MBA Course ಮಾಡಲು ಮುಂದಾಗಿದ್ದೀರಾ? ಈ ಟಾಪ್ ಇನ್ಸ್ಟಿಟ್ಯೂಟ್​ಗಳಲ್ಲಿ ಮಾಡಿದ್ರೆ ಅದರ ಮೌಲ್ಯವೇ ಬೇರೆ

ಬಹುತೇಕರು MBA ಕೋರ್ಸ್ ಮಾಡಲು ಬಯಸುತ್ತಾರೆ. ಉದ್ಯೋಗದ ಜೊತೆಗೆ ಹೆಚ್ಚಿನದ್ದನ್ನು ಕಲಿಯಲು, ಸ್ಕಿಲ್ ಅಪ್ ಗ್ರೇಟ್ ಮಾಡಿಕೊಳ್ಳಲು MBA ಮಾಡಲು ಅನೇಕರು ಮುಂದಾಗುತ್ತಾರೆ. ಈ ಸ್ನಾತ್ತಕೋತ್ತರ ಪದವಿಯನ್ನು ಮಾಡುವುದು ಮಾತ್ರವಲ್ಲ, ಯಾವ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಿಂದ ಮಾಡುತ್ತೀರಿ ಎಂಬುವುದು ಸಹ ಮುಖ್ಯವಾಗುತ್ತೆ.

First published:

  • 18

    MBA Course ಮಾಡಲು ಮುಂದಾಗಿದ್ದೀರಾ? ಈ ಟಾಪ್ ಇನ್ಸ್ಟಿಟ್ಯೂಟ್​ಗಳಲ್ಲಿ ಮಾಡಿದ್ರೆ ಅದರ ಮೌಲ್ಯವೇ ಬೇರೆ

    ಆ ನಿಟ್ಟಿನಲ್ಲಿ ದೇಶದ ಟಾಪ್ 10 ಮ್ಯಾನೇಜ್ ಮೆಂಟ್ ಕಾಲೇಜುಗಳ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ 6 ಐಐಎಂಗಳು, 2 ಐಐಟಿಗಳು, 1 ಎನ್ಐಟಿ ಮತ್ತು 1 ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸೇರಿವೆ.

    MORE
    GALLERIES

  • 28

    MBA Course ಮಾಡಲು ಮುಂದಾಗಿದ್ದೀರಾ? ಈ ಟಾಪ್ ಇನ್ಸ್ಟಿಟ್ಯೂಟ್​ಗಳಲ್ಲಿ ಮಾಡಿದ್ರೆ ಅದರ ಮೌಲ್ಯವೇ ಬೇರೆ

    ಉನ್ನತ ನಿರ್ವಹಣಾ ಶಾಲೆಗಳ ಈ ಪಟ್ಟಿಯು NIRF ಶ್ರೇಯಾಂಕ 2022 ರ ಪ್ರಕಾರವಾಗಿದೆ. ಈ ಪಟ್ಟಿಯನ್ನು nirfindia.org ನಲ್ಲಿ ನೀಡಲಾಗಿದೆ. ಈ ಮ್ಯಾನೇಜ್ ಮೆಂಟ್ ಕಾಲೇಜುಗಳು ಎಂಬಿಎ ಕೋರ್ಸ್ಗಳಿಗೆ ಹೆಸರುವಾಸಿಯಾಗಿದೆ.

    MORE
    GALLERIES

  • 38

    MBA Course ಮಾಡಲು ಮುಂದಾಗಿದ್ದೀರಾ? ಈ ಟಾಪ್ ಇನ್ಸ್ಟಿಟ್ಯೂಟ್​ಗಳಲ್ಲಿ ಮಾಡಿದ್ರೆ ಅದರ ಮೌಲ್ಯವೇ ಬೇರೆ

    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಹಮದಾಬಾದ್ NIRF ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದೆ. IIM ಗಳಲ್ಲಿ MBA ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (CAT) ಅಗತ್ಯವಿದೆ. ಇದರಲ್ಲಿ ಉತ್ತೀರ್ಣರಾದ ನಂತರ ಅಭ್ಯರ್ಥಿಗಳು ಸಂದರ್ಶನವನ್ನು ನೀಡಬೇಕು. ವಿದ್ಯಾರ್ಥಿಗಳ ಅಂತಿಮ ಆಯ್ಕೆಯು CAT ಸ್ಕೋರ್, ಹಿಂದಿನ ಶೈಕ್ಷಣಿಕ ಸಾಧನೆ ಮತ್ತು ಸಂದರ್ಶನದ ಕಾರ್ಯಕ್ಷಮತೆಯನ್ನು ಆಧರಿಸಿರುತ್ತದೆ.

    MORE
    GALLERIES

  • 48

    MBA Course ಮಾಡಲು ಮುಂದಾಗಿದ್ದೀರಾ? ಈ ಟಾಪ್ ಇನ್ಸ್ಟಿಟ್ಯೂಟ್​ಗಳಲ್ಲಿ ಮಾಡಿದ್ರೆ ಅದರ ಮೌಲ್ಯವೇ ಬೇರೆ

    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು 2022 ರ NIRF ಶ್ರೇಯಾಂಕದಲ್ಲಿ 2 ನೇ ಸ್ಥಾನದಲ್ಲಿದೆ. IIM ಬೆಂಗಳೂರಿನಲ್ಲಿ MBA ಗೆ ಪ್ರವೇಶವು ಮಾನ್ಯವಾದ CAT ಸ್ಕೋರ್, ವೈಯಕ್ತಿಕ ಸಂದರ್ಶನ ಮತ್ತು ಲಿಖಿತ ಆಪ್ಟಿಟ್ಯೂಡ್ ಟೆಸ್ಟ್ (WAT) ಸುತ್ತಿನ ಆಧಾರದ ಮೇಲೆ ಇರುತ್ತದೆ. ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಭಾರತೀಯ ವಿದ್ಯಾರ್ಥಿಗಳು CAT ನೀಡಬೇಕು. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು GMAT/GRE ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿದೆ.

    MORE
    GALLERIES

  • 58

    MBA Course ಮಾಡಲು ಮುಂದಾಗಿದ್ದೀರಾ? ಈ ಟಾಪ್ ಇನ್ಸ್ಟಿಟ್ಯೂಟ್​ಗಳಲ್ಲಿ ಮಾಡಿದ್ರೆ ಅದರ ಮೌಲ್ಯವೇ ಬೇರೆ

    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಲ್ಕತ್ತಾ NIRF ಶ್ರೇಯಾಂಕದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡಿದೆ. MBA ಪ್ರವೇಶಕ್ಕಾಗಿ CAT ಅಂಕಗಳನ್ನು ಇಲ್ಲಿ ನೋಡಲಾಗಿದೆ. ಜೊತೆಗೆ, WAT ಅಂದರೆ ಬರವಣಿಗೆಯ ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ನಡೆಸಲಾಗುತ್ತದೆ. ಎಲ್ಲದರ ಆಧಾರದ ಮೇಲೆ ಅಂತಿಮ ಪ್ರವೇಶ ನೀಡಲಾಗುತ್ತದೆ.

    MORE
    GALLERIES

  • 68

    MBA Course ಮಾಡಲು ಮುಂದಾಗಿದ್ದೀರಾ? ಈ ಟಾಪ್ ಇನ್ಸ್ಟಿಟ್ಯೂಟ್​ಗಳಲ್ಲಿ ಮಾಡಿದ್ರೆ ಅದರ ಮೌಲ್ಯವೇ ಬೇರೆ

    ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ NIRF ಶ್ರೇಯಾಂಕದಲ್ಲಿ 4 ನೇ ಸ್ಥಾನದಲ್ಲಿದೆ. ಐಐಟಿ ದೆಹಲಿಯ ಎಂಬಿಎ ಕೋರ್ಸ್ ಕೂಡ ಬಹಳ ಪ್ರಸಿದ್ಧವಾಗಿದೆ. ಇಲ್ಲಿಂದ MBA ಗೆ CAT ಪರೀಕ್ಷೆ ಮಾತ್ರ ಅಗತ್ಯವಿದೆ. ಜೊತೆಗೆ ಪದವಿಯಲ್ಲಿ ಶೇ.60 ಅಂಕ ಪಡೆದಿರಬೇಕು. ಮೀಸಲಾತಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ನಿಯಮಾನುಸಾರ ಅಂಕಗಳಲ್ಲಿ ಸಡಿಲಿಕೆ ನೀಡಲಾಗುತ್ತದೆ. CAT ಹೊರತುಪಡಿಸಿ, ಬರವಣಿಗೆ ಸಾಮರ್ಥ್ಯ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ನಡೆಸಲಾಗುತ್ತದೆ.

    MORE
    GALLERIES

  • 78

    MBA Course ಮಾಡಲು ಮುಂದಾಗಿದ್ದೀರಾ? ಈ ಟಾಪ್ ಇನ್ಸ್ಟಿಟ್ಯೂಟ್​ಗಳಲ್ಲಿ ಮಾಡಿದ್ರೆ ಅದರ ಮೌಲ್ಯವೇ ಬೇರೆ

    ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕೋಝಿಕೋಡ್ ನಿರ್ಫ್ ರ್ಯಾಂಕಿಂಗ್ನಲ್ಲಿ 5 ನೇ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ, ಇತರ IIM ಗಳಂತೆ, MBA ಗಾಗಿ ಪ್ರವೇಶ ಮಾನದಂಡಗಳು CAT ಪರೀಕ್ಷೆ, VAT ಮತ್ತು ಸಂದರ್ಶನ ಇರುತ್ತೆ.

    MORE
    GALLERIES

  • 88

    MBA Course ಮಾಡಲು ಮುಂದಾಗಿದ್ದೀರಾ? ಈ ಟಾಪ್ ಇನ್ಸ್ಟಿಟ್ಯೂಟ್​ಗಳಲ್ಲಿ ಮಾಡಿದ್ರೆ ಅದರ ಮೌಲ್ಯವೇ ಬೇರೆ

    ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಲಕ್ನೋ 6ನೇ ಸ್ಥಾನದಲ್ಲಿದೆ. ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು CAT ಪರೀಕ್ಷೆ, ವ್ಯಾಟ್ ಮತ್ತು ಸಂದರ್ಶನದ ಅಗತ್ಯವಿದೆ. ಇದಲ್ಲದೆ, ಎಚ್ ಎಸ್ ಸಿ ಅಂಕಗಳು, ಪದವಿ ಅಂಕಗಳು, ಕೆಲಸದ ಅನುಭವ, ಶೈಕ್ಷಣಿಕದಲ್ಲಿ ವೈವಿಧ್ಯತೆಯ ಅಂಶವನ್ನು (ಡಿಎಫ್ ಎ) ಮಾನದಂಡಗಳಲ್ಲಿ ನೋಡಲಾಗುತ್ತದೆ.

    MORE
    GALLERIES