ ಪ್ಲಸ್ ಪಾಯಿಂಟ್, ನಿಮ್ಮ ಮೈನಸ್ ಪಾಯಿಂಟ್ ತಿಳಿಯುತ್ತೆ.

    MORE
    GALLERIES

  • 67

    UPSC Prelims ಪರೀಕ್ಷೆಗೆ ಎರಡೇ ವಾರ ಬಾಕಿ; ಕೊನೆ ದಿನಗಳ ತಯಾರಿ ಈ ರೀತಿ ಇರಲಿ

    ಇಷ್ಟು ದಿನ ಮಾಡಿಕೊಂಡಿರುವ ಟಿಪ್ಪಣಿಗಳನ್ನು ಪುನರ್ ಅಭ್ಯಾಸ ಮಾಡಿ. ಈ ಸಮಯವನ್ನು ರಿವಿಷನ್ ಗಾಗಿ ಮೀಸಲಿಡುವುದು ಸೂಕ್ತ. ಏನನ್ನು ಓದಿದ್ದೀರೋ ಅದು ಪರೀಕ್ಷೆ ಸಮಯದಲ್ಲಿ ನೆನಪಿನಲ್ಲಿ ಉಳಿಯುವುದು ಮುಖ್ಯ.

    MORE
    GALLERIES

  • 77

    UPSC Prelims ಪರೀಕ್ಷೆಗೆ ಎರಡೇ ವಾರ ಬಾಕಿ; ಕೊನೆ ದಿನಗಳ ತಯಾರಿ ಈ ರೀತಿ ಇರಲಿ

    ಸಮಚಿತ್ತದಿಂದ ಇರಿ, ಪರೀಕ್ಷೆಯ ಭಯ ಬೇಡ. ಆತ್ಮವಿಶ್ವಾಸದಿಂದ ಇದ್ದರೆ ಅರ್ಧ ಗೆಲುವು ಸಿಕ್ಕಂತೆಯೇ. ಹಾಗಾಗಿ ನಿಮಗೆ ಗೊತ್ತಿಲ್ಲದ, ಓದಿಲ್ಲದ ವಿಷಯಗಳ ಬಗ್ಗೆ ಅಳುಕು ಬೇಡ. ಚೆನ್ನಾಗಿ ಓದಿರುವ ವಿಷಯಗಳ ಬಗ್ಗೆ ಆತ್ಮವಿಶ್ವಾಸದಿಂದ ಇರಿ. (ಸಾಂದರ್ಭಿಕ ಚಿತ್ರ)

    MORE
    GALLERIES