3) ಫಾರಿನ್ ಲಾಂಗ್ವೇಜ್ ಕೋರ್ಸ್ ಮಾಡಬಹುದು: ಪ್ರಸ್ತುತ ವಿದೇಶಿ ಭಾಷೆಗಳ ಜ್ಞಾನ ಹೊಂದಿರುವ ಜನರಿಗೆ ಸಾಕಷ್ಟು ಬೇಡಿಕೆಯಿದೆ. ವಿದೇಶಿ ಭಾಷೆಯಲ್ಲಿ ಡಿಪ್ಲೊಮಾದೊಂದಿಗೆ ನೀವು ಶಾಲೆಯಲ್ಲಿ ಭಾಷಾಂತರಕಾರ, ಮಾರ್ಕೆಟಿಂಗ್ ಮ್ಯಾನೇಜರ್ ಅಥವಾ ಆ ಭಾಷೆಯ ಶಿಕ್ಷಕರಾಗಿ ಕೆಲಸವನ್ನು ಸುಲಭವಾಗಿ ಪಡೆಯಬಹುದು. ಪ್ರಸ್ತುತ ಚೈನೀಸ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ಜಪಾನೀಸ್ ಭಾಷೆ ಬಲ್ಲವರಿಗೆ ಹೆಚ್ಚಿನ ಬೇಡಿಕೆಯಿದೆ.
4) ಡಿಸೈನರ್: ಫ್ಯಾಷನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್, ಗ್ರಾಫಿಕ್ಸ್ ಡಿಸೈನಿಂಗ್ ಅಥವಾ ಜ್ಯುವೆಲ್ಲರಿ ಡಿಸೈನಿಂಗ್ ನಂತಹ ಯಾವುದೇ ರೀತಿಯ ಶಿಕ್ಷಣಕ್ಕಾಗಿ 6 ತಿಂಗಳಿಂದ 1 ವರ್ಷದವರೆಗೆ ಡಿಪ್ಲೊಮಾ ಇನ್ ಡಿಸೈನಿಂಗ್ ಕೋರ್ಸ್ ಗಳು ಲಭ್ಯವಿದೆ. ಅಂತಹ ಕೋರ್ಸ್ ನಂತರ ನೀವು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು ಅಥವಾ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆಯಬಹುದು.